More

    ಇಲ್ಲಿನ ಜನರು ಮನೆಯಲ್ಲಿ ಯಡಿಯೂರಪ್ಪ ಅವರ ಫೋಟೋ ಇಟ್ಟುಕೊಳ್ಳಬೇಕು; ಸಚಿವ ಆನಂದ್ ಸಿಂಗ್

    ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿರುವ ಸಚಿವ ಆನಂದ್ ಸಿಂಗ್, ವಿಜಯನಗರ ಜಿಲ್ಲೆ ರಚನೆ ಆಗುವ ನಿಟ್ಟಿನಲ್ಲಿ ನಡೆಸಿದ್ದ ಪ್ರಯತ್ನಗಳನ್ನು ನೆನಪಿಸಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಆ ಕುರಿತು ಮಾತನಾಡಿರುವ ಆನಂದ್ ಸಿಂಗ್, ಪಂಪಾ ವಿರೂಪಾಕ್ಷನ ಜತೆಗೆ ಶ್ರೀಕೃಷ್ಣನನ್ನೂ ಸ್ಮರಿಸಿಕೊಂಡಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ನಾನು ರಾಜೀನಾಮೆ ಕೊಟ್ಟ ನಂತರ ಇನ್ನುಳಿದ 16 ಜನ ಶಾಸಕರನ್ನು ಪಂಪಾ ವಿರೂಪಾಕ್ಷನೇ ಕಳಿಸಿದ. ಆ 16 ಜನರನ್ನು ಕಳಿಸಿ, ಬಿಜೆಪಿ ಸರ್ಕಾರ ರಚನೆ ಮಾಡು ಅಂದ. ಅವರೆಲ್ಲರೂ ಬಂದ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಯಿತು. ಆದರೆ ಆಮೇಲೆ ಮಂತ್ರಿ ಸ್ಥಾನದ ಬಗ್ಗೆ ಚರ್ಚೆಗಳು ಶುರುವಾದವು. ನನಗೆ ಆ ಮಂತ್ರಿ, ನನಗೆ ಈ ಮಂತ್ರಿ ಸ್ಥಾನ ಬೇಕು ಎಂದು ಒಳಗೊಳಗೇ ಚರ್ಚೆಗಳಾದವು. ಇವನ್ನೆಲ್ಲ ಹೇಳಿಕೊಂಡರೂ ಕಷ್ಟ, ಹೇಳಿಕೊಳ್ಳದಿದ್ದರೂ ಕಷ್ಟ. ಆದರೆ ಮಾಧ್ಯಮಗಳ ಮುಂದೆ ಬಂದಾಗ ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳುತ್ತೇವೆ ಎಂಬ ಗುಟ್ಟನ್ನೂ ಬಿಟ್ಟುಕೊಟ್ಟರು.

    ಆದರೆ ನಾನು ಮಾತ್ರ, ಸರ್ಕಾರ ರಚನೆಯಾದಾಗ ಮೊದಲು ಕೇಳಿದ್ದು ಮಂತ್ರಿ ಸ್ಥಾನವನ್ನಲ್ಲ. ವಿಜಯನಗರ ಜಿಲ್ಲೆ ಆಗಬೇಕು ಎಂಬದರ ಬಗ್ಗೆಯೇ ನನ್ನ ಆದ್ಯತೆ ಇದ್ದಿದ್ದು. ಕೃಷ್ಣನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಅಂದೂ ನಾನು ಜಿಲ್ಲೆ ಬೇಕು ಎಂದಿದ್ದೆ, ಆ ನಂತರವೂ ಜಿಲ್ಲೆ ಬೇಕು ಎಂದೇ ಹೇಳಿದ್ದೆ. ನಾನು ಮಂತ್ರಿಗಿರಿ ಕೇಳಲಿಲ್ಲ, ಸ್ವಾರ್ಥಕ್ಕೆ ಏನೂ ಕೇಳಲಿಲ್ಲ. ನನ್ನ ರಾಜಕೀಯ ಭವಿಷ್ಯ ಏನಾಗುತ್ತೋ ಆಗಲಿ ಎಂದು ನಾನು ಜಿಲ್ಲೆ ಬೇಕು ಎಂದೇ ಹೇಳಿದೆ. ಹೇಗಿದ್ದರೂ ಪಂಪಾ ವಿರೂಪಾಕ್ಷನ ಆಶೀರ್ವಾದ ಇದೆ ಎಂದು ಜಿಲ್ಲೆಯ ಬೇಡಿಕೆ ಇಟ್ಟೆ. ಅದನ್ನು ಪರಿಗಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಜಯನಗರ ಜಿಲ್ಲೆಯನ್ನು ಘೋಷಿಸಿದರು. ಅದೇ ಕಾರಣಕ್ಕೆ ಇಂದು ಪಶ್ಚಿಮ ತಾಲೂಕುಗಳ ಜನರೆಲ್ಲ ಯಡಿಯೂರಪ್ಪ ಅವರ ಫೋಟೋ ಮನೆಯಲ್ಲಿ ಹಾಕಿಕೊಳ್ಳಬೇಕು ಎಂದು ಸಚಿವ ಆನಂದ ಸಿಂಗ್ ಹೇಳಿದರು.

    ನನ್ನಿಂದ ಯಾರಿಗೂ ಮೋಸ ಆಗಲ್ಲ, ದಯವಿಟ್ಟು ನನ್ನ ನಂಬಿ ಎಂದು ಗೋಗರೆದವ ಕಿಡ್ನಿಯನ್ನೇ ಮಾರಾಟಕ್ಕಿಟ್ಟ!

    ತುಂಬು ಗರ್ಭಿಣಿಯನ್ನು ಜೀವಂತ ಸುಟ್ಟ, ಮಾಡಬಾರದ್ದನ್ನು ಮಾಡಿದ್ದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts