More

    ದೇಶ ಬದಲಾದರೆ ಸಾಕು, ಈಕೆಯ ವಯಸ್ಸೇ ಬದಲಾಗುತ್ತಂತೆ; ಅಮೆರಿಕಕ್ಕಿಂತ ಇಲ್ಲಿ ನನ್ನ ವಯಸ್ಸು ಒಂದು ವರ್ಷ ಹೆಚ್ಚು ಎಂದಳು!

    ನವದೆಹಲಿ: ಈಕೆಯದ್ದು ಒಂದು ರೀತಿಯಲ್ಲಿ ಏಕಪಾತ್ರಾಭಿನಯವನ್ನು ನೆನಪಿಸುವಂಥ ಪ್ರಕರಣ. ಅಂದರೆ ಇಲ್ಲಿ ನಿಂತರೆ ಕೃಷ್ಣ, ಇಲ್ಲಿ ನಿಂತರೆ ಅರ್ಜುನ ಎನ್ನುವಂತೆ ಈಕೆಯ ವಯಸ್ಸು ಕೂಡ ಇಲ್ಲಿ ಇದ್ದರೆ ಇಷ್ಟು, ಅಲ್ಲಿ ಇದ್ದರೆ ಒಂದು ಹೆಚ್ಚು ಎನ್ನುವಂತಾಗಿದೆ. ಇಂಥದ್ದೊಂದು ವಿಷಯವನ್ನು ಈಕೆ ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಹಂಚಿಕೊಂಡಿದ್ದಾಳೆ.

    ಹೀಗೆ ವಯಸ್ಸೇ ಬದಲಾಗುತ್ತಿದೆ ಎಂದು ಹೇಳಿಕೊಂಡಿರುವ ಈ ಮಹಿಳೆಯ ಹೆಸರು ಸುಜೀ ಯಂಗ್. ಈಕೆ ಅಮೆರಿಕದಲ್ಲಿ ಇರುವಾಗಿನ ನಿಜವಾದ ವಯಸ್ಸು, ಇನ್ನೊಂದು ದೇಶಕ್ಕೆ ಹೋದಾಗ ಒಂದು ವರ್ಷ ಹೆಚ್ಚಾಗುತ್ತದೆಯಂತೆ. ಅದು ಹೇಗೆ ಎಂಬುದನ್ನೂ ವಿವರಿಸಿರುವ ಈ ಮಹಿಳೆ ಆ ಮೂಲಕ ಒಂದಷ್ಟು ಗಮನ ಸೆಳೆದಿದ್ದಾಳೆ.

    ಅಂದಹಾಗೆ ಹೀಗೆ ಈಕೆಯ ವಯಸ್ಸನ್ನು ಒಂದು ವರ್ಷ ಹೆಚ್ಚಾಗಿ ತೋರಿಸುತ್ತಿರುವುದು ಗ್ರೀಸ್​. ನಾನು ಅಮೆರಿಕದಲ್ಲಿದ್ದಾಗ ನನ್ನ ವಯಸ್ಸು ಸರಿಯಾಗಿಯೇ ಇರುತ್ತದೆ. ಆದರೆ ಇಲ್ಲಿದ್ದಾಗ ನನ್ನ ವಯಸ್ಸು ಒಂದು ವರ್ಷ ಹೆಚ್ಚಿರುತ್ತದೆ ಎಂಬುದಾಗಿ ಈಕೆ ಹೇಳಿದ್ದಾಳೆ. ಗ್ರೀಸ್​ನಲ್ಲಿ ಮಕ್ಕಳು ಹುಟ್ಟಿದ ದಿನವನ್ನೇ ಒಂದು ವರ್ಷವೆಂದು ಪರಿಗಣಿಸುತ್ತಾರೆ. ಗರ್ಭದೊಳಗೆ 9 ತಿಂಗಳಿದ್ದು ಜನಿಸಿದ್ದನ್ನು ಲೆಕ್ಕ ಹಾಕಿದರೂ ಅದು ಹೇಗೆ ಒಂದು ವರ್ಷ ಆಗುತ್ತದೆ ಎಂದು ಅರ್ಥವಾಗುವುದಿಲ್ಲ. ಅದಾಗ್ಯೂ ಇಲ್ಲಿ ವರ್ಷವನ್ನು ಅದೇ ಥರ ಲೆಕ್ಕ ಹಾಕುತ್ತಾರೆ ಎಂದಿರುವ ಈಕೆ, ಬೇರೆ ಕಡೆಗಳಂತೆ ನಮಗೆ ಒಂದು ವರ್ಷವಾಗಿದ್ದಾಗ ಇಲ್ಲಿ ಎರಡು ವರ್ಷವಾಗಿರುತ್ತದೆ ಎಂದಿದ್ದಾಳೆ.

    ಇದನ್ನೂ ಓದಿ: ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

    ಇನ್ನು ಈಕೆಯ ಮಾತಿಗೆ ಪ್ರತಿಕ್ರಿಯಿಸಿರುವ ಕೆಲವರು, ಗ್ರೀಸ್​ನ ಎಲ್ಲ ಕಡೆ ಅದೇ ರೀತಿ ವಯಸ್ಸನ್ನು ಪರಿಗಣಿಸುವುದಿಲ್ಲ. ಕೆಲವೊಂದು ವರ್ಗದ ಜನರು ಮಾತ್ರ ವಯಸ್ಸನ್ನು ಆ ರೀತಿ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. ಗ್ರೀಸ್​ ಮಾತ್ರವಲ್ಲ ದಕ್ಷಿಣ ಕೊರಿಯಾದಲ್ಲೂ ಇದೇ ರೀತಿ ವಯಸ್ಸನ್ನು ಪರಿಗಣಿಸುತ್ತಾರೆ. ದಕ್ಷಿಣ ಕೊರಿಯಾದಲ್ಲಿ ಹುಟ್ಟಿದ ದಿನವನ್ನೇ ಒಂದು ವರ್ಷ ಎಂದು ಲೆಕ್ಕ ಹಾಕುತ್ತಾರೆ ಹಾಗೂ ಅಲ್ಲಿ ಪ್ರತಿ ಹೊಸ ವರ್ಷಕ್ಕೆ ಒಂದು ವರ್ಷ ಪೂರೈಸಿದಂತೆ ಎಂದು ಪರಿಗಣಿಸುತ್ತಾರೆ. ಹೀಗಾಗಿ ಯುಎಸ್​ನಲ್ಲಿದ್ದಾಗ ನನಗೆ 17 ವರ್ಷ ಆಗಿದ್ದರೆ ಕೊರಿಯಾಗೆ ಬಂದಾಗ 19 ವರ್ಷ ಆಗಿರುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಭೂಮಿ- ಕಾವೇರಿ ತಂತ್ರಾಂಶ ಸರ್ವರ್​ ಡೌನ್​: ಜನರ ಪರದಾಟ, ಸರ್ಕಾರಕ್ಕೆ ಹಿಡಿಶಾಪ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts