More

    ಚಿಕ್ಕವಯಸ್ಸಲ್ಲೇ ಬಹಳ ಎತ್ತರಕ್ಕೇರಿದ್ದಾಳೆ ಈ ಬಾಲಕಿ!; ಏಷ್ಯಾದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಈಕೆ ಈಗ ಸಾಧಕಿ…

    ನವದೆಹಲಿ: ಈ ಬಾಲಕಿ ಚಿಕ್ಕವಯಸ್ಸಿನಲ್ಲೇ ಬಹಳ ಎತ್ತರಕ್ಕೇರಿದ್ದಾಳೆ. ಹಾಗೆ ಎತ್ತರಕ್ಕೇರುವ ಮೂಲಕ ಏಷ್ಯಾದಲ್ಲಷ್ಟೇ ಅಲ್ಲ, ವಿಶ್ವದಲ್ಲೇ ದಾಖಲೆ ಮಾಡಿದ್ದಾಳೆ. ಹೀಗೊಂದು ಸಾಧನೆ ಮಾಡಿರುವ ಈ ಬಾಲಕಿಯ ಹೆಸರು ರಿತ್ವಿಕಾ ಶ್ರೀ.

    ಒಂಬತ್ತು ವರ್ಷದ ಬಾಲಕಿ ಅದೆಂಥ ಸಾಧನೆಯ ಶಿಖರವನ್ನು ಏರಬಹುದು ಎಂದು ಯಾರಾದರೂ ಮೂಗು ಮುರಿಯಬಹುದು. ಆದರೆ ದೊಡ್ಡ ಶಿಖರವೊಂದನ್ನು ಏರಿರುವುದೇ ಈಗ ಈ ಬಾಲಕಿಯ ಸಾಧನೆ. ಆಫ್ರಿಕದಲ್ಲಿನ ಅತ್ಯಂತ ಎತ್ತರದ ಶಿಖರವೆಂದೇ ಪ್ರಖ್ಯಾತವಾಗಿರುವ, ತಾಂಜೇನಿಯಾದಲ್ಲಿನ ಮೌಂಟ್​ ಕಿಲಿಮಂಜರೋವನ್ನು ಏರಿರುವ ಈ ಬಾಲಕಿ, ಆ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾಳೆ. ಏಕೆಂದರೆ ಹೀಗೆ ಈ ಶಿಖರವನ್ನು ಏರುವ ಮೂಲಕ ಮೌಂಟ್​ ಕಿಲಿಮಂಜರೋವನ್ನು ಏರಿದ ಏಷ್ಯಾದ ಅತಿ ಕಿರಿಯ ಬಾಲಕಿ ಹಾಗೂ ಜಗತ್ತಿನ ಅತಿ ಕಿರಿಯ ಸಾಧಕಿ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಆಂಧ್ರಪ್ರದೇಶದ ಈ ಬಾಲಕಿಗೆ ಇಂಥದ್ದೊಂದು ಸಾಧನೆ ಮಾಡಲು ಗೈಡ್​ ಆಗಿದ್ದಿದ್ದು ಬೇರಾರೂ ಅಲ್ಲ, ಈಕೆಯ ತಂದೆ. ಮಗಳೊಂದಿಗೆ ತಂದೆ ಕೂಡ ಸಮುದ್ರ ಮಟ್ಟದಿಂದ 5,681 ಮೀಟರ್ ಎತ್ತರದಲ್ಲಿರುವ ಈ ಪರ್ವತವನ್ನು ಏರಿದ್ದಾರೆ. ರಿತ್ವಿಕಾಳ ತಂದೆ ಕ್ರಿಕೆಟ್​ ಕೋಚ್ ಹಾಗೂ ಸ್ಪೋರ್ಟ್ಸ್​ ಕೋ-ಆರ್ಡಿನೇಟರ್ ಆಗಿರುತ್ತಾರೆ. ಈಕೆ ತೆಲಂಗಾಣದ ಭೋಂಗಿರ್​ನ ರಾಕ್​ ಕ್ಲೈಂಬಿಂಗ್ ಸ್ಕೂಲ್​ನಲ್ಲಿ ತರಬೇತಿ ಪಡೆದಿದ್ದು, ಲಡಾಖ್​ನ ತರಬೇತಿಯಲ್ಲಿ ಲೆವೆಲ್ 2 ಸಾಧಿಸಿದ್ದಾಳೆ. ಕಿಲಿಮಂಜರೋವನ್ನು ಏರಿದ ಈಕೆಯ ಸಾಧನೆಯನ್ನು ಅನಂತಪುರದ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್​ ಗಂಧಮ್ ಚಂದ್ರುಡು ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬೆತ್ತಲೆ ಪೂಜೆ ಮಾಡಿದ್ರೆ 50 ಕೋಟಿ ರೂ. ಮಳೆಯಂತೆ ಸುರಿಯುತ್ತೆ: ಅಪ್ರಾಪ್ತೆ ಬೆನ್ನು ಬಿದ್ದವರ ಕತೆ ಏನಾಯ್ತು?

    ಕರೊನಾ ಲಸಿಕೆ ನನಗೇಕ್ರಿ? ಎಂದ ಮಲ್ಲಿಕಾರ್ಜುನ ಖರ್ಗೆ, ಬೇಡ ಎನ್ನಲು ಅವರು ನೀಡಿದ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts