More

    ಇವನೇ ನೋಡಿ ನಿಜವಾದ ಬಾಹುಬಲಿ! ತಲೆ ಮೇಲೆ ಬೈಕ್​ ಹೊತ್ತು ಬಸ್​ ಏರಿದ ಈತನ ಶಕ್ತಿಗೆ ನೆಟ್ಟಿಗರು ಫಿದಾ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ಜನರ ಗಮನ ಸೆಳೆಯುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಭಾರಿ ವೈರಲ್​ ಆಗಿದೆ.

    ಕೂಲಿ ಕಾರ್ಮಿಕನೊಬ್ಬ ತನ್ನ ತೆಲೆ ಮೇಲೆ ಬೈಕ್​ ಹೊತ್ತುಕೊಂಡು ಏಣಿ ಮೂಲಕ ಬಸ್​ ಏರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಕಾರ್ಮಿಕನ ಸಾಮರ್ಥ್ಯ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ಗುಲ್ಜಾರ್​ ಸಾಹಬ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಶುಕ್ರವಾರ ವಿಡಿಯೋ ಅಪ್​ಲೋಡ್​ ಆಗಿದ್ದು, ಇದುವರೆಗೂ 76 ಸಾವಿರಕ್ಕೂ ಅಧಿಕ ವೀಕ್ಷಣೆ ಹಾಗೂ 5 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. ಆತ ನಿಜಕ್ಕೂ ಸೂಪರ್​ ಮಾನವ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ.

    https://twitter.com/Gulzar_sahab/status/1596038884886212608?s=20&t=dxvl8RS3YeOa3ZZlRWfjVg

    ವಿಡಿಯೋದಲ್ಲಿ, ಭಾರಿ ಗಾತ್ರ ಬೈಕ್ ಅನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಬೀಳದಂತೆ ಬ್ಯಾಲೆನ್ಸ್​ ಮಾಡಿಕೊಂಡು, ಬಸ್​ ಬಳಿ ಬಂದು, ಏಣಿ ಏರಿ ಬಸ್​ ಮೇಲೆ ಬೈಕ್​ ಸಾಗಿಸುತ್ತಾನೆ. ಸ್ವಲ್ಪ ಬ್ಯಾಲೆನ್ಸ್​ ಕಳೆದುಕೊಂಡು ಬೈಕ್​ ಬಿದ್ದರೂ ಕಾರ್ಮಿಕನಿಗೆ ಅಪಾಯ ತಪ್ಪಿದ್ದಲ್ಲ. ಅಂತಹುದರಲ್ಲಿ ಕಾರ್ಮಿಕ ಬೈಕ್​ ಸಾಗಿಸಿದ ಪರಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸುವ ಮೂಲಕ ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ. ನನಗೆ ಅಕ್ಷರಶಃ ಆ ಕುತ್ತಿಗೆಯ ಶಕ್ತಿ ಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದರೆ, ಈತನೇ ನಿಜವಾದ ಬಾಹುಬಲಿ ಎಂದು ಮತ್ತೊಬ್ಬ ನೆಟ್ಟಿಗ ಟ್ವೀಟ್​ ಮಾಡಿದ್ದಾನೆ. ಮೂರನೆ ಕಾಮೆಂಟಿಗ ಆ ವ್ಯಕ್ತಿಯನ್ನು “ಸೂಪರ್ ಮ್ಯಾನ್” ಎಂದು ಕರೆದರೆ, ನಾಲ್ಕನೆಯವನು “ವಾವ್ ಮಹಾನ್ ಶಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ.

    ಅಂದಹಾಗೆ ವಿಡಿಯೋದ ಮೂಲ ಯಾವುದು ಎಂಬುದು ತಿಳಿದಿಲ್ಲ. ಆದರೆ, ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

    ಸೀಟಿನಲ್ಲಿ ಕೂರದೇ ಟ್ರಕ್ ಪಾರ್ಕ್​ ಮಾಡಿದ ಚಾಲಕ: ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ!​

    ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್​ರ​ ಗಾನ ಬಜಾನಕ್ಕೆ ಮನಸೋತ ತುಮಕೂರು ಮಂದಿ!

    ನಟಿ ರಶ್ಮಿಕಾ ಮಂದಣ್ಣರಿಂದಾಗಿ ಈ ಎರಡು ಸಿನಿಮಾಗಳಿಗೆ ಎದುರಾಯ್ತು ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts