More

    ದಾಹ ನೀಗಿಸಿದ ಧೀಮಂತ ನಾಯಕ

    ಗದಗ: ಕೆ.ಎಚ್. ಪಾಟೀಲ ಅವರು ಶಾಸಕರಾಗಿದ್ದಾಗ ಗದಗ-ಬೆಟಗೇರಿ ಅವಳಿ ನಗರಕ್ಕೆ ತುಂಗಭದ್ರೆ ನೀರು ತಂದಿದ್ದಾರೆ. ಅಷ್ಟೇ ಅಲ್ಲ, ಸಹಕಾರ ತತ್ವದಡಿ ಶಿಕ್ಷಣ, ಉದ್ಯೋಗ ಒದಗಿಸುವ ಸಂಸ್ಥೆಗಳನ್ನು ಹುಟ್ಟು ಹಾಕಿದ ಧೀಮಂತ ನಾಯಕ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

    ತಾಲೂಕಿನ ಹುಲಕೋಟಿಯಲ್ಲಿ ಮಂಗಳವಾರ ಆಯೋಜಿಸಿದ್ದ ದಿ. ಕೆ. ಎಚ್. ಪಾಟೀಲ ಅವರ 97ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕೆ.ಎಚ್. ಪಾಟೀಲ ಅವರು ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಆರಂಭಿಸಿ, ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದವರು. ಅಧಿಕಾರಾವಧಿ ಸಣ್ಣದಿದ್ದರೂ ಅವರ ಕಾರ್ಯಗಳು ಛಾಪು ಮೂಡಿಸಿವೆ’ ಎಂದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹುಲಕೋಟಿಯನ್ನು ರಾಜ್ಯವಷ್ಟೇ ಅಲ್ಲ, ದೇಶದ ನಕಾಶೆಯಲ್ಲಿ ಉಳಿದಿರುವುದಕ್ಕೆ ಕೆ.ಎಚ್. ಪಾಟೀಲ ಅವರ ಕೊಡುಗೆ ಅಪಾರ. ಅಭಿವೃದ್ಧಿ ವಿಷಯದಲ್ಲಿ ಅವರೆಂದೂ ರಾಜಕಾರಣ ಮಾಡಲಿಲ್ಲ ಎಂದರು.

    ಶಾಸಕ ಎಚ್.ಕೆ. ಪಾಟೀಲ ಅವರು ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಣಾನ ಸಂಸ್ಥೆಯ ಯೋಗ ಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮಾಜಿ ಸಚಿವ ಬಿ.ಆರ್. ಯಾವಗಲ್ ಅವರು ವಿಶೇಷ ಅತಿಥಿ ಗೃಹವನ್ನು ಲೋಕಾರ್ಪಣೆಗೊಳಿಸಿದರು. ಗದಗ ಜಿಪಂ ಅಧ್ಯಕ್ಷ ವಿ.ಐ. ನಾಡಗೌಡ್ರ ಅವರು ಆರ್.ಎಂ.ಎಸ್. ಸಂಸ್ಥೆಯ ಇನ್​ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆಂಡ್ ಪ್ಯಾರಾ ಮೆಡಿಕಲ್ ಸೈನ್ಸ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು, 1993 ರಿಂದ ಪ್ರತಿವರ್ಷ ಜನೋಪಯೋಗಿ ರಚನಾತ್ಮಕ ಕಾರ್ಯಗಳ ಮೂಲಕ ಜಯಂತಿ ಆಚರಿಸಲಾಗುತ್ತಿದೆ ಎಂದರು.

    ಮಾಜಿ ಶಾಕರಾದ ಜಿ.ಎಸ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಗದಗ ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಪಂ ಸದಸ್ಯೆ ಶಕುಂತಲಾ ಮೂಲಿಮನಿ, ಗದಗ ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಉಪಾಧ್ಯಕ್ಷೆ ಮಮತಾಜಬೇಗಂ ನದಾಫ್, ಸದಸ್ಯ ಮೋಹನ ದುರಗಣ್ಣವರ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಹುಲಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಬಳಗಾನೂರ, ಉಪಾಧ್ಯಕ್ಷೆ ಕಮಲಾಕ್ಷಿ ಹಳ್ಳಿ, ಜಿಪಂ ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ರಾಜೂಗೌಡ ಕೆಂಚನಗೌಡ್ರ, ಎಚ್.ವೈ. ದೇಸಾಯಿಗೌಡ್ರ, ಎಲ್.ಡಿ. ಚಂದಾವರಿ, ಎಂ.ಆರ್. ಪಾಟೀಲ ಇತರರು ವೇದಿಕೆಯಲ್ಲಿದ್ದರು. ಡಾ.ಎಸ್.ಆರ್. ನಾಗನೂರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಗೀತಾಂಜಲಿ ಮೆಣಸಿನಕಾಯಿ ಪ್ರಾರ್ಥಿಸಿದರು. ಜೆ.ಕೆ. ಜಮಾದಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts