More

    ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!

    ಮುಂಬೈ: ಬಾಲಿವುಡ್​ ಬೆಡಗಿ ಕರೀನಾ ಕಪೂರ್​ ಈಗ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಮೊದಲ ಸಲ ಗರ್ಭಿಣಿಯಾಗಿದ್ದಾಗಲೂ ಪೂರ್ತಿ ಚಟುವಟಿಕೆಯಿಂದಿದ್ದು, ಸದಾ ಸುದ್ದಿಯಲ್ಲಿದ್ದಿದ್ದ ಕರೀನಾ ಈಗಲೂ ಮತ್ತೆ ಸೌಂಡ್ ಮಾಡುತ್ತಿದ್ದಾರೆ. ಸದ್ಯ ಈಗ ಅವರು ಏನನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೋ ಅದಿರಿಂದಾಗಿ ಅವರು ಸುದ್ದಿಯಲ್ಲಿದ್ದಾರೆ.

    ಹೌದು.. ಸಾಮಾನ್ಯವಾಗಿ ಗರ್ಭವತಿಯರೆಲ್ಲ ಆಸೆ ಪಡುವಂತೆಯೇ ಕರೀನಾ ಕಪೂರ್ ಕೂಡ ಬಯಕೆ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ತಾವೇನು ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. ಅದರ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಕರೀನಾ, ಎಷ್ಟು ಬೇಗ ಮತ್ತೆ ಮೊದಲಿನಂತೆ ಅದಕ್ಕೆಲ್ಲ ಅವಕಾಶವಾಗುವುದೋ ಎಂಬ ಕಾತರವನ್ನೂ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!
    ಕರೀನಾ ಇನ್​ಸ್ಟಾಗ್ರಾಮ್ ಫೋಟೋ

    ಅಷ್ಟಕ್ಕೂ ಕರೀನಾ ಕಪೂರ್ ಸದ್ಯ ಮಿಸ್​ ಮಾಡಿಕೊಳ್ಳುತ್ತಿರುವುದು ತಮ್ಮ ಎಂದಿನ ಡೆನಿಮ್ಸ್​, ಅರ್ಥಾತ್ ಜೀನ್ಸ್ ಉಡುಪುಗಳನ್ನು. ಗರ್ಭವತಿಯಾಗುವುದಕ್ಕೂ ಮೊದಲಿನ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಕರೀನಾ, ನಾನು ನನ್ನ ಜೀನ್ಸ್​​ ಮತ್ತೆ ಯಾವತ್ತು ಧರಿಸುತ್ತೇನೋ?! ಎಂದು ಹೇಳಿಕೊಂಡು ಅವನ್ನು ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಕರೀನಾ-ಸೈಫ್​ ಅಲಿ ಖಾನ್​ ದಂಪತಿಯ ಎರಡನೇ ಮಗು ಆಗಸ್ಟ್​ ವೇಳೆಗೆ ಜನಿಸುವ ಸಾಧ್ಯತೆ ಇದೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

    ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್​ ಮಾಡ್ಲಿ?

    ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts