More

    ಮಕ್ಕಳಾಗದ ದಂಪತಿಗಳೇ ಇವರ ಟಾರ್ಗೆಟ್​! ಬಾಡಿಗೆ ತಾಯಿ ಹೆಸರಲ್ಲಿ ಬಡ ಮಕ್ಕಳ ಮಾರಾಟ

    ಬೆಂಗಳೂರು: ಮಕ್ಕಳಾಗದೆ ಕಂಡಕಂಡ ದೇವರಿಗೆ ಕೈಮುಗಿದು ಬಾಡಿಗೆ ತಾಯಿಯ ಮೂಲಕ(ಸರ್ರೊಗೆಸಿ) ಮಕ್ಕಳು ಪಡೆಯೋಕೆ ಹಂಬಲಿಸುವ ದಂಪತಿಗಳನ್ನೇ ಟಾರ್ಗೆಟ್​ ಮಾಡಿಕೊಂಡಿರುವ ದುಷ್ಕರ್ಮಿಗಳ ಗುಂಪೊಂದು ರಾಜಧಾನಿಯಲ್ಲಿ ಪತ್ತೆಯಾಗಿದೆ. ಮಕ್ಕಳಿಲ್ಲದ ಹಣವಂತರ ವೀಕ್​​ನೆಸ್ಸನ್ನೇ ಬಂಡವಾಳ ಮಾಡಿಕೊಂಡು ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ದಂಧೆ ನಡೆಸುತ್ತಿದ್ದುದನ್ನು ಬೆಂಗಳೂರು ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿ ಬೆಳಕಿಗೆ ತಂದಿದ್ದಾರೆ.

    ಬಾಡಿಗೆ ತಾಯಿ ಮೂಲಕ ಮಕ್ಕಳು ಮಾಡಿಸಿಕೊಡ್ತೀವಿ ಅಂತ ಹೇಳಿ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡುವುದು; ನಂತರ ಬಡಕುಟಂಬದ ಮಕ್ಕಳನ್ನು ಕಡಿಮೆ ಹಣಕ್ಕೆ ಕೊಂಡು, ಬಾಡಿಗೆ ತಾಯಿ ಮೂಲಕ ಮಗು ಆಗಿದೆ ಎಂದು ನಂಬಿಸಿ ಮಾರಾಟ ಮಾಡುವುದು ಈ ಗ್ಯಾಂಗ್​ನ ಕಾರ್ಯವೈಖರಿ. ಈ ಖದೀಮರನ್ನು ಬಂಧಿಸಿರುವ ಬೆಂಗಳೂರು ದಕ್ಷಿಣ ವಲಯದ ಪೊಲೀಸರು, ಒಂದಲ್ಲ ಎರಡಲ್ಲ, ಮಾರಾಟವಾಗುತ್ತಿದ್ದ 13 ಮಕ್ಕಳನ್ನು ರಕ್ಷಿಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯವರಿಗೆ ವಂಚಿಸಿದ್ದ ಈ ದಂಧೆಕೋರರ ಜಾಲದ ಮೇಲೆ ಕಣ್ಣಿಟ್ಟಿದ್ದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ವಿಶೇಷ ತಂಡ ನಡೆಸಿದ ದಾಳಿಯಲ್ಲಿ ದೇವಿಷಣ್ಮುಗಮ್ಮ, ಮಹೇಶ್​, ರಾಜಣ್ಣ, ಜನಾರ್ಧನ್, ಧನಲಕ್ಷ್ಮೀ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರತ್ನ ಎಂಬಾಕೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ದಿನವೇ ದುರಂತ: ತಾಯಿ-ಮಗ ಕಾರಿನಲ್ಲೇ ಸಾವು

    “ಮಗು ಕಳ್ಳತನ‌ ಪ್ರಕರಣದಲ್ಲಿ ನಾವು ತನಿಖೆ ಮಾಡ್ತಿದ್ವಿ. ಆಗ ಮಗು ಮಾರಾಟ ಮಾಡಿದ್ದು ಗೊತ್ತಾಗಿತ್ತು. ಆಸ್ಪತ್ರೆಯಲ್ಲಿ ಬೇರೆ ತಾಯಂದಿರು ಮತ್ತು‌ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ವಿ. ತನಿಖೆ ನಡೆಯುತ್ತಿರುವಾಗ ಬಾಂಬೆ ಮತ್ತು ತಮಿಳುನಾಡಿನಲ್ಲಿ ನಾಲ್ಕು ಮಕ್ಕಳನ್ನ ಮಾರಾಟ ಮಾಡಿದ್ದು ತಿಳಿದುಬಂತು. ಮೃತ ಆರೋಪಿ ರತ್ನ ಮನೆ ಪರಿಶೀಲನೆ ಮಾಡಿದಾಗ 28 ತಾಯಿ ಕಾರ್ಡ್ ಸಿಕ್ಕಿದವು. ಕೆಂಗೇರಿಯ ಖಾಸಗಿ ಆಸ್ಪತ್ರೆಯ ಸಹಾಯದಿಂದ ಈ ತಾಯಿ ಕಾರ್ಡ್ ನಕಲು ಮಾಡಿ ದಂಧೆ ಮಾಡ್ತಿದ್ರು ಎಂದು ತಿಳಿದುಬಂತು” ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

    ಬಾಡಿಗೆ ಹಣ ಪಡೆದು ಮಗು ಮಾರಾಟ ಮಾಡುತ್ತಿದ್ದ ವೇಳೆ ನಡೆದ ದಾಳಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಡಮಕ್ಕಳಿಗೆ ಹೆಣ್ಣು ಮಗುವಿಗೆ 80 ಸಾವಿರ ಕೊಟ್ರೆ, ಗಂಡು ಮಗುವಿಗೆ 1.5 ಲಕ್ಷ ರೂ. ಫಿಕ್ಸ್ ಮಾಡುತ್ತಿದ್ದರು. ಹೀಗೆ ಮಕ್ಕಳನ್ನು ಕೊಂಡು 1.5 ಲಕ್ಷದಿಂದ 6 ಲಕ್ಷ ರೂ.ವರೆಗೂ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಸದ್ಯ 11 ಮಕ್ಕಳನ್ನು ಸಿಡಬ್ಲ್ಯೂಸಿಗೆ ಹಸ್ತಾಂತರ ಮಾಡಲಾಗಿದೆ. ಹೀಗೆ ಬಡ ಕುಟುಂಬವನ್ನು ಸಂಪರ್ಕಿಸಿ ವ್ಯಾಪಾರ ಮಾಡಲು ಸಿದ್ಧವಾಗಿದ್ದ ಇನ್ನೂ 17 ಮಕ್ಕಳ ಸುಳಿವಿದ್ದು, ಅದರ ತನಿಖೆ ಮುಂದುವರಿದಿದೆ ಎಂದು ಪಾಂಡೆ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಬಿಜೆಪಿ v/s ಕಾಂಗ್ರೆಸ್​​: ಸುದ್ದಿಗೋಷ್ಠಿಯಲ್ಲೇ ಧಿಕ್ಕಾರ ಕೂಗಿದ ಮಾಜಿ ಡಿಸಿಎಂ

    ಯುಪಿ ಘರ್ಷಣೆ: ‘ನಾನು ಅಲ್ಲಿರಲೇ ಇಲ್ಲ’ ಎಂದ ಕೇಂದ್ರ ಸಚಿವರ ಮಗ! ಘಟನೆ ಬಗ್ಗೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts