More

    ಕ್ರೂಸ್​ ಪಾರ್ಟಿಗೆ ಆರ್ಯನ್​ನ ಕರ್ಕೊಂಡು ಹೋಗಿದ್ರು! ಮಹಾ ಸಚಿವನಿಂದ ಮತ್ತಷ್ಟು ಸ್ಫೋಟಕ ಹೇಳಿಕೆ​

    ಮುಂಬೈ: ಕ್ರೂಸ್​ ಶಿಪ್​ ಡ್ರಗ್ಸ್​ ಪಾರ್ಟಿ ಕೇಸಿನಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದಿರುವ ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಕ್ಕಿಹಾಕಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಮೊದಲಿನಿಂದ ಹೇಳುತ್ತಾ ಬಂದಿದ್ದಾರೆ. ಇದೀಗ ಆ ಬಗ್ಗೆ ಮತ್ತಷ್ಟು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

    ಕ್ರೂಸ್​ ಪಾರ್ಟಿಗೆ ಆರ್ಯನ್​ ಖಾನ್​ ಟಿಕೆಟ್​​ ಖರೀದಿಸಿಯೇ ಇರಲಿಲ್ಲ. ಪ್ರತೀಕ್​ ಗಾಬ ಮತ್ತು ಆಮೀರ್​ ಫರ್ನೀಚರ್​ವಾಲಾ ಎಂಬುವರು ಅವನನ್ನು ಅಲ್ಲಿಗೆ ಕರೆದುಕೊಂಡುಬಂದಿದ್ದರು ಎಂದಿರುವ ಮಲಿಕ್​, “ಇದು ಕಿಡ್​​ನ್ಯಾಪ್​ ಮತ್ತು ಹಣದ ಬೇಡಿಕೆಯ ಸಂಗತಿಯಾಗಿದೆ. ಮೋಹಿತ್​ ಕಾಂಬೋಜ್​ ಇದರ ಮಾಸ್ಟರ್​​ಮೈಂಡ್​ ಆಗಿದ್ದು, ಹಣದ ಬೇಡಿಕೆ ಮಾಡುವಲ್ಲಿ ಸಮೀರ್​ ವಾಂಖೆಡೆಯ ಪಾರ್ಟ್​​ನರ್​ ಆಗಿದ್ದಾನೆ” ಎಂದು ಅವರು ಆರೋಪಿಸಿದ್ದಾರೆ.

    ಇದನ್ನೂ ಓದಿ: ನಟ ಕಮಲ್​ ಹಾಸನ್​ ಜನ್ಮದಿನ: ಇದೇ ನನಗೆ ಉಡುಗೊರೆ ಎಂದು ಕೇಳಿದ್ದೇನು?

    ಬಿಜೆಪಿ ನಾಯಕರಾದ ಮೋಹಿತ್​ ಕಾಂಬೋಜ್​ ಮತ್ತು ವಾಂಖೆಡೆ ಅಕ್ಟೋಬರ್​ 7 ರಂದು ಓಶಿವಾರಾ ಸ್ಮಶಾನದ ಹೊರಗೆ ಭೇಟಿಯಾಗಿದ್ದರು. ತದನಂತರ ವಾಂಖೆಡೆ ಗಾಬರಿಗೊಂಡು ತಮ್ಮನ್ನು ಹಿಂಬಾಲಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದರು. ಹತ್ತಿರದ ಸಿಸಿಟಿವಿ ಕೆಲಸ ಮಾಡುತ್ತಿರಲಿಲ್ಲದ್ದು ಅವರ ಅದೃಷ್ಟ. ಇಲ್ಲದಿದ್ದರೆ ಆ ಫೂಟೇಜನ್ನು ನಾವು ತೋರಿಸಬಹುದಿತ್ತು ಎಂದು ಎನ್​ಸಿಪಿ ನಾಯಕರೂ ಆದ ಸಚಿವ ಮಲಿಕ್​ ಎಎನ್​ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. (ಏಜೆನ್ಸೀಸ್)

    ಮಹಾ ಸಚಿವ ನವಾಬ್​​ ಮಲಿಕ್​ ವಿರುದ್ಧ ಮಾನನಷ್ಟ ಮೊಕದ್ದಮೆ; 1.25 ಕೋಟಿ ರೂ. ಪರಿಹಾರ ಬೇಡಿಕೆ

    ಲಾರಿ ಚಕ್ರಕ್ಕೆ ಸಿಲುಕಿ ಕಾಲೇಜು ವಿದ್ಯಾರ್ಥಿನಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts