More

    ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ

    ಚಿಕ್ಕೋಡಿ: ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಬಹಳ ಪ್ರಮುಖವಾಗಿದೆ. ಬೇರೆ, ಬೇರೆ ಸಂಪತ್ತು ಗಳಿಸುವ ಮೂಲಕ ಆರೋಗ್ಯ ಸಂಪತ್ತು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಹೇಳಿದರು.


    ಪಟ್ಟಣದ ಎಚ್ ಗ್ರೂಪ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬೆಳಗಾವಿ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಉತ್ತಮ ಆಹಾರ, ವ್ಯಾಯಾಮ. ಯೋಗಾಸನ ಮುಂತಾದವುಗಳನ್ನು ರೂಢಿಸಿಕೊಳ್ಳಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಕಾಡಾಪುರದ ದಯಾನಂದ ಸ್ವಾಮೀಜಿ ಮಾತನಾಡಿ, ಆರೋಗ್ಯವಂತ ಶರೀರ ಇರುವಲ್ಲಿ, ಆರೋಗ್ಯವಂತ ಮನಸ್ಸು ಇರುತ್ತದೆ. ಹಾಗಾಗಿ ಆರೋಗ್ಯ ಸಂಪತ್ತು ಬೆಳೆಸಿಕೊಳ್ಳಲು ನಾವೆಲ್ಲರೂ ಹೆಚ್ಚು ನಿಗಾವಹಿಸಬೇಕಿದೆ ಎಂದರು.
    ಎಚ್ ಗ್ರೂಪ್ ಮುಖ್ಯಸ್ಥ ಸುಬಾನ್ ಬಾಗವಾನ್ ಮಾತನಾಡಿ, ಯುವಕರು ಆರೋಗ್ಯ ಗಳಿಸಿ ದೇಶದ ಸಂಪತ್ತಾಗಬೇಕು ಎಂದರು.

    ಪುರಸಭೆ ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ, ಸದಸ್ಯ ಬಾಬು ಮಿರ್ಜಿ, ಹಾಜಿ ನೂರ್‌ಅಹ್ಮದ್, ಇಬ್ರಾಹಿಂ ಮದಬಾವಿ, ಸುನೀಲ ಗುಡಗುಂಟಿಮಠ, ಎನ್.ತೃಪ್ತಿ ಇತರರು ಇದ್ದರು. ದೇಹದಾರ್ಢ್ಯ ಸ್ಪರ್ಧೆಯ ಚಿಕ್ಕೋಡಿ ತಾಲೂಕುಮಟ್ಟದ ವಿಭಾಗದಲ್ಲಿ ಮಿಸ್ಟರ್ ಚಿಕ್ಕೋಡಿಯಾಗಿ ಡಾ.ಮಿಲನ್ ಕಾಂಬಳೆ, ಬೆಳಗಾವಿ ಜಿಲ್ಲಾಮಟ್ಟದ ವಿಭಾಗದ ಮಿಸ್ಟರ್ ಎಚ್ ಗ್ರೂಪ್ ಪ್ರಶಸ್ತಿಯನ್ನು ಪ್ರಶಾಂತ ಕರನೂರಕರ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts