More

    ಅಯ್ಯೋ ದೇವ್ರೆ ನಾವ್ಯಾಕೆ ಕಳ್ಳರನ್ನು ಹಿಡಿದುಕೊಟ್ವಪ್ಪೋ…

    ಔರಾದ್‌: ಯಾವುದಾದರೂ ಕಳ್ಳರನ್ನು ಹಿಡಿದುಕೊಟ್ಟರೆ ಅಂಥವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಬರುವುದು ಸಾಮಾನ್ಯ. ಇದೇ ಹುಮ್ಮಸ್ಸಿನಿಂದ ಹಲವಾರು ಗ್ರಾಮಗಳಲ್ಲಿ ಗ್ರಾಮಸ್ಥರೇ ಖುದ್ದಾಗಿ ಕಳ್ಳರನ್ನು ಹಿಡಿದುಕೊಡುವುದೂ ಇದೆ.

    ಅಂಥದ್ದೇ ಒಂದು ಘಟನೆ  ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಸಂತಪೂರದಲ್ಲಿ ನಡೆದಿದೆ. ಪದೇ ಪದೇ ಸರಗಳ್ಳತನ ಮಾಡುತ್ತಿದ್ದ ಎಂಟು ಮಂದಿಯನ್ನು ಗ್ರಾಮಸ್ಥರು ಪೊಲೀಸರ ಸಹಾಯದಿಂದ ಬಂಧಿಸಿ ಹಿಡಿದುಕೊಟ್ಟಿದ್ದಾರೆ. ಕಳ್ಳರನ್ನು ಹಿಡಿದುಕೊಟ್ಟ ಖುಷಿಯಿಂದ ಇಲ್ಲಿಯವರೆಗೆ ಗ್ರಾಮಸ್ಥರು ನಲಿದಾಡುತ್ತಿದ್ದರು.

    ಇದನ್ನೂ ಓದಿ: ಕೇಂದ್ರ ಸರ್ಕಾರ ಮೂರು ವಿಚಾರಗಳಲ್ಲಿ ಸುಳ್ಳು ಹೇಳುತ್ತಿದೆ…: ರಾಹುಲ್​ ಗಾಂಧಿ ಹೊಸ ಆರೋಪ

    ಆದರೆ ಈಗ ಆದದ್ದೇ ಬೇರೆ. ಬಂಧಿಸಿರುವ ಸರಗಳ್ಳರಲ್ಲಿ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಬೊರ್ಗಿ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಈತ ತಲೆನೋವಾಗಿದೆ. ಗ್ರಾಮಸ್ಥರಂತೂ ತಾವು ಯಾಕಾದರೂ ಕಳ್ಳನನ್ನು ಹಿಡಿದುಕೊಟ್ಟೆವೋ ಎಂದು ಗೋಳಾಡುತ್ತಿದ್ದಾರೆ.

    ಜುಲೈ 14ರಂದು ಸರಗಳ್ಳತನ ಪ್ರಕರಣದಲ್ಲಿ 8 ಜನರನ್ನು ಸಂತಪೂರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅದಕ್ಕೂ ಮುಂಚೆಯೇ ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಅದರಲ್ಲಿ ಬೀದರ್‌ ನಗರದ ಇರಾನಿ ಕಾಲೋನಿ ನಿವಾಸಿಗಳಿಬ್ಬರಿಗೆ ಜುಲೈ 17ರಂದು ಸೋಂಕು ದೃಢಪಟ್ಟಿದೆ. ಆದ್ದರಿಂದ ಇದೀಗ ಗ್ರಾಮಸ್ಥರು ಹಾಗೂ ಪೊಲೀಸರು ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ.

    ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಪ್ರತಾಪ್ ಎಸ್ಕೇ‍ಪ್‌! ದಾಖಲಾಯ್ತು ಇನ್ನೊಂದು ಎಫ್‌ಐಆರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts