ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ

ಪಣಜಿ: ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಕಂಪನಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​​ ಕೊವಿಡ್-19 ಲಸಿಕೆಯ ಮಾನವರ ಮೇಲಿನ ಪ್ರಯೋಗ ಈಗಾಗಲೇ ಪ್ರಾರಂಭವಾಗಿದೆ. ಹರ್ಯಾಣದ ರೊಹ್ಟಕ್‌ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜು.17ರಿಂದ ಕೊವಾಕ್ಸಿನ್​​ನ್ನು ಮಾನವರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಹಾಗೇ, ನಾಳೆ (ಜು.20)ಯಿಂದ ಉತ್ತರ ಗೋವಾದ ರೆಡ್ಕರ್​ ಖಾಸಗಿ ಆಸ್ಪತ್ರೆಯಲ್ಲೂ ಕೊವಾಕ್ಸಿನ್​ ಹ್ಯೂಮನ್​ ಟ್ರಯಲ್​ ಪ್ರಾರಂಭವಾಗುತ್ತಿದೆ. ದೇಶಾದ್ಯಂತ ಒಟ್ಟು 12 ವೈದ್ಯಕೀಯ ಸಂಸ್ಥೆಗಳಲ್ಲಿ ಕೊವಾಕ್ಸಿನ್​ ಲಸಿಕೆಯ ಮಾನವರ ಮೇಲಿನ ಪ್ರಯೋಗ ನಡೆಯಲಿದೆ. ಇದೀಗ ಉತ್ತರ ಗೋವಾದ ಆಸ್ಪತ್ರೆಯಲ್ಲೂ ಪ್ರಾರಂಭವಾಗಿದೆ. … Continue reading ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ