More

    Video| ಮನೆಯಾತ ಆಸ್ಪತ್ರೆಯಲ್ಲಿದ್ದಾಗಲೂ 6 ದಿನ ಅಲ್ಲಿಯೂ ಕಾವಲು ನಡೆಸಿದ ನಾಯಿ!

    ನವದೆಹಲಿ: ನಾಯಿ ಎಂದರೆ ಸಾಮಾನ್ಯವಾಗಿ ಮನೆ ಕಾಯೋಕಂತಲೇ ಇರುತ್ತದೆ. ಆದರೆ ಇಲ್ಲೊಂದು ನಾಯಿ ಮನೆಯಾತ ಆಸ್ಪತ್ರೆಯಲ್ಲಿದ್ದಾಗಲೂ ಅಲ್ಲಿಯೂ ಆತ ಡಿಸ್​ಚಾರ್ಜ್​ ಆಗುವವರೆಗೂ ಬಾಗಿಲು ಕಾದಿದ್ದಲ್ಲದೆ, ಎಲ್ಲರ ಗಮನ ಸೆಳೆದು ಮೆಚ್ಚುಗೆಗೂ ಪಾತ್ರವಾಗಿದೆ.

    ಮನೆ ಯಜಮಾನ ಮೆದುಳು ಸಂಬಂಧಿತ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಬೇಕಿತ್ತು. ಆಗ ಆ್ಯಂಬುಲೆನ್ಸ್​ ಹಿಂದೆಯೇ ಬಂದಿದ್ದ ಸಾಕುನಾಯಿ ನಂತರ ಡಿಸ್​ಚಾರ್ಜ್​ ಆಗುವವರೆಗೂ ಪ್ರತಿದಿನ ಆಸ್ಪತ್ರೆಗೆ ಬಂದು ಯಜಮಾನನ ವಾರ್ಡ್​ ಮುಂದೆ ಕಾಯುವ ಕೆಲಸವನ್ನು ಮಾಡಿತ್ತು.

    Video| ಮನೆಯಾತ ಆಸ್ಪತ್ರೆಯಲ್ಲಿದ್ದಾಗಲೂ 6 ದಿನ ಅಲ್ಲಿಯೂ ಕಾವಲು ನಡೆಸಿದ ನಾಯಿ!
    ಆಸ್ಪತ್ರೆಯಲ್ಲಿ ಕಾಯುತ್ತಿರುವ ನಾಯಿ

    ಅಂದಹಾಗೆ ಇಂಥದ್ದೊಂದು ಘಟನೆ ಟರ್ಕಿಯ ಟ್ರಬ್ಜನ್​ ನಗರದಲ್ಲಿ ನಡೆದಿದೆ. 68 ವರ್ಷದ ಸೆಮೆಲ್​ ಸೆಂಟರ್ಕ್​ ಎಂಬಾತ ಇಲ್ಲಿನ ಆಸ್ಪತ್ರೆಯೊಂದಕ್ಕೆ ಜ. 14ರಂದು ದಾಖಲಾಗಿದ್ದರು. ಅವರ ನೆಚ್ಚಿನ ನಾಯಿ ಬೊನಕ್​ ಅಂದು ಆ್ಯಂಬುಲೆನ್ಸನ್ನು ಹಿಂಬಾಲಿಸಿ ಆಸ್ಪತ್ರೆಯಲ್ಲಿ ಕಾವಲು ಆರಂಭಿಸಿತ್ತು. ಬಳಿಕ ದಿನಾ ಮುಂಜಾನೆ ಆಸ್ಪತ್ರೆಗೆ ಬಂದು ಅಲ್ಲೇ ಇರುತ್ತಿತ್ತು. ಈ ಮಧ್ಯೆ ಸೆಂಟರ್ಕ್​​ನ ಪುತ್ರಿ ಕೆಲವು ಸಲ ನಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದರೂ ಅದು ಮತ್ತೆ ತಪ್ಪಿಸಿಕೊಂಡು ಆಸ್ಪತ್ರೆಗೆ ಬಂದುಬಿಡುತ್ತಿತ್ತು.

    ಇದನ್ನೂ ಓದಿ: ಮರ್ಡರ್ ಆದ ವೆಲ್ಡರ್​: ರಾತ್ರಿ ಮನೆಯಲ್ಲೇ ಇದ್ದ, ಬೆಳಗ್ಗೆ ತೋಟದಲ್ಲಿ ಹೆಣವಾಗಿ ಬಿದ್ದಿದ್ದ..!

    ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಈ ವಾರದಲ್ಲಿ ಸೆಂಟರ್ಕ್ ಬಿಡುಗಡೆ ಆಗಿದ್ದು, ಆ ದಿನ ಮನೆಯಾತನೊಂದಿಗೆ ನಾಯಿ ಪ್ರೀತಿಯಿಂದ ವರ್ತಿಸಿದ್ದು ಅಲ್ಲಿದ್ದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ ಅವರ ವ್ಹೀಲ್​ ಚೇರ್ ಜೊತೆಗೇ ಕುಪ್ಪಳಿಸುತ್ತ ಖುಷಿಯಿಂದ ಮನೆಗೆ ತೆರಳಿದೆ. ಈ ಕುರಿತ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಹಲವರ ಗಮನ ಸೆಳೆಯಲಾರಂಭಿಸಿದೆ. (ಏಜೆನ್ಸೀಸ್​)

    ಇದು ಮ್ಯಾಜಿಕ್ ಸ್ಯಾಂಡ್​.. ಬಿಸಿ ಮಾಡಿದ್ರೆ ಸಾಕು ಚಿನ್ನ ಆಗುತ್ತೆ!; 4 ಕೆ.ಜಿ. ಮರಳಿಗೆ 50 ಲಕ್ಷ ರೂ. ಕೊಟ್ಟೇ ಬಿಟ್ಟ ಜುವೆಲ್ಲರಿ ಮಾಲೀಕ…

    VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts