More

    ‘ತಿಮ್ಮನ ಮೊಟ್ಟೆಗಳು’ ಚಿತ್ರೀಕರಣ ಪೂರ್ಣ; ಇದು ಮಲೆನಾಡಿನ ಇನ್ನೊಂದು ಕಥೆ …

    ಬೆಂಗಳೂರು: ಈ ಮುಂಚೆ ‘ಹೊಂಬಣ್ಣ’ ಎಂಬ ಚಿತ್ರ ನಿರ್ದೇಶಿಸಿದ್ದ ರಕ್ಷಿತ್ ತೀರ್ಥಹಳ್ಳಿ, ಆ ನಂತರ ‘ಎಂಥಾ ಕಥೆ ಮಾರಾಯ’ ಎಂಬ ಸಿನಿಮಾ ಮಾಡಿದ್ದರು. ಅದು ಬಿಡುಗಡೆಯಾಗುವುದಕ್ಕೆ ಮುನ್ನವೇ ಸದ್ದಿಲ್ಲದೆ ‘ತಿಮ್ಮನ ಮೊಟ್ಟೆಗಳು’ ಎಂಬ ಇನ್ನೊಂದು ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.

    ಇದನ್ನೂ ಓದಿ: ಖತರ್​ನಾಕ್​ ‘ರಾಕ್ಷಸರ’ನ್ನು ಬೇಟೆ ಆಡಲು ಹೊರಟ ಸಾಯಿಕುಮಾರ್​ …

    ವಿಶೇಷವೆಂದರೆ, ಈ ‘ತಿಮ್ಮನ ಮೊಟ್ಟೆಗಳು’ ಕಥೆಯು ಅವರದ್ದೇ ‘ಕಾಡಿನ ನೆಂಟರು’ ಎಂಬ ಕಥಾಸಂಕಲನ ಕಥೆಯೊಂದನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಅವರ ಶ್ರೀಕೃಷ್ಣ ಬ್ಯಾನರ್ ಅಡಿಯಲ್ಲಿ ‘ತಿಮ್ಮನ ಮೊಟ್ಟೆಗಳು’ ಚಿತ್ರವು ನಿರ್ಮಾಣವಾಗಿದೆ.

    ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತಲೂ ಒಂದೇ ಹಂತದಲ್ಲಿ ಚಿತ್ರೀಕರಣವಾಗಿರುವ ‘ತಿಮ್ಮನ ಮೊಟ್ಟೆಗಳು’ ಚಿತ್ರದಲ್ಲಿ ಮಲೆನಾಡಿನ ಜೀವನ ಶೈಲಿ, ಪ್ರಕೃತಿ ಮತ್ತು ಮಾನವೀಯ ಮೌಲ್ಯಗಳನ್ನೊಳನ್ನು ಒಳಗೊಂಡಿದೆ. ಚಿತ್ರದಲ್ಲಿ ಶೃಂಗೇರಿಯ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ, ಆಶಿಕಾ ಸೋಮಶೇಕರ್, ಪ್ರಗತಿ ಮುಂತಾದವರು ಅಭಿನಯಿಸಿದ್ದಾರೆ.

    ಇದನ್ನೂ ಓದಿ: ‘ಥಗ್ಸ್​​ ಆಫ್​ ರಾಮಘಡ’ ಚಿತ್ರಕ್ಕೆ ಉತ್ತರ ಕರ್ನಾಟಕದ ಆ ಘಟನೆಯೇ ಸ್ಫೂರ್ತಿ …

    ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಪ್ರವೀಣ್ ಎಸ್ ಅವರ ಛಾಯಾಗ್ರಹಣ ಹಾಗೂ ಹೇಮಂತ್ ಜೋಯಿಸ್ ಸಂಗೀತವಿದೆ. ಚಿತ್ರ ಸದ್ಯ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಿದೆ.

    ಹಾಡಿನೊಂದಿಗೆ ಮುಕ್ತಾಯವಾಯಿತು ಪೃಥ್ವಿ ಅಂಬರ್​, ಮಿಲನಾ ಅಭಿನಯದ ಹೊಸ ಚಿತ್ರ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts