More

    ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯಿಲ್ಲ

    ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿ ಇದ್ದು, ಅಭಿವೃದ್ಧಿಗಾಗಿ ಸಾಕಷ್ಟು ಅನುದಾನದ ಬಿಡುಗಡೆಯಾಗುತ್ತದೆ, ಯಾವುದೇ ರೀತಿ ಅನುದಾನ ಕೊರತೆಯಾಗುವುದಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

    ತಾಲೂಕಿನ ಕುರುಗಲ್​, ವೇಮಗಲ್​ ಪಟ್ಟಣದ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ನರಸಾಪುರ, ವೇಮಗಲ್​ ಈಗಾಗಲೇ ಕೈಗಾರಿಕೆ ಪ್ರದೇಶವಾಗಿದ್ದು ಜನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಜನತೆಗೆ ಬೆಳಕಾಗುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕೆಲಸ ಕೊಡುವುದು ನಮ್ಮ ಉದ್ದೇಶ ಎಂದರು.
    ಕೋಲಾರ ತಾಲೂಕನ್ನು ಸರ್ಕಾರ ಈಗಾಗಲೇ ಬರಪ್ರದೇಶ ಎಂದು ಘೋಷಣೆ ಮಾಡಿದೆ. ಜನ ಜಾನುವಾರುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿ ಏನೇ ಸಮಸ್ಯೆ ಎದುರಾದರು ತಮ್ಮ ಗಮನಕ್ಕೆ ತಂದರೆ ಆದ್ಯತೆ ಮೇರೆಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
    ಜನಸಂಖ್ಯೆಯು ಹೆಚ್ಚಾದಂತೆ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಆ ಒತ್ತಡವನ್ನು ನಿವಾರಣೆ ಮಾಡಲು ವೇಮಗಲ್​, ನರಸಾಪುರವನ್ನು ಅವಳಿ ಪುರಸಭೆಯಾಗಿ ಮಾಡಿ ವೇಮಗಲ್​ ತಾಲೂಕು ಕೇಂದ್ರವನ್ನಾಗಿ ಮಾಡಲು ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ. ಆದಷ್ಟು ಬೇಗ ಸರ್ಕಾರ ಕಾನೂನು ಪ್ರಕಾರವೇ ಜಾರಿ ಮಾಡಲಿದೆ. ಆಯಾ ಭಾಗದ ಜನರ ಸಮಸ್ಯೆಗಳನ್ನು ಆಲಿಸಲು ವಾರದಲ್ಲಿ ಎರಡು ದಿನ ಗ್ರಾಪಂ ಮಟ್ಟದಲ್ಲಿ ಜನ ಸಂಪರ್ಕಸಭೆಗಳನ್ನು ನಡೆಸುವ ಮೂಲಕ ಕ್ರಮವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.
    ವೇಮಗಲ್​ ಅಭಿವೃದ್ಧಿಗೆ ಒತ್ತು
    ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ಕುಮಾರ್​ ಮಾತನಾಡಿ, ಗ್ರಾಪಂಗಳಿಗೆ ಕೇವಲ ನರೇಗಾದಲ್ಲಿ ಮಾತ್ರ ಅನುದಾನ ಬರುತ್ತದೆ. ಆದರೆ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಯಾದರೆ ವಿವಿಧ ಮೂಲಗಳಿಂದ ಅನುದಾನ ಪಡೆಯಬಹುದು ಎಂದರು. ಈಗಾಗಲೇ ವೇಮಗಲ್​&ಕುರುಗಲ್​ ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಸರ್ಕಾರ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ವೇಮಗಲ್​ ತಾಲೂಕು ಕೇಂದ್ರ ಘೋಷಣೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮುತುವರ್ಜಿ ವಹಿಸಿದ್ದಾರೆ. ಸರ್ಕಾರದೊಂದಿಗೆ ಮಾತನಾಡಿ, ವೇಮಗಲ್​ ತಾಲೂಕು ಕೇಂದ್ರ ಮಾಡಿ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ತಯಾರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸರ್ಕಾರದಿಂದ ದೊರೆಯುವ ಎಲ್ಲ ಯೋಜನೆಗಳನ್ನು ತಲುಪಿಸುವುದರ ಜತೆಗೆ ಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಮೂಲಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಯಲ್ಲಿ ಮಾದರಿಯಾಗುವಂತೆ ಮಾಡುವುದು ಸರ್ಕಾರ ಗುರಿಯಾಗಿದೆ ಎಂದರು.
    ಕಾನೂನು ತೊಡಕು ನಿವಾರಣೆಗೆ ಸಲಹೆ
    ವಿಧಾನಪರಿಷತ್​ ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಮಾತನಾಡಿ, ವೇಮಗಲ್​ ಪಟ್ಟಣ ಪಂಚಾಯತಿಯಾಗಿ ಎರಡು ವರ್ಷಗಳೆ ಕಳೆದಿವೆ. ಚುನಾವಣೆ ನಡೆಸಲು ಕಾನೂನು ತೊಡಕುಗಳಿದ್ದು ಅವುಗಳನ್ನು ನಿವಾರಿಸಿ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
    ಸರ್ಕಾರಿ ಬಂದಾಗಿನಿಂದ ಗ್ಯಾರಂಟಿಗಳ ಜಾರಿಯಲ್ಲಿದೆ. ಸಾಮಾನ್ಯ ಜನರದೃಷ್ಟಿಯಿಂದ ಆಡಳಿತ ಸುಧಾರಣೆ ಮಾಡಬೇಕು. ಭವಿಷ್ಯದಲ್ಲಿ ವೇಮಗಲ್​ ಪಟ್ಟಣವನ್ನು ತಾಲೂಕು ಮಾಡಿ ಜನರಿಗೆ ಅನುಕೂಲವಾಗುವಂತೆ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುವುದು ನನ್ನ ಉದ್ದೇಶವಾಗಿದೆ ಎಂದರು.
    ತಹಸೀಲ್ದಾರ್​ ಹರ್ಷವರ್ಧನ್​, ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​, ಆರ್​ಐ ಮಂಜುನಾಥ್​, ತಾಪಂ ಮಾಜಿ ಸದಸ್ಯ ವಿ.ಎಂ.ಮುನಿಯಪ್ಪ, ಮುಖಂಡರಾದ ನಾಗನಾಳ ಸೋಮಣ್ಣ, ಗದ್ದೆಕಣ್ಣೂರು ದಯಾನಂದ್​, ಸೀಸಂದ್ರ ಗೋಪಾಲಗೌಡ, ಮುರಳಿ, ರಮೇಶ್​, ದಲಿತ ನಾಗರಿಕ ಸಮಿತಿ ಅಧ್ಯಕ್ಷ ಪುರಹಳ್ಳಿ ಜಿ.ಯಲ್ಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts