More

    24ರ ಚೆಲುವೆಯೇ ಈ ಬಸ್​ಗೆ ಚಾಲಕಿ; ‘ನೀವೆಷ್ಟು ಚೆಂದ..’ ಅಂತಾರಂತೆ ಪ್ರಯಾಣಿಕರು!

    ನವದೆಹಲಿ: ಬಸ್​ನಲ್ಲಿ ಮಹಿಳಾ ಕಂಡಕ್ಟರ್​ಗಳು ಕಾಣಸಿಗುವುದು ವಿಶೇಷವೇನಲ್ಲ. ಆದರೆ ಬಸ್​ನಲ್ಲಿ ಮಹಿಳೆಯೇ ಚಾಲಕಿಯಾಗಿದ್ದರೆ, ಆಕೆ ಸುಂದರಿಯೂ ಆಗಿದ್ದರೆ ಹಾಗೂ ಪ್ರಯಾಣಿಕರೆಲ್ಲ ನೀವೆಷ್ಟು ಚೆಂದ ಎಂದು ಹೊಗಳಿಯೂ ಹೋದರೆ ಹೇಗಿರಬಹುದು? ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಹೌದು.. ಇಲ್ಲೊಂದು ಕಡೆ ಬಸ್​ಗೆ ಸುಂದರಿಯೊಬ್ಬಳೇ ಚಾಲಕಿ. ಮಾತ್ರವಲ್ಲ ಬಸ್ ಡ್ರೈವರ್​ ಆಗಬೇಕು ಎಂಬುದು ಈಕೆಯ ಕನಸಾಗಿದ್ದು, ಅದನ್ನು ನನಸು ಕೂಡ ಮಾಡಿಕೊಂಡಿದ್ದಾರೆ. ಆದರೆ ಬಸ್​ ಹತ್ತಿದ ಅನೇಕ ಪ್ರಯಾಣಿಕರು ಈಕೆಯ ಸೌಂದರ್ಯವನ್ನು ಹೊಗಳಿ ಹೋಗುವುದು ಮಾತ್ರ ಇವರಿಗೆ ಇರಿಸುಮುರಿಸು ಉಂಟಾಗಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

    ಇಂಗ್ಲೆಂಡ್​ನ ಎಸೆಕ್ಸ್ ಎಂಬಲ್ಲಿನ ಜೋಡಿ ಲೀ ಫಾಕ್ಸ್ ಎಂಬ 24ರ ಈ ಮಹಿಳೆ ತನ್ನ 21ನೇ ವಯಸ್ಸಿನಲ್ಲೇ ಬಸ್ ಡ್ರೈವರ್ ಆಗಬೇಕು ಎಂಬ ಕನಸನ್ನು ಈಡೇರಿಸಿಕೊಂಡಿದ್ದು, ಅಂದಿನಿಂದಲೇ ಬಸ್ ಚಾಲಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಸ್​ ಹಿಂದೆ ಕಾಣಿಸಿದ್ದ ಜಾಹೀರಾತೊಂದನ್ನು ನೋಡಿ ಅರ್ಜಿ ಸಲ್ಲಿಸಿದ್ದ ಈಕೆ ಕೊನೆಗೂ ಆ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾಗಿ ಹೇಳಿದ್ದಾರೆ.

    24ರ ಚೆಲುವೆಯೇ ಈ ಬಸ್​ಗೆ ಚಾಲಕಿ; 'ನೀವೆಷ್ಟು ಚೆಂದ..' ಅಂತಾರಂತೆ ಪ್ರಯಾಣಿಕರು!

    24ರ ಚೆಲುವೆಯೇ ಈ ಬಸ್​ಗೆ ಚಾಲಕಿ; 'ನೀವೆಷ್ಟು ಚೆಂದ..' ಅಂತಾರಂತೆ ಪ್ರಯಾಣಿಕರು!

    ಬಸ್​ ಡ್ರೈವರ್ ಕೆಲಸವನ್ನು ಸಂತೋಷದಿಂದಲೇ ಮಾಡುತ್ತಿರುವುದಾಗಿ ಹೇಳಿರುವ ಈಕೆ, ತನ್ನ ನಿವೃತ್ತಿವರೆಗೂ ಎಂದರೆ 40ನೇ ವಯಸ್ಸಿನವರೆಗೂ ಇದೇ ಕೆಲಸದಲ್ಲಿ ಮುಂದುವರಿಯುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ ಬಸ್​ನಲ್ಲಿ ಪ್ರಯಾಣಿಸುವವರಲ್ಲಿ ಅದರಲ್ಲೂ ಪುರುಷ ಪ್ರಯಾಣಿಕರಲ್ಲಿ ಹಲವರು ಈಕೆಯ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಯೇ ಹೋಗುತ್ತಾರಂತೆ. ಕೆಲವರು ನಾನು ನನ್ನ ಜೀವನದಲ್ಲೇ ಇಷ್ಟು ಚೆಂದದ ಬಸ್​ ಡ್ರೈವರನ್ನು ನೋಡಿಲ್ಲ ಎಂದರೆ, ಇನ್ನು ಕೆಲವರು ನೀವು ಎಷ್ಟು ಚೆಂದ ಇದ್ದೀರೆಂದರೆ ಬಸ್​ ಡ್ರೈವರ್ ಆಗಿರಬಾರದಿತ್ತು ಎಂಬುದಾಗಿಯೂ ಹೇಳುತ್ತಾರಂತೆ. ಏನೇ ಆದರೂ ನಾನು ಬಸ್​ ಡ್ರೈವರ್ ಆಗಿಯೇ ಮುಂದುವರಿಯುವುದಾಗಿ ಈಕೆ ಹೇಳಿದ್ದಾರೆ. (ಏಜೆನ್ಸೀಸ್)

    ಹೆಚ್ಚುತ್ತಿರುವ ಕರೊನಾ: ಮತ್ತೆ ಸೀಲ್​ಡೌನ್ ಸುಳಿಯಲ್ಲಿ ಮುಂಬೈ ನಗರಿ

    ಮಹಿಳೆಯರ ದಿನದಂದೇ ಲೆಕ್ಕಾಚಾರ; ಮಾ. 8ರಂದು ರಾಜ್ಯ ಬಜೆಟ್ ಮಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts