More

    ಭಾರತ-ಪಾಕ್​ ಗಡಿಯಲ್ಲಿ ಹುಟ್ಟಿದ ಈ ಕೂಸಿಗೆ ಹೆಸರೇನಿಟ್ಟರು ಗೊತ್ತಾ? ಇದೇ ಹೆಸರಿನ ಸಿನಿಮಾ ಇದೆ!

    ಅಟ್ಟಾರಿ ಗಡಿ: 70 ದಿನಗಳಿಗೂ ಹೆಚ್ಚು ಕಾಲದಿಂದ ಭಾರತ-ಪಾಕ್​ ನಡುವಿನ ಅಟ್ಟಾರಿ ಗಡಿಯಲ್ಲಿ ಸಿಲುಕಿರುವ ಪಾಕಿಸ್ತಾನಿ ದಂಪತಿಯು ತಮ್ಮ ನವಜಾತ ಶಿಶುವಿಗೆ ‘ಬಾರ್ಡರ್’ ಎಂದೇ ಹೆಸರಿಟ್ಟು ಗಮನ ಸೆಳೆದಿದ್ದಾರೆ. ಇದೇ ಹೆಸರಿನ ಹಿಂದಿ ಚಲನಚಿತ್ರ ಭಾರತ ಮತ್ತು ಪಾಕ್​ ನಡುವಿನ ಯುದ್ಧದಲ್ಲಿ ಕಾದಾಡಿದ ಸೈನಿಕರ ಕಥೆಯನ್ನು ಸಾರಿದ್ದು ನೆನಪಿದೆಯೇ?

    ಭಾರತ ಪ್ರವಾಸ ಕೈಗೊಂಡು ಕರೊನಾ ಲಾಕ್​ಡೌನ್​ನಿಂದಾಗಿ ಇಲ್ಲೇ ಉಳಿದು ನಂತರ ಸ್ವಂತ ದೇಶ ಪಾಕಿಸ್ತಾನಕ್ಕೆ ಮರಳಲು ಪ್ರಯತ್ನ ಪಡುತ್ತಿರುವ ಜನರ ಪಟ್ಟಿಗೆ ಇದೀಗ ಈ ಹುಟ್ಟಿದ ಮಗುವೂ ಸೇರಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜನ್‌ಪುರ ಜಿಲ್ಲೆಗೆ ಸೇರಿದ ನಿಂಬು ಬಾಯಿ ಮತ್ತು ಬಾಲಂ ರಾಮ್​ ದಂಪತಿ, ತಮ್ಮ ಮಗು ಭಾರತ-ಪಾಕಿಸ್ತಾನ ಗಡಿಯಲ್ಲಿ ಜನಿಸಿದ ಕಾರಣ ಈ ಹೆಸರನ್ನು ಇಟ್ಟಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಅಪ್ಪ ದಿಲ್ಲಿಗೆ ಹೋಗ್ತಾನ, ಇಲ್ಲಿ ಮಗ…’: ದಳಪತಿಗಳ ಮೇಲೆ ಆಲ್ಕೋಡ್​ ವಾಗ್ದಾಳಿ

    ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಈ ದಂಪತಿ ಮತ್ತು 95 ಜನ ಇತರ ಪಾಕಿಸ್ತಾನಿಗಳು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗೆ ಸ್ವದೇಶಕ್ಕೆ ಹಿಂದಿರುಗಲಾರದೆ, ಗಡಿಯಲ್ಲಿ ಸಿಕ್ಕಿಕೊಂಡಿರುವ ಜನರಲ್ಲಿ 47 ಮಂದಿ ಮಕ್ಕಳಿದ್ದಾರೆ. ಒಂದು ವರ್ಷಕ್ಕೂ ಕಡಿಮೆ ವಯಸ್ಸಿನ ಆರು ಮಕ್ಕಳು ಭಾರತದಲ್ಲೇ ಜನಿಸಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ.

    ನಿಂಬು ಬಾಯಿಗೆ ಡಿಸೆಂಬರ್​ 2 ರಂದು ಹೆರಿಗೆ ನೋವು ಕಾಣಿಸಿಕೊಂಡಾಗ, ಸ್ಥಳೀಯ ಮಹಿಳೆಯರು ಅಗತ್ಯ ವಸ್ತುಗಳನ್ನು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಸಹಾಯ ಮಾಡಿದರು ಎನ್ನಲಾಗಿದೆ. ಇದೇ ಗುಂಪಿನಲ್ಲಿರುವ ಮತ್ತೊಬ್ಬ ಪಾಕಿಸ್ತಾನೀ ನಾಗರಿಕ ಲಾಗ್ಯಾ ರಾಮ್​ ಹೆಂಡತಿಗೂ 2020 ರಲ್ಲಿ ತಮ್ಮ ಸೋದರನನ್ನು ನೋಡಲು ರಾಜಸ್ತಾನದ ಜೋಧಪುರಕ್ಕೆ ತೆರಳಿದ್ದಾಗ ಹೆರಿಗೆ ಆಗಿತ್ತು. ಆ ಮಗುವಿಗೆ ‘ಭಾರತ್​’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಮನೆ ಇಲ್ಲಾ ಸ್ವಾಮಿ.. ಎಂದು ಗ್ರಾ.ಪಂ. ಕಚೇರಿಯಲ್ಲಿ ಠಿಕಾಣಿ ಹೂಡಿದರು!

    ಸೆಲ್ಫಿ ತೆಗೆಯಲು ಪಾರ್ಲಿಮೆಂಟ್ಗೆ ಹೋಗ್ತೀರಾ? ಮತ್ತೆ ಟ್ರೋಲ್​ ಆದ ಶಶಿ ತರೂರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts