More

    ರವಿ ಬೆಳೆಗೆರೆ ವೃತ್ತಿ ಬದುಕಿನಲ್ಲಿ ಎಷ್ಟು ಅಪಾಯಗಳನ್ನು ಎದುರಿಸಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ!

    ಬಳ್ಳಾರಿ: ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ ಎಂಬುದು ಕನ್ನಡ ಸಾಹಿತ್ಯ ಲೋಕ ಮತ್ತು ಪತ್ರಿಕಾ ರಂಗಕ್ಕೆ ಆದಂತಹ ದೊಡ್ಡ ನಷ್ಟ. ಬೆಳಗೆರೆ ಅವರ ಬರವಣಿಗೆಯನ್ನು ಸ್ಪೂರ್ತಿಯಾಗಿರಿಸಿಕೊಂಡಿದ್ದ ಸಾವಿರಾರು ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಆಘಾತ ಬೇರೆ ಇಲ್ಲ.

    ವೃತ್ತಿ ಧರ್ಮವನ್ನು ಪಾಲಿಸುತ್ತಿದ್ದ ರವಿ ಬೆಳೆಗೆರೆಯವರು ತಮ್ಮ ವೃತ್ತಿ ಬದುಕಿನಲ್ಲಿ ಎಷ್ಟು ಅಪಾಯಗಳನ್ನು ಎದುರಿಸಿದ್ದರು ಎನ್ನುವುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.

    ಇದನ್ನೂ ಓದಿ: ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ

    2006ರಲ್ಲಿ ಕಳ್ಳರ ಗ್ಯಾಂಗ್ ಒಂದು ಬೆಳೆಗೆರೆ ಮೇಲೆ ಅಟ್ಯಾಕ್ ಮಾಡಿತ್ತು. ನಕಲಿ ಬಂಗಾರ ಜಾಲದ ಬೆನ್ನುಹತ್ತಿ ಹೋಗಿದ್ದ ಬೆಳೆಗೆರೆ ಅವರ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿತ್ತು. ಆಗ ಬೆಳಗೆರೆ ಕಳ್ಳರ ಮೇಲೆ ಗುಂಡು ಹಾರಿಸಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದರು.

    ಘಟನೆಯ ವಿವರಣೆಗೆ ಬರುವುದಾದರೆ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಐಯ್ಯನ ಕೆರೆ ಸಮೀಪ 2006ನೇ ಇಸವಿಯ ಆ ಒಂದು ರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿತ್ತು. ಪೋಲಿಸರಿಗೂ ಕೂಡ ನಕಲಿ ಬಂಗಾರದ ಪ್ರಕರಣ ಭಾರಿ ತಲೆನೋವಾಗಿತ್ತು. ಆ ಸಮಯದಲ್ಲಿ ರವಿಬೆಳಗೆರೆ ಅರ್ಧ ರಾತ್ರಿ ಆಗಂತುಕರು ಅಂತ ವಿಶೇಷ ಸಂಚಿಕೆ ಮಾಡ್ತಿದ್ದರು. ಅದರ ಒಂದು ಎಪಿಸೋಡ್ ಮಾಡಲು ಸ್ವತಃ ಬೆಳಗೆರೆ ಅವರು ಜೀವವನ್ನು ಪಣಕ್ಕಿಟ್ಟಿದ್ದರು.

    ಇದನ್ನೂ ಓದಿ: ನಿನ್ನೆ ಸಂಜೆಯಷ್ಟೇ ಸಂಭ್ರಮಿಸಿದ್ದ ಬೆಳಗೆರೆ ಕುಟುಂಬದಲ್ಲಿ ಬೆಳಗಾಗುವಷ್ಟರಲ್ಲಿ ಆವರಿಸಿತು ಶೋಕದ ಕಾರ್ಮೋಡ!

    ನಕಲಿ ಬಂಗಾರ ಕೊಳ್ಳುವರ ವೇಶದಲ್ಲಿ ಬೆಳೆಗೆರೆ ಹೋಗಿದ್ದರು. ಆರು ಜನ ಕಳ್ಳರ ಗ್ಯಾಂಗ್ ಕೆಜಿ ಗಟ್ಟಲೇ ನಕಲಿ ಬಂಗಾರ ತಂದಿದ್ದರು. ಡೀಲ್ ಮಧ್ಯದ ವೇಳೆ ಕಳ್ಳರಿಗೆ ಬೆಳೆಗೆರೆ ಓರ್ವ ಪೊಲೀಸ್​ ಇರಬೇಕೆಂಬ ಅನುಮಾನ ಬರತ್ತದೆ. ತಕ್ಷಣ ಆರು ಜನ ಅವರ ಮೇಲೆ ಏಕಾಏಕಿ ದಾಳಿ ಮಾಡುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಕಳ್ಳರ ಮೇಲೆ ಫೈರಿಂಗ್​ ಮಾಡುತ್ತಾರೆ. ಬಳಿಕ ನಕಲಿ ಬಂಗಾರ ಜಾಲ ಪತ್ತೆ ಹಚ್ಚಲು ಪೊಲೀಸರು ಬೆಳೆಗೆರೆಯನ್ನೇ ಸಾಕ್ಷಿ ಮಾಡಿ ಕಳ್ಳರನ್ನ ಹಿಡಿದ್ದರು. (ದಿಗ್ವಿಜಯ ನ್ಯೂಸ್​)

    ಯಾರು ಕೂಡ ಸಾವಿನ ತನಕ ನಮ್ಮ ಜತೆ ಬರೋದಿಲ್ಲ, ನಮ್ ಜೊತೆ ಸಾಯಲ್ಲ: ರವಿ ಬೆಳಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts