More

    ನಾಳೆ ಲಾಕ್​ಡೌನ್​ ಇರಲ್ಲ!

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಜಾರಿಯಲ್ಲಿದ್ದ ಕರ್ಫ್ಯೂವನ್ನು ಸರ್ಕಾರ ಸಡಿಲಗೊಳಿಸಿದ್ದು, ನಾಳೆ(ಮೇ 31) ಕಂಪ್ಲೀಟ್‌ ಲಾಕ್​ಡೌನ್ ಇರುವುದಿಲ್ಲ.

    ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾಳೆ (ಭಾನುವಾರ) ದೈನಂದಿನ ಚಟುವಟಿಕೆ ಎಂದಿನಂತೆ ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತ ಘೋಷಣೆ ಬಂದಿದೆ. ಬಸ್​, ಕ್ಯಾಬ್​, ಆಟೋ ಸಂಚಾರದ ಜತೆಗೆ ಬೇರೆ ಯಾವ ವಹಿವಾಟಿಗೆ ಅವಕಾಶವಿದೆ ಎಂಬುದರ ಡಿಟೇಲ್ಸ್​ ಇಲ್ಲಿದೆ ನೋಡಿ…

    ಇದನ್ನೂ ಓದಿರಿ ಕರೊನಾ ಲಾಕ್​ಡೌನ್​ ಅವಧಿ-ಜಲಮಂಡಳಿ ಬಿಲ್ ಸಂಗ್ರಹದಲ್ಲಿ ಏರಿಕೆ

    ನಾಳೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಅಂದು 3,500 ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಸಂಚರಿಸಲಿವೆ. ಅಂತರ ರಾಜ್ಯ ಸಂಚಾರ ಕೂಡ ಇರುತ್ತದೆ. ಆಟೋ, ಕ್ಯಾಬ್​ಗಳ ಸಂಚಾರಕ್ಕೂ ಅವಕಾಶವಿದೆ.

    ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿ ಇತರ ಅಂಗಡಿಗಳು ತೆರೆದಿರುತ್ತವೆ. ಹೋಟೆಲ್‍ನಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ನಿಗದಿತ ಸಮಯದವರೆಗೆ ಪಾರ್ಕ್​ಗಳು ತೆರೆದಿರುತ್ತವೆ. ಮದ್ಯದಂಗಡಿಗಳೂ ಓಪನ್ ಆಗುತ್ತವೆ.

    ಇದನ್ನೂ ಓದಿರಿ ಕಾರ್ಪೋರೇಟರ್​ಗೆ ಪಾಸಿಟಿವ್

    ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮೇ 18ರಂದು ರಾಜ್ಯ ಸರ್ಕಾರ ಲಾಕ್​ಡೌನ್​ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಪ್ರತಿದಿನ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಜಾರಿ, ಪ್ರತಿ ಭಾನುವಾರದಂದು ಪೂರ್ಣದಿನದ ಲಾಕ್​ಡೌನ್​ ಘೋಷಿಸಿತ್ತು.

    ಸದ್ಯ ಈ ಬಾನುವಾರದ ಲಾಕ್​ಡೌನ್​ ನಿಯಮವನ್ನು ಸಾರ್ವಜನಿಕರ ಕೋರಿಕೆ ಮೇರೆಗೆ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಆದರೆ, ಎಂದಿನಂತೆ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಯಥಾಪ್ರಕಾರ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಕಚೇರಿ ಆದೇಶ ಹೊರಡಿಸಿದೆ.

    ಇದನ್ನೂ ಓದಿರಿ ಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts