More

    ಹೊಸ ವರ್ಷದ ಬದಲಾವಣೆ; ಜನವರಿ 1ರಿಂದಲೇ ಇವೆಲ್ಲ ಜಾರಿ..

    ಹೊಸ ವರ್ಷಕ್ಕೆ ಕ್ಯಾಲೆಂಡರ್​ನ ಜತೆಗೆ ಕೆಲ ಹಣಕಾಸು ವ್ಯವಹಾರಗಳ ನಿಯಮಗಳು ಸೇರಿದಂತೆ ಹಲವು ಬದಲಾವಣೆಗಳು ಜನವರಿ 1ರಿಂದ ಜಾರಿಯಾಗಲಿವೆ. ಬ್ಯಾಂಕಿಂಗ್, ಸಾರಿಗೆ, ಸೇರಿದಂತೆ ಹಲವು ಸೇವೆಗಳಲ್ಲಿನ ಕೆಲ ನಿಯಮಗಳು ಬದಲಾಗಲಿದ್ದು, ಅಡುಗೆ ಅನಿಲದ ದರದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಜನರಿಗೆ ಕೆಲ ನಿಯಮಗಳು ಹೊರೆಯಾದರೆ ಇನ್ನು ಕೆಲವು ಸಹಕಾರಿಯಾಗಲಿವೆ.

    ವಾರಕ್ಕೊಮ್ಮೆ ಎಲ್​ಪಿಜಿ ಪರಿಷ್ಕರಣೆ?

    ತೈಲ ಬೆಲೆ ಪ್ರತಿದಿನ ಪರಿಷ್ಕರಣೆ ಆಗುವ ಮಾದರಿಯಲ್ಲಿ ಇನ್ಮುಂದೆ ಎಲ್​ಪಿಜಿ ಸಿಲಿಂಡರ್ ಬೆಲೆ ವಾರಕ್ಕೊಮ್ಮೆ ಪರಿಷ್ಕರಣೆ ಆಗಲಿದ್ದು, 2021ರಿಂದ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಸದ್ಯ ಎಲ್​ಪಿಜಿ ಬೆಲೆ ತಿಂಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದೆ ಎನ್ನಲಾಗಿದೆ.

    ಚೆಕ್ ಪಾವತಿ ಹೊಸ ನಿಯಮ ಜಾರಿ

    ಚೆಕ್ ವಂಚನೆ ತಡೆಯಲು -ಠಿ; 50 ಸಾವಿರ ಮತ್ತು ಅದಕ್ಕೂ ದೊಡ್ಡ ಮೊತ್ತದ ಪಾವತಿಗೆ ಆರ್​ಬಿಐ ಸೂಚಿಸಿರುವ ಹೊಸ ನಿಯಮ ಜಾರಿಗೆ ಬರಲಿದೆ. ಚೆಕ್​ನಲ್ಲಿ ಕನಿಷ್ಠ ಸುರಕ್ಷತಾ ವೈಶಿಷ್ಟ್ಯ ಸೂಚಿಸುವ ಸಿಟಿಎಸ್ -2010 ಮಾನದಂಡ ಇರುತ್ತದೆ. ಚೆಕ್ ನೀಡುವ ಮೊದಲು ಅದರ ಸಂಖ್ಯೆ, ದಿನಾಂಕ, ಹೆಸರು, ಖಾತೆ ಸಂಖ್ಯೆ, ಮೊತ್ತ ಮಾಹಿತಿಗಳನ್ನು ಬ್ಯಾಂಕ್​ಗೆ ನೀಡಬೇಕಾಗುತ್ತದೆ.

    ಈ ಡೆಬಿಟ್ ಕಾರ್ಡ್ ಬದಲಿಸಿ

    ಹೊಸ ವರ್ಷದಿಂದ ಗ್ರಾಹಕರು ತಮ್ಮ ಮ್ಯಾಗ್ನೆಟಿಕ್ ಎಟಿಎಂ-ಡೆಬಿಟ್ ಕಾರ್ಡ್  ಬದಲಿಸಬೇಕು ಎಂದು ಎಸ್​ಬಿಐ ತಿಳಿಸಿದೆ.

    ಫಾಸ್ಟ್ಯಾಗ್ ಕಡ್ಡಾಯ

    ನಾಲ್ಕು ಚಕ್ರಗಳಿಗೂ ಮೇಲ್ಪಟ್ಟ ಎಲ್ಲ ವಾಹನಗಳಿಗೆ ಫಾಸ್ಟಾ್ಯಗ್ ಕಡ್ಡಾಯವಾಗಲಿದೆ. ಫಾಸ್ಟಾ್ಯಗ್ ಇಲ್ಲದ ವಾಹನಗಳನ್ನು ಟೋಲ್​ಗಳಲ್ಲಿ ತಡೆಯಲಾಗುತ್ತದೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಸಬ್ಕಾ ವಿಶ್ವಾಸ್ ಮುಕ್ತಾಯ

    ಸೇವಾ ತೆರಿಗೆ ಮತ್ತು ಅಬಕಾರಿ ಸುಂಕಕ್ಕೆ ಸಂಬಂಧಿಸಿದ ಬಾಕಿ ಉಳಿದಿರುವ ವಿವಾದಾತ್ಮಕ ಪ್ರಕರಣಗಳ ಪರಿಹಾರಕ್ಕಾಗಿ ಪರಿಚಯಿಸಲಾಗಿದ್ದ ‘ಸಬ್ಕಾ ವಿಶ್ವಾಸ್ ಯೋಜನೆ’ ಡಿಸೆಂಬರ್​ಗೆ ಮುಕ್ತಾಯಗೊಳ್ಳಲಿದೆ.

    ಸೊನ್ನೆ ಕಡ್ಡಾಯ

    ಲ್ಯಾಂಡ್​ಲೈನ್ ಫೋನ್ ಮೂಲಕ ಮೊಬೈಲ್​ಗಳಿಗೆ ಕರೆ ಮಾಡುವಾಗ ಮೊದಲು ಸೊನ್ನೆ ನಮೂದಿಸುವುದು ಕಡ್ಡಾಯ.

    ನೆಫ್ಟ್ ವಹಿವಾಟಿಗೆ ಶುಲ್ಕವಿಲ್ಲ

    ಬ್ಯಾಂಕ್ ಗ್ರಾಹಕರು ನೆಫ್ಟ್ (ಎನ್​ಇಎಫ್​ಟಿ) ಮೂಲಕ ನಡೆಸುವ ವಹಿವಾಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನೆಫ್ಟ್​ನ 24*7 ಸೇವೆಯನ್ನು ಆರ್​ಬಿಐ ಡಿಸೆಂಬರ್ 16ರಿಂದ ಪ್ರಾರಂಭಿಸಿದೆ.

    ಇಪಿಎಫ್​ಒ ಸದಸ್ಯರಿಗೆ ಪಿಂಚಣಿ ಕಮ್ಯುಟೇಷನ್ ಸೌಲಭ್ಯ

    ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್​ಒ) ಪಿಎಫ್ ಅಡಿಯಲ್ಲಿ ಪಿಂಚಣಿ ಕಮ್ಯುಟೇಷನ್ ಸೌಲಭ್ಯ ಸಿಗಲಿದೆ. ಈ ಸೌಲಭ್ಯದಡಿ ಮುಂಚಿತವಾಗಿ ಪಿಂಚಣಿಯ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ. ಮಾಸಿಕ ಪಿಂಚಣಿಯನ್ನು ಮುಂದಿನ 15 ವರ್ಷಗಳವರೆಗೆ 3ನೇ ಒಂದು ಭಾಗದಷ್ಟು ಕಡಿತಗೊಳಿಸಲಾಗುತ್ತದೆ. 15 ವರ್ಷಗಳ ನಂತರ, ಪಿಂಚಣಿದಾರರು ಪೂರ್ಣ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

    ಎಟಿಎಂ ಒನ್ ಟೈಮ್ ಪಾಸ್​ವರ್ಡ್

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ವರ್ಷದಿಂದ ಒನ್ ಟೈಮ್ ಪಾಸ್​ವರ್ಡ್ (ಒಟಿಪಿ) ಆಧಾರಿತ ಎಟಿಎಂ ಹಣ ವಿತ್​ಡ್ರಾ ಸೌಲಭ್ಯವನ್ನು ಪ್ರಾರಂಭಿಸಲಿದೆ. ಇದರ ಅನ್ವಯ 10 ಸಾವಿರಕ್ಕೂ ಹೆಚ್ಚಿನ ಹಣವನ್ನು ಎಟಿಎಂನಿಂದ ಪಡೆಯುವಾಗ ಮೊಬೈಲ್​ಗೆ ಬರುವ ಒಟಿಪಿ ಸಂಖ್ಯೆ ನಮೂದಿಸುವುದು ಕಡ್ಡಾಯ.

    ವಾಹನಗಳು ದುಬಾರಿ

    ಬಿಡಿ ಭಾಗಗಳ ಬೆಲೆ ಹೆಚ್ಚಳದಿಂದಾಗಿ ವಾಹನ ದುಬಾರಿಯಾಗಲಿದ್ದು, ಟಾಟಾ ಮೋಟಾರ್ಸ್, ಹೀರೋ ಮೋಟೊಕಾರ್ಪ್, ಟೊಯೋಟಾ, ಮಹೀಂದ್ರಾ, ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ ಇಂಡಿಯಾ, ಮರ್ಸಿಡಿಸ್ ಬೆಂಜ್, ಕಿಯಾ ಮೋಟಾರ್ಸ್ ಮತ್ತು ನಿಸ್ಸಾನ್ ಮೋಟಾರ್ ಇಂಡಿಯಾ ಸಂಸ್ಥೆಗಳು ಬೆಲೆ ಹೆಚ್ಚಿಸಲಿವೆ.

    ರುಪೇ ಕಾರ್ಡ್, ಯುಪಿಐ ವಹಿವಾಟಿನ ಮೇಲೆ ಎಂಡಿಆರ್ ಶುಲ್ಕವಿಲ್ಲ

    50 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ತಮ್ಮ ಗ್ರಾಹಕರಿಗೆ ಜನವರಿ 1ರಿಂದ ಯಾವುದೇ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವಿಲ್ಲದೆ ಡೆಬಿಟ್ ಕಾರ್ಡ್ ಮತ್ತು ಯುಪಿಐ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ಸೌಲಭ್ಯವನ್ನು ಒದಗಿಸಲಿವೆ. ಈ ಶುಲ್ಕವನ್ನು ಸರ್ಕಾರ ಭರಿಸಲಿದೆ.

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?

    3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

    ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts