More

  ಪರೀಕ್ಷೆಗೆ ಹೆದರುವ ಅವಶ್ಯಕತೆ ಇಲ್ಲ

  ನರೇಗಲ್ಲ: ಪರೀಕ್ಷೆಯನ್ನು ಹಬ್ಬದಂತೆ ಆಚರಿಸಬೇಕು. ದುಗುಡವನ್ನು ದೂರೀಕರಿಸಿ ಸಮಾಧಾನದಿಂದ ಉತ್ತರ ಬರೆದರೆ ಯಶಸ್ಸು ನಿಮ್ಮ ವಶವಾಗುತ್ತದೆ ಎಂದು ಹಾಲಕೆರೆ ಸಂಸ್ಥಾನದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

  ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ಪಿಯು ಪರೀಕ್ಷೆಯ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರು ಆಶೀರ್ವಚನ ನೀಡಿದರು.

  ಪರೀಕ್ಷೆಗಾಗಿ ಯಾರೂ ಹೆದರಬೇಕಾದ ಅವಶ್ಯಕತೆಯಿಲ್ಲ. ಒಂದಿಡೀ ವರ್ಷ ನೀವು ಓದಿದ ವಿಷಯಗಳ ಬಗ್ಗೆಯೆ ಪ್ರಶ್ನೆಗಳಿರುತ್ತವೆ. ಅವೆಲ್ಲವನ್ನೂ ನಿಮ್ಮ ಉಪಾಧ್ಯಾಯರು ಈಗಾಗಲೆ ನಿಮಗೆ ಚೆನ್ನಾಗಿ ಮನನ ಮಾಡಿಸಿರುತ್ತಾರೆ. ಇದನ್ನು ಸಮರ್ಪಕವಾಗಿ ನೆನಪಿಸಿಕೊಂಡು ಸರಿಯಾದ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದರು.

  ಇದೇ ಮೊದಲ ಬಾರಿಗೆ ನರೇಗಲ್ಲ ಪಟ್ಟಣದಲ್ಲಿ 3 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪರೀಕ್ಷಾ ಕೇಂದ್ರಗಳನ್ನು ತಳಿರು ತೋರಣ, ರಂಗೋಲಿ ಹಾಕುವ ಮೂಲಕ ಸಿಂಗರಿಸಲಾಗಿತ್ತು. ಪರೀಕ್ಷಾರ್ಥಿಗಳಿಗೆ ಸಿಹಿ ವಿತರಿಸಿ ಶುಭ ಕೋರಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್. ಆರ್. ಗೌಡರ, ಸದಸ್ಯರಾದ ಡಾ. ಜಿ.ಕೆ. ಕಾಳೆ, ವೀರಣ್ಣ ಶೆಟ್ಟರ, ನಿಂಗನಗೌಡ ಲಕ್ಕನಗೌಡ್ರ, ನಿವೃತ್ತ ಉಪನ್ಯಾಸಕ ತಳಬಾಳ, ಡಾ. ಶಿವಯ್ಯ ರೋಣದ, ಪ್ರಾಚಾರ್ಯೆ ಅನಸೂಯಾ ಪಾಟೀಲ, ಪರೀಕ್ಷಾ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಎಸ್. ಎ. ಪಿಯು ಕಾಲೇಜು ಪ್ರಾಚಾರ್ಯ ವೈ. ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಫ್. ಎನ್. ಹುಡೇದ, ನಂದೀಶ ಅಚ್ಚಿ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts