More

    ದೇಶದಲ್ಲಿ ಇದೇ ಮೊದಲು!; ಶಿಕ್ಷಕ ವೃಂದದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು..

    ಬೆಂಗಳೂರು: ಶಾಲೆಗಳ ಪರೀಕ್ಷಾ ಫಲಿತಾಂಶ ಬಂದಾಗ ‘ವಿದ್ಯಾರ್ಥಿನಿಯರದ್ದೇ ಮೇಲುಗೈ’ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತಿರುತ್ತದೆ. ಅಂಥದ್ದೇ ಒಂದು ಮಾತನ್ನು ಇದೀಗ ಶಿಕ್ಷಕ ವೃಂದದ ವಿಚಾರದಲ್ಲೂ ಹೇಳಬಹುದಾಗಿದೆ. ಏಕೆಂದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷಕರ ಸಂಖ್ಯೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿದ್ದು, ಹೆಣ್ಣೊಂದು ಕಲಿತರೆ, ಶಾಲೆಯೊಂದು ಕಲಿತಂತೆ ಎಂಬ ನಾಣ್ಣುಡಿಯನ್ನು ನಿಜಗೊಳಿಸಿದ್ದಾರೆ. 2019-20 ಯುನೆಟೈಡ್ ಡಿಸ್ಟ್ರಿಕ್ಟ್ ಇನ್​ಫಾರ್ಮೇಷನ್ ಪ್ರಕಾರ 96.8 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ 49.2 ಲಕ್ಷ ಶಿಕ್ಷಕರು ಮಹಿಳೆಯರು.

    2012-13ರಲ್ಲಿ ಶಿಕ್ಷಕ ವೃಂದದಲ್ಲಿ ಮಹಿಳೆಯರ ಪ್ರಮಾಣ 35.8 ಲಕ್ಷ ಮತ್ತು ಪುರುಷರ ಪ್ರಮಾಣ 42.4 ಲಕ್ಷ ಇತ್ತು. ಇಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಕರನ್ನು ಸಮೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಇನ್ನು ಪೂರ್ವ ಪ್ರಾಥಮಿಕ ಶಿಕ್ಷಣ ನೋಡಿದಾಗ ಎಂದಿನಂತೆ ಪುರುಷ ಹೆಚ್ಚಾಗಿದ್ದಾರೆ. ಶಿಕ್ಷಕ ಸಮೂಹದಲ್ಲಿ 27 ಲಕ್ಷ ಪುರುಷರಿದ್ದು, 1 ಲಕ್ಷ ಮಾತ್ರ ಮಹಿಳೆಯರಿದ್ದಾರೆ.

    ಇದನ್ನೂ ಓದಿ: ಅಂಬೆಗಾಲಿಡುವ ಮಗನ ಬಯೋಡೇಟಾ ಹಿಡಿದುಕೊಂಡು ಸಂದರ್ಶನಕ್ಕೆ ಹೋದ ಅಮ್ಮ; ಅಂಥದ್ದೇನಿತ್ತು ಅದರಲ್ಲಿ!?

    ಕರ್ನಾಟಕದ ಅಂಕಿ-ಅಂಶಗಳನ್ನು ನೋಡಿದರೆ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 4,50,592 ಶಿಕ್ಷಕರ ಪೈಕಿ 2,57,790 ಮಂದಿ ಮಹಿಳೆಯರು. ಅಂದರೆ, ಇಲ್ಲಿ ಶಿಕ್ಷಕಿಯರ ಪ್ರಮಾಣ ಶೇ.57 ಇದೆ. ಇತರ ರಾಜ್ಯಗಳಲ್ಲಿ ಶಿಕ್ಷಕಿಯರು ಹೆಚ್ಚಾಗಿರುವ ಬಗ್ಗೆ ಅವಲೋಕನ ಮಾಡಿದಾಗ ಟಾಪ್-5 ರಾಜ್ಯಗಳಲ್ಲಿ ಕೇರಳ ಶೇ.79ರೊಂದಿಗೆ ಇದ್ದು, ಮೊದಲ ಸ್ಥಾನದಲ್ಲಿದೆ. ಪಂಜಾಬ್ ಶೇ.76, ತಮಿಳುನಾಡು ಶೇ.75, ದೆಹಲಿ ಶೇ.74 ಹಾಗೂ ಹರಿಯಾಣ ಶೇ.62 ಇದೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಕಿಯರ ಅಂಕಿ-ಅಂಶಗಳಲ್ಲಿ ಸಮನ್ವಯತೆ ಇದೆ. ಇಲ್ಲಿ 19.6 ಲಕ್ಷ ಶಿಕ್ಷಕಿಯರಿದ್ದು, 15.7 ಲಕ್ಷ ಶಿಕ್ಷಕರಿದ್ದಾರೆ. ಪ್ರೌಢ ಶಾಲೆಯಲ್ಲಿ 11.5 ಲಕ್ಷ ಶಿಕ್ಷಕರು ಹಾಗೂ 10.6 ಲಕ್ಷ ಶಿಕ್ಷಕಿಯರಿದ್ದಾರೆ.

    ಇದನ್ನೂ ಓದಿ: ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

    ಸಾಮಾನ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಶಾಲೆಗಳು ಶಿಕ್ಷಕಿಯರನ್ನು ಹೆಚ್ಚಾಗಿ ಬಯಸುತ್ತವೆ. ಅಲ್ಲದೆ, ಬಹುತೇಕ ಶಾಲೆಗಳಲ್ಲಿ ಪುರುಷರಿಗೆ ಕೆಲಸವೇ ನೀಡದಿರುವುದು ಕೂಡ ಶಿಕ್ಷಕಿಯರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕಿಂತ ಮುಖ್ಯವಾಗಿ ವೇತನ ತಾರತಮ್ಯವಿದ್ದು, ಶಿಕ್ಷಕ ವೃತ್ತಿಗೆ ಪುರುಷರನ್ನು ತೆಗೆದುಕೊಂಡಲ್ಲಿ ಮಹಿಳೆಯರಿಗಿಂತ ಹೆಚ್ಚಿನ ವೇತನ ನೀಡಬೇಕಾಗುತ್ತದೆ ಎಂಬ ದೃಷ್ಟಿಯಿಂದ ಶಿಕ್ಷಕಿಯರನ್ನು ಹೆಚ್ಚು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಸಿದ್ದು ಬಣಕ್ಕೆ ಡಿಕೆಶಿ ಬಣ ಟಕ್ಕರ್: ರಾಜ್ಯ ಯುವ ಕಾಂಗ್ರೆಸ್‌ಗೆ ಜನವರಿಯಿಂದ ನಲಪಾಡ್ ಅಧ್ಯಕ್ಷ!

    ‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts