More

    ಇದೇ ನೋಡಿ ಚಂದ್ರಯಾನ-3 ಚಂದ್ರನನ್ನು ಸ್ಪರ್ಶಿಸಿದ ಜಾಗ! ಲ್ಯಾಂಡಿಂಗ್​ ಬಳಿಕ ಸೆರೆಹಿಡಿದ ಮೊದಲ ಚಿತ್ರ ಬಿಡುಗಡೆ

    ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲ್ಮೈಗೆ ಇಳಿಯುವಲ್ಲಿ ಯಶಸ್ವಿಯಾಗಿದ್ದು, ಚಂದ್ರನ ಅಜ್ಞಾತ ಪ್ರದೇಶವಾದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ.

    ಮುಂದಿನ 14 ದಿನಗಳ ವರೆಗೆ ಚಂದ್ರನ ಅಂಗಳದಲ್ಲಿ ವಿಕ್ರಮ್​ ಲ್ಯಾಂಡರ್​ನಲ್ಲಿರುವ ಪ್ರಜ್ಞಾನ್ ಮಾಡ್ಯೂಲ್​ ಚಂದ್ರನ ಅಂಗಳವನ್ನು ಅನ್ವೇಷಣೆ ಮಾಡಲಿದೆ. ಚಂದ್ರಯಾನ ನೌಕೆ ಸಾಫ್ಟ್​ ಆಗಿ ಲ್ಯಾಂಡ್​ ಆದ ಬಳಿಕ ಇಸ್ರೋ ಚಂದ್ರನ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದೆ. ದಕ್ಷಿಣ ಧ್ರುವವನ್ನು ವಿಕ್ರಮ್​ ಲ್ಯಾಂಡರ್​ ಸ್ಪರ್ಶಿಸಿದ ಬಳಿಕ ಸೆರೆಹಿಡಿದ ಮೊದಲ ಚಿತ್ರ ಇದಾಗಿದೆ.

    ಇದನ್ನೂ ಓದಿ: ನಾಚಿಕೆಯಾಗಬೇಕು! ಚಂದ್ರಯಾನ-3 ಯಶಸ್ಸಿನ ಬಗ್ಗೆ ಪಾಕ್​ ನಟಿ ಸೆಹರ್​ ಶಿನ್ವಾರಿ ನೀಡಿದ ಹೇಳಿಕೆ ವೈರಲ್​

    ಈ ಫೋಟೋವನ್ನು ಇಸ್ರೋ ತನ್ನ ಎಕ್ಷ್​ (ಟ್ವಿಟರ್​)ನಲ್ಲಿ ಪೋಸ್ಟ್​ ಮಾಡಿದ್ದು, ಲ್ಯಾಂಡರ್ ಮೇಲಿರುವ ಲ್ಯಾಂಡಿಂಗ್​ ಇಮೇಜರ್​ ಕ್ಯಾಮೆರಾದಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ಈ ಚಿತ್ರವು ಚಂದ್ರಯಾನ 3 ಲ್ಯಾಂಡಿಂಗ್​ ಸ್ಥಳದ ಒಂದು ಭಾಗವನ್ನು ತೋರಿಸುತ್ತದೆ. ಚಂದ್ರಯಾನ ನೌಕೆಯ ಒಂದು ಕಾಲಿನ ನೆರಳನ್ನು ಸಹ ಚಿತ್ರದಲ್ಲಿ ಕಾಣಬಹುದು ಎಂದು ಇಸ್ರೋ ತಿಳಿಸಿದೆ.

    ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್‌ಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿದೆ ಎಂದು ಇಸ್ರೋ ಹೇಳಿದೆ. ಇದಕ್ಕೂ ಮುನ್ನ ಇಸ್ರೋ ಚಂದ್ರನ ಮೇಲೆ ಇಳಿಯುವ ಮುನ್ನ ತೆಗೆದ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಚಂದ್ರಯಾನ 3 ಪ್ರೋಬ್ ಮತ್ತು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ ನಡುವೆ ಸಂವಹನವನ್ನು ಸ್ಥಾಪಿಸಿದ ನಂತರ ಈ ಚಿತ್ರಗಳನ್ನು ಭೂಮಿಗೆ ರವಾನಿಸಲಾಗಿದೆ.

    600 ಕೋಟಿ ರೂ. ವೆಚ್ಚದ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಉಡಾವಣ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 41 ದಿನಗಳ ಸುದೀರ್ಘ ಪ್ರಯಾಣದ ನಂತರ ಚಂದ್ರಯಾನ 3 ನೌಕೆ ಚಂದ್ರನನ್ನು ತಲುಪಿದೆ.

    ಏನೇನು ಅಧ್ಯಯನ?

    ನೌಕೆಯು ಹಲವು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿದೆ. ಇದು ಚಂದ್ರನ ಮೇಲ್ಮೈ ಪ್ಲಾಸ್ಮಾ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆ, ಅದರ ಬದಲಾವಣೆಗಳನ್ನು ಅಳೆಯಲು ನೆರವಾಗುತ್ತದೆ. ಭೌತಿಕ ಪ್ರಯೋಗ, ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನ, ಚಂದ್ರನ ಭೂಕಂಪನ ಚಟುವಟಿಕೆ, ಅಲ್ಲಿನ ಖನಿಜ ಸಂಯೋಜನೆ, ಚಂದ್ರನ ಹೊರಪದರ ರಚನೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು ನಿರ್ಧರಿಸುತ್ತದೆ.

    ಇದನ್ನೂ ಓದಿ: ವಿಶ್ವದಲ್ಲಿರುವ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ದಕ್ಷಿಣ ಧ್ರುವದ ಹಿಂದೆ ಬಿದ್ದಿರುವುದೇಕೆ? ಇಲ್ಲಿದೆ ಕಾರಣ…

    ಚಂದ್ರಯಾನದ ಹಾದಿ

    * ಜುಲೈ 14 – ಉಡಾವಣೆ
    * ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ
    * ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ
    * ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ
    * ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ
    * ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್
    *1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.
    *1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ
    *2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.
    *600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ
    *40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ
    *3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ

    ಯಶಸ್ವಿಯಾದ ಚಂದ್ರಯಾನ-3 ಲ್ಯಾಂಡರ್; ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ

    ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್;​ ಈಗ ಭಾರತ ಚಂದ್ರನ ಮೇಲಿದೆ ಎಂದ ಪ್ರಧಾನಿ ಮೋದಿ

    ಚಂದ್ರಯಾನ-3 ಯಶಸ್ವಿ: ಅಲ್ಲಿಂದ ಬಂದ ಮೊದಲ ಸಂದೇಶ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts