More

    ಪಾಕಿಸ್ತಾನ ಮಹಿಳೆಯರನ್ನು ಮದುವೆಯಾಗುವುದು ಈ ರಾಷ್ಟ್ರದಲ್ಲಿ ನಿಷಿದ್ಧ!

    ದುಬೈ: ಪಾಕಿಸ್ತಾನ, ಬಾಂಗ್ಲಾದೇಶ, ಛಾಡ್​ ಮತ್ತು ಮ್ಯಾನ್ಮಾರ್​ ಮೂಲದ ಮಹಿಳೆಯರನ್ನು ಮದುವೆಯಾಗದಂತೆ ತನ್ನ ಪುರುಷ ಪ್ರಜೆಗಳಿಗೆ ಸೌದಿ ಅರೇಬಿಯಾ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿರುವುದಾಗಿ ಪಾಕಿಸ್ತಾನ ಪ್ರತಿಷ್ಠಿತ ಮಾಧ್ಯಮ ಡಾನ್​ ವರದಿ ಮಾಡಿದೆ.

    ವಿದೇಶಿಯರನ್ನು ಮದುವೆಯಾಗಲು ಬಯಸುವ ಸೌದಿ ಅರೇಬಿಯಾ ಪುರುಷರು ಇದೀಗ ಹೆಚ್ಚಿನ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಡಾನ್​ ಸೌದಿ ಅರೇಬಿಯಾದ ವರದಿಯನ್ನು ಉಲ್ಲೇಖಿಸಿದೆ.

    ಈ ನಾಲ್ಕು ದೇಶಗಳ ಅಧಿಕೃತವಲ್ಲದ ಸುಮಾರು 5 ಲಕ್ಷ ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸವಿದ್ದಾರೆ. ಸೌದಿ ಪುರುಷರು ವಿದೇಶಿ ಮಹಿಳೆಯರನ್ನು ವರಿಸಲು ಬಯಸುವುದಾದರೆ ಇನ್ಮುಂದೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಈ ನಡೆಯಿಂದಾಗಿ ವಿದೇಶಿ ಮಹಿಳೆಯರನ್ನು ಸೌದಿ ಪುರುಷರು ಮದುವೆಯಾಗದಂತೆ ನಿರುತ್ಸಾಹಗೊಳಿಸುತ್ತದೆ.

    ಇದನ್ನೂ ಓದಿರಿ: ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

    ಹಾಗಂದ ಮಾತ್ರಕ್ಕೆ ಮದುವೆ ಆಗಲೇಬಾರದು ಅಂಥೇನಿಲ್ಲ. ಯಾರು ಮದುವೆ ಆಗಲು ಬಯಸುತ್ತಾರೋ ಅವರು ಮದುವೆ ಅರ್ಜಿಯನ್ನು ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಮೆಕ್ಕಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಸ್ಸಫ್ ಅಲ್​ ಖುರೇಷಿ ಹೇಳಿದ್ದಾರೆ.

    ಡಿವೋರ್ಸ್​ ಪಡೆದ ಆರು ತಿಂಗಳೊಳಗೆ ವಿಚ್ಛೇದಿತ ಪುರುಷರಿಗೆ ಅರ್ಜಿ ಸಲ್ಲಿಸಲು ಅನುಮತಿಸುವುದಿಲ್ಲ ಎಂದು ಖುರೇಷಿ ತಿಳಿಸಿದ್ದಾರೆ. ಅರ್ಜಿಯ ಜತೆಗೆ ಸುಮಾರು 25 ಗುರುತಿನ ದಾಖಲೆಗಳನ್ನು ಸ್ಥಳೀಯ ಅಧಿಕಾರಿಗಳ ಹಸ್ತಾಕ್ಷರದೊಂದಿಗೆ ಸಲ್ಲಿಸಬೇಕು. ಇದರೊಂದಿಗೆ ಕುಟುಂಬದ ಕಾರ್ಡ್​ ಸಹ ಇರಬೇಕೆಂದು ಹೇಳಿದ್ದಾರೆ.

    ಒಂದು ವೇಳೆ ಅರ್ಜಿದಾರ ಈಗಾಗಲೇ ಮದುವೆ ಆಗಿದ್ದರೆ, ಆತನ ಪತ್ನಿಯ ನ್ಯೂನತೆ ಅಥವಾ ಕಾಯಿಲೆಯಿಂದ ಬಳಲುತ್ತಿರುವುದನ್ನು ದೃಢಪಡಿಸುವ ವೈದ್ಯಕೀಯ ದಾಖಲೆಯನ್ನು ಅರ್ಜಿ ಜತೆ ಲಗತ್ತಿಸಿರಬೇಕೆಂದು ಖರೇಷಿ ಮಾಹಿತಿ ನೀಡಿದರು. (ಏಜೆನ್ಸೀಸ್​)

    ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

    ಭಾಷೆ ಗೊತ್ತಿಲ್ಲದಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಮಹಿಳೆ ಅನರ್ಹ!

    ಇಲ್ಲಿ ಪೊಲೀಸ್​ ಹುದ್ದೆಗೆ ಸೇರುವ ಮುನ್ನ ಹುಡುಗಿಯರು ಕನ್ಯತ್ವ ಪರೀಕ್ಷೆಯಲ್ಲಿ ಪಾಸ್​ ಆಗ್ಲೇಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts