More

    ಈ ಥರ ‘ಕೂದಲೆಳೆಯ ಅಂತರದಲ್ಲಿ’ ಪ್ರಾಣಾಪಾಯದಿಂದ ಪಾರಾದ ಜಗತ್ತಿನ ಅತಿ ಹಿರಿಯ ಮಹಿಳೆ ಇವರು…

    ಬೆಂಗಳೂರು: ಹೌದು.. ಇವರು ಅಕ್ಷರಶಃ ಕೂದಲೆಳೆಯ ಅಂತರದಲ್ಲಿ ಪಾರಾದವರು. ಮಾತ್ರವಲ್ಲ, ಈ ರೀತಿ ‘ಕೂದಲೆಳೆಯ ಅಂತರದಲ್ಲಿ’ ಪ್ರಾಣಾಪಾಯದಿಂದ ಪಾರಾದ ಜಗತ್ತಿನ ಅತಿ ಹಿರಿಯ ಮಹಿಳೆ ಕೂಡ ಇವರೇ. ಅದರಲ್ಲೂ ಈಕೆಯ ಜೀವ ಉಳಿಸಿದ್ದು ಬೆಂಗಳೂರಿನ ನಾರಾಯಣ ಹೆಲ್ತ್​ನ ವೈದ್ಯರು.

    50 ವರ್ಷದ ಈ ಮಹಿಳೆ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಎಚ್​ಎಸ್​ಆರ್​ ಲೇಔಟ್​​ನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾವಿಸಿದ್ದರು. ಪರೀಕ್ಷಿಸಿದ ವೈದ್ಯರಿಗೆ ಇವರ ಕರುಳಲ್ಲಿ ಟ್ರೈಕೋಬೆಜೋರಸ್​ ಆಗಿರುವುದು ಗಮನಕ್ಕೆ ಬಂದಿತ್ತು. ಈ ಮಹಿಳೆಗೆ ಹೊಟ್ಟೆನೋವಿನ ಜತೆಗೆ ಮಲವಿಸರ್ಜನೆ ಕೂಡ ಸಮಸ್ಯೆ ಆಗಿತ್ತು. ಹೊಟ್ಟೆ ಸೇರಿದ್ದ ಕೂದಲು ಕರುಳಿನಲ್ಲಿ ಉಂಡೆಯಂತಾಗಿ ಸಿಕ್ಕಿಹಾಕಿಕಕೊಂಡಿದ್ದೇ ಸಮಸ್ಯೆಗೆ ಕಾರಣ. ಬಳಿಕ ಈಕೆಗೆ ಶಸ್ತ್ರಚಿಕಿತ್ಸೆ ಮಾಡಿ ಆ ಕೂದಲ ಉಂಡೆಯನ್ನು ವೈದ್ಯರು ತೆಗೆದಿದ್ದಾರೆ.

    ಇದನ್ನೂ ಓದಿ: ದಪ್ಪ ಇದ್ದರೆ ಮಕ್ಕಳಾಗದ ಸಮಸ್ಯೆ ಉಂಟಾದೀತು ಎಚ್ಚರ!

    ಟ್ರೈಕೋಬೆಜೋರಸ್ ಅಂದರೆ ಕೂದಲು ಸಿಕ್ಕಿಹಾಕಿಕೊಂಡಿದ್ದರಿಂದ ಆಗುವ ಈ ಸಮಸ್ಯೆ ಅತಿ ಅಪರೂಪ. ಆದರೆ ಇದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಈ ಸಮಸ್ಯೆಯಿಂದ ಬಳಲಿ ನಮ್ಮಲ್ಲಿಗೆ ಬಂದಿದ್ದ ಮಹಿಳೆಯನ್ನು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಸಮಸ್ಯೆಯನ್ನು ನಿವಾರಿಸಲಾಗಿದೆ. ಐದು ದಿನಗಳಲ್ಲಿ ಮಹಿಳೆ ಚೇತರಿಸಿಕೊಂಡಿದ್ದು, ಆಸ್ಪತ್ರಗೆ ದಾಖಲಾದ ಒಂದು ವಾರದಲ್ಲಿ ಡಿಸ್​ಚಾರ್ಜ್​ ಆಗಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಜಗತ್ತಿನ ಅತಿ ಹಿರಿಯ ಮಹಿಳೆ ಇವರು ಎಂದು ಆಸ್ಪತ್ರೆಯ ಡಾ. ಶಶಿಧರ್ ತಿಳಿಸಿದ್ದಾರೆ. (ಏಜೆನ್ಸೀಸ್​)

    3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ನೀವು ಬೈಕ್​ ಫುಲ್​ ಟ್ಯಾಂಕ್​ ಮಾಡಿಸಿದ್ದರಂತೂ ಇವರಿಗೆ ಫುಲ್​ ಖುಷಿ.. ಮಾಡಿರದಿದ್ದರೆ ಕೂಡ; ಕೊನೆಗೂ ಸಿಕ್ಕಿಬಿದ್ದರು..

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts