ಮಡಿಕೇರಿ: ಗ್ಯಾಸ್ ಬಳಕೆದಾರರು ಮನೆಯಲ್ಲೇ ಕುಳಿತು ಬಿಪಿಸಿಎಲ್ ಆ್ಯಪ್‌ನ ಕ್ಯೂಆರ್ ಕೋಡ್ ಬಳಸಿ ಇಕೆವೈಸಿ ಮಾಡಿಕೊಳ್ಳಬಹುದು ಎಂದು ಕುಶಾಲನಗರದ ಭಾರತ್ ಗ್ಯಾಸ್ ಕಚೇರಿ ತಿಳಿಸಿದೆ.
ಭಾರತ್ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲು ಮನೆ ಬಾಗಿಲಿಗೆ ಬರುವ ಗ್ಯಾಸ್ ವಿತರಣೆಯ ಹುಡುಗರ ಬಳಿಯೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ನೋಂದಣಿಗೆ ಯಾವುದೇ ಕಾಲಮಿತಿ ಇರುವುದಿಲ್ಲ.
ಹಾಗಾಗಿ, ಗ್ರಾಹಕರು ಕಚೇರಿ ಮುಂದೆ ಬಂದು ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.