More

    ಕೊವಿಡ್​-19 ರೋಗಿಯ ಮನೆಗೆ ನುಗ್ಗಿ ಮಟನ್​ ತಯಾರಿಸಿ ಊಟ ಮಾಡಿ…ಹಣ ಕದ್ದ ವಿಚಿತ್ರ ಕಳ್ಳರು…!

    ಒಂದು ಮನೆಗೆ ನುಗ್ಗಿದ ಕಳ್ಳರು, ಅಲ್ಲಿ ಮಟನ್​ ಮತ್ತು ಅನ್ನ ತಯಾರಿಸಿ ಭರ್ಜರಿಯಾಗಿ ಊಟ ಮಾಡಿ, ನಂತರ ಮನೆಯಲ್ಲಿದ್ದ 50,000 ರೂ.ನಗದು ಮತ್ತು ಅಪಾರ ಪ್ರಮಾಣದ ಚಿನ್ನಾಭರಣವನ್ನು ಕದ್ದಿದ್ದಾರೆ.

    ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು ಜಾರ್ಖಂಡದ ಜೆಮ್​ಶೆಡ್​ಪುರದಲ್ಲಿ. ಹಲುದ್​​ಬೋನಿ ಏರಿಯಾದಲ್ಲಿರುವ ಕೊವಿಡ್​-19 ರೋಗಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬಾಗಿಲನ್ನು ಒಡೆದು ಮನೆಯೊಳಗೆ ಹೋಗಿ, ಮಟನ್​, ಚಪಾತಿ, ಅನ್ನ ತಯಾರಿಸಿಕೊಂಡು, ಹೊಟ್ಟೆತುಂಬ ತಿಂದಿದ್ದಾರೆ. ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸೆಪ್ಟಂಬರ್​ನಲ್ಲಿ ಶುರುವಾಗುತ್ತಾ ಶಾಲೆ; ಸಚಿವ ಸುರೇಶ್‌ಕುಮಾರ್ ಹೇಳಿದ್ದೇನು?

    ಕೊವಿಡ್​-19 ಸೋಂಕಿಗೆ ಒಳಗಾಗಿದ್ದ ಮನೆಯ ಮಾಲೀಕ ಚಿಕಿತ್ಸೆಗಾಗಿ ಟಾಟಾ ಮೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಡ್ಮಿಟ್ ಆಗಿದ್ದರು. ಆ ಮನೆ ಸುತ್ತಲೂ ಸೀಲ್​ಡೌನ್​ ಆಗಿದ್ದರಿಂದ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಇಡೀ ಏರಿಯಾವನ್ನು ಕಂಟೇನ್​ಮೆಂಟ್​ ಝೋನ್​ ಎಂದು ಘೋಷಿಸಲಾಗಿತ್ತು. ಅದೆಲ್ಲವನ್ನೂ ಮೀರಿ ಮನೆಗೆ ನುಗ್ಗಿದ ಕಳ್ಳರು, ಹರಿತ ಆಯುಧಗಳನ್ನು ಉಪಯೋಗಿಸಿ ಮನೆಯ ಬೀಗ ಒಡೆದಿದ್ದಾರೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

    ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. (ಏಜೆನ್ಸೀಸ್​)

    ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts