More

    ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ

    ಪಣಜಿ: ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಕಂಪನಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​​ ಕೊವಿಡ್-19 ಲಸಿಕೆಯ ಮಾನವರ ಮೇಲಿನ ಪ್ರಯೋಗ ಈಗಾಗಲೇ ಪ್ರಾರಂಭವಾಗಿದೆ.

    ಹರ್ಯಾಣದ ರೊಹ್ಟಕ್‌ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜು.17ರಿಂದ ಕೊವಾಕ್ಸಿನ್​​ನ್ನು ಮಾನವರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಹಾಗೇ, ನಾಳೆ (ಜು.20)ಯಿಂದ ಉತ್ತರ ಗೋವಾದ ರೆಡ್ಕರ್​ ಖಾಸಗಿ ಆಸ್ಪತ್ರೆಯಲ್ಲೂ ಕೊವಾಕ್ಸಿನ್​ ಹ್ಯೂಮನ್​ ಟ್ರಯಲ್​ ಪ್ರಾರಂಭವಾಗುತ್ತಿದೆ.

    ದೇಶಾದ್ಯಂತ ಒಟ್ಟು 12 ವೈದ್ಯಕೀಯ ಸಂಸ್ಥೆಗಳಲ್ಲಿ ಕೊವಾಕ್ಸಿನ್​ ಲಸಿಕೆಯ ಮಾನವರ ಮೇಲಿನ ಪ್ರಯೋಗ ನಡೆಯಲಿದೆ. ಇದೀಗ ಉತ್ತರ ಗೋವಾದ ಆಸ್ಪತ್ರೆಯಲ್ಲೂ ಪ್ರಾರಂಭವಾಗಿದೆ. ನಾವು ಗೋವಾದ ಸ್ವಯಂ ಸೇವಕರ ಮೇಲೆ ನಾಳೆಯಿಂದ ಲಸಿಕೆ ಪ್ರಯೋಗ ಮಾಡುತ್ತಿದ್ದೇವೆ. ಪ್ರಯೋಗಕ್ಕೆ ಒಳಗಾಗಲಿರುವವರ ಸ್ವಾಬ್​​ನ್ನು ದೆಹಲಿಗೂ ಕಳಿಸಲಾಗುವುದು ಎಂದು ರೆಡ್ಕರ್​ ಆಸ್ಪತ್ರೆಯ ಧನಂಜಯ ಲಾಡ್​ ತಿಳಿಸಿದ್ದಾರೆ.

    ನಾವು ನಾಳೆಯಿಂದ ಪ್ರಯೋಗ ಶುರು ಮಾಡಿದರೂ ಒಮ್ಮೆಲೆ ಲಸಿಕೆಯನ್ನು ನೀಡುವುದಿಲ್ಲ. ಮೊದಲನೇದಾಗಿ ಅವರ ಸಾಮರ್ಥ್ಯವನ್ನು ಟೆಸ್ಟ್​ ಮಾಡಿಕೊಳ್ಳುತ್ತೇವೆ. ಹಾಗೇ, ದೆಹಲಿಗೆ ಕಳಿಸಿದ ಸ್ವಾಬ್​ನ ರಿಪೋರ್ಟ್​ ಬಂದ ಮೇಲೆ ಲಸಿಕೆ ಪ್ರಯೋಗ ಶುರುವಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ರಾಮಮಂದಿರ ನಿರ್ಮಾಣ ಮಾಡಿದರೆ ಕರೊನಾ ಸೋಂಕು ನಿರ್ಮೂಲನೆ ಆಗತ್ತಾ?; ಶರದ್​ ಪವಾರ್​ ವ್ಯಂಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts