More

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗ್ಯಾರಂಟಿ: ಪ್ರಧಾನಿ ಮೋದಿ

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

    ಇದನ್ನೂ ಓದಿ:ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ 41 ಸಾವಿರ ಕೋಟಿ ಮೊತ್ತದ 2 ಸಾವಿರಕ್ಕೂ ಹೆಚ್ಚು ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು.

    ನಮ್ಮ ಸರ್ಕಾರದ ಮೂರನೇ ಅವಧಿ ಜೂನ್‌ನಿಂದ ಕಾರ್ಯಾರಂಭ ಆಗಲಿದೆ. ನಮ್ಮ ಸರ್ಕಾರದ ವೇಗ ಹಾಗೂ ಅಭಿವೃದ್ಧಿ ಕಾರ್ಯಗಳು ಜನರನ್ನು ಆಶ್ಚರ್ಯಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಫೆಬ್ರವರಿ 26 ಸೋಮವಾರ ಕೂಡಾ ದೇಶಾದ್ಯಂತ ಒಟ್ಟು 41 ಸಾವಿರ ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗುವ ರೈಲ್ವೆ ಇಲಾಖೆಯ 2,000 ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲ ಸೌಕರ್ಯ ವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಈ ವಿಚಾರ ತಿಳಿಸಿದರು.
    ಭಾರತದಲ್ಲಿ ರೈಲ್ವೆ ಅಭಿವೃದ್ಧಿಯನ್ನು ಒತ್ತಿ ಹೇಳಿದ ಮೋದಿ ಅವರು, ವಂದೇ ಭಾರತ್​ ರೈಲುಗಳ ಪ್ರಾರಂಭ ಸೇರಿದಂತೆ ಕಳೆದ 10 ವರ್ಷಗಳಲ್ಲಿ ನವ ಭಾರತ ನಿರ್ಮಾಣವನ್ನು ಜನರು ಗಮನಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

    2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬರೋಬ್ಬರಿ 370 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಫೆಬ್ರವರಿ ತಿಂಗಳ ಆರಂಭದಲ್ಲಿ ಮೋದಿ ಹೇಳಿದ್ದರು. ಕೇಂದ್ರ ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ತಮ್ಮ ಮುಂದಿನ ಅವಧಿಯಲ್ಲಿ ದೇಶವು ಅತಿ ದೊಡ್ಡ ನಿರ್ಣಯಗಳಿಗೆ ಸಾಕ್ಷಿಯಾಗಲಿದೆ. ಮುಂದಿನ 1 ಸಾವಿರ ವರ್ಷಕ್ಕೆ ಭದ್ರ ಬುನಾದಿ ಹಾಕುವ ನಿರ್ಣಯಗಳನ್ನು ಕೈಗೊಳ್ಳುವುದಾಗಿ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

    ದೇಶದ ಜನರ ಮನಸ್ಥಿತಿಯನ್ನು ಗ್ರಹಿಸಬಲ್ಲೇ, ಅದು ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ 400 ಸ್ಥಾನ ಹಾಗೂ ಬಿಜೆಪಿಗೆ 370 ಸ್ಥಾನ ಸಿಗುತ್ತದೆ. ಪ್ರಧಾನ ಮಂತ್ರಿಯಾಗಿ ತಮ್ಮ 10 ವರ್ಷಗಳ ಆಡಳಿತ ಅನುಭವದಿಂದ ಈ ಮಾತುಗಳನ್ನು ಹೇಳುತ್ತಿರೋದಾಗಿ ಪ್ರಧಾನಿ ಮೋದಿ ಹೇಳಿದ್ದರು.
    ಭಾರತದ ಇಂದಿನ ಪ್ರಬಲ ಆರ್ಥಿಕತೆ, ವೇಗವನ್ನು ಕಂಡರೆ ಭಾರತ ಇಂದು ಅಭಿವೃದ್ದಿ ದೇಶವಾಗುತ್ತಿದೆ. ನಾವು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಭಾರತ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವಿಶ್ವಾಸದಿಂದ ಹೇಳಬಲ್ಲೇ. ಇದು ಮೋದಿ ಗ್ಯಾರಂಟಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಯುವ ಜನರ ಕನಸುಗಳು ನನ್ನ ಸಂಕಲ್ಪವಾಗಿದೆ. ಯುವ ಜನರ ಕನಸುಗಳು, ಕಠಿಣ ಪರಿಶ್ರಮ ಮತ್ತು ನನ್ನ ಸಂಕಲ್ಪ ಎಲ್ಲವೂ ವಿಕಸಿತ ಭಾರತದ ಗ್ಯಾರಂಟಿ ಎಂದರು. ವರ್ಚುವಲ್‌ ಕಾರ್ಯಕ್ರಮದಲ್ಲಿ ದೇಶಾದ್ಯಂತ ನೂರಾರು ಸಂಸದರು ಮತ್ತು ಶಾಸಕರು, ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

    ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts