More

    ಬರಗಾಲದ ಭೀತಿ: ಭಾರತದ ಈ 6 ನಗರಗಳು ಎದುರಿಸಲಿವೆ ನೀರಿನ ಬಿಕ್ಕಟ್ಟು!

    ನವದೆಹಲಿ: ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಎದುರಾಗಿದ್ದು, ದಿನದಿಂದ ದಿನಕ್ಕೆ ನೀರಿಗಾಗಿ ಜನಸಾಮಾನ್ಯರು ಹೆಣಗಾಡುವಂತಾಗಿದೆ. ಬೇಸಿಗೆಯ ಕಾವು ಹೆಚ್ಚುತ್ತಿರುವ ಸಮಯದಲ್ಲೇ ನೀರಿನ ಬವಣೆ ಕಾಡಲಾರಂಭಿಸಿದೆ. ರಾಜ್ಯ ರಾಜಧಾನಿಯಲ್ಲಿ ನೀರಿನ ತೀವ್ರತೆ ಹೆಚ್ಚಿದ್ದು, ಜನರು ಕುಡಿಯುವ ಜಲಕ್ಕಾಗಿ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕುಡಿಯುವ ನೀರನ್ನು ಪೋಲು ಮಾಡುವಂತಿಲ್ಲ, ವಾಹನ ತೊಳೆಯುವುದು ಮತ್ತು ದೊಡ್ಡ ಕಟ್ಟಡಗಳ ಕಾಮಗಾರಿಗೆ ಬಳಸುವಂತಿಲ್ಲ. ಅನಗತ್ಯವಾಗಿ ಬಳಸಿ, ನಿಯಮ ಉಲ್ಲಂಘಿಸಿದರೆ ಭಾರೀ ದಂಡ ತೆತ್ತಬೇಕಾಗುತ್ತದೆ ಎಂದು ಆದೇಶಿಸಿದೆ.

    ಇದನ್ನೂ ಓದಿ: ಮೊದಲ ಬಾರಿಗೆ ಕೈಜೋಡಿಸಿದ ಅಂಬಾನಿ- ಅದಾನಿ: ಅದಾನಿ ಪವರ್ ಯೋಜನೆಯಲ್ಲಿ 26% ಪಾಲು ಪಡೆದುಕೊಂಡ ರಿಲಯನ್ಸ್

    ಇನ್ನು ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎನ್ನುವಷ್ಟರಲ್ಲೇ ಡಬ್ಲ್ಯೂಡಬ್ಲ್ಯೂಎಫ್ (WWF)​ ನಡೆಸಿದ ಇತ್ತೀಚಿನ ಸಮೀಕ್ಷೆಯು ಹವಾಮಾನ ಬದಲಾವಣೆಯನ್ನು ಪರಿಹರಿಸಲು ತುರ್ತು ಕ್ರಮವನ್ನು ತೆಗೆದುಕೊಳ್ಳದಿದ್ದರೆ, ಹಲವಾರು ಭಾರತೀಯ ನಗರಗಳು ಬರಗಾಲದಿಂದ ತೀವ್ರ ನೀರಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

    2050ರ ವೇಳೆಗೆ 100 ನಗರಗಳು ನೀರಿನ ಸಮಸ್ಯೆಗೆ ತುತ್ತಾಗಬಹುದು ಎಂದು ಸಮೀಕ್ಷೆಯು ಊಹಿಸಿದೆ. ಇದು 350 ಮಿಲಿಯನ್ ಜನರು ಮತ್ತು ಪ್ರಮುಖ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ಭಾರತದಲ್ಲಿ, ದೆಹಲಿ, ಜೈಪುರ ಮತ್ತು ಬೆಂಗಳೂರು ಸೇರಿದಂತೆ ಸುಮಾರು 50 ನಗರಗಳು ಹೆಚ್ಚಿನ ಅಪಾಯದಲ್ಲಿದೆ ಎಂಬುದು ಸದ್ಯ ಗಮನಾರ್ಹ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಅಶ್ಲೀಲ ರೀಲ್ಸ್​ ಮಾಡಿದ್ದ ಯುವತಿಯರು ಅರೆಸ್ಟ್! 33,000 ರೂ. ದಂಡ ಕಟ್ಟಲು ಹಣವಿಲ್ಲ ಎಂದು ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts