More

    ನಾಳೆ ಇಲ್ಲ ಕರ್ನಾಟಕ ಬಂದ್; ಸಿಎಂ ಮನವೊಲಿಕೆಗೆ ಕನ್ನಡಪರ ಹೋರಾಟಗಾರರ ಒಪ್ಪಿಗೆ

    ಬೆಂಗಳೂರು: ಕರ್ನಾಟಕ ಬಂದ್ ಘೋಷಣೆಯಿಂದ ಸಾರ್ವಜನಿಕರು, ಉದ್ಯಮಿಗಳು, ವರ್ತಕರಿಗೆಲ್ಲ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಂತಾಗಿದೆ. ಏಕೆಂದರೆ ಡಿ. 31ರಂದು ಕರ್ನಾಟಕ ಬಂದ್​ ನಡೆಸುವುದಾಗಿ ಹೇಳಿದ್ದ ಕೆಲವು ಕನ್ನಡಪರ ಸಂಘಟನೆಗಳು ಇದೀಗ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿವೆ.

    ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದು, ನಾಳೆ ಕರ್ನಾಟಕ ಬಂದ್ ಇರುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಕನ್ನಡದ ಪರವಾಗಿ ಮತ್ತೊಮ್ಮೆ ದನಿ ಎತ್ತಿದ ರಾಜ್ಯಸಭಾ ಸದಸ್ಯ; ವಿಜಯವಾಣಿ ವರದಿ ಪ್ರಸ್ತಾಪಿಸಿ ಸಿಎಂ ಗಮನ ಸೆಳೆದ ಚಂದ್ರಶೇಖರ್​

    ಕನ್ನಡಪರ ಹೋರಾಟಗಾರರಾದ ವಾಟಾಳ್​ ನಾಗರಾಜ್, ಪ್ರವೀಣ್​ಕುಮಾರ್ ಶೆಟ್ಟಿ, ಸಾ.ರಾ.ಗೋವಿಂದು ಅವರು ಬಂದ್​ಗೆ ಕರೆ ನೀಡಿದ್ದರು. ಬಂದ್ ನಡೆಸದಂತೆ ಅವರಲ್ಲಿ ಎರಡು ಸಲ ಮನವಿ ಮಾಡಿಕೊಳ್ಳಲಾಗಿತ್ತು. ಇಂದು ಅವರನ್ನು ಮತ್ತೆ ಕರೆದು ಮನವರಿಕೆ ಮಾಡಿಕೊಡಲಾಗಿದ್ದು, ಕೊನೆಗೂ ಅವರು ಬಂದ್ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

    ಇದನ್ನೂ ಓದಿ: ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!

    ಎಂಇಎಸ್ ಬಗ್ಗೆ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಹೀಗಾಗಿ ನಾಳೆ ಬಂದ್ ಇರುವುದಿಲ್ಲ. ಈಗಾಗಲೇ ಘೋಷಿಸಲಾಗಿರುವ ಬಂದ್ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.

    ಇದನ್ನೂ ಓದಿ: ಎರಡು ತಿಂಗಳ ಹಿಂದೆ ಕಂಪನಿ ಕ್ಲೋಸ್​, ಈಗ ಬದುಕು ಕೂಡ ಅಂತ್ಯ: ಎಸ್ಟೀಮ್​ ಕಾರಿನಲ್ಲಿ ಅನಾಥವಾಗಿತ್ತು ಶವ…

    ನಾಳೆ ಬಂದ್ ಬದಲಿಗೆ ಬೆಳಗ್ಗೆ 10.30ಕ್ಕೆ ಪುರಭವನದಿಂದ ಕೆಂಪೇಗೌಡ ಬಸ್​ ನಿಲ್ದಾಣ, ಸ್ವಾತಂತ್ರ್ಯ ಉದ್ಯಾನದವರೆಗೆ ಕನ್ನಡಪರ ಸಂಘಟನೆಗಳಿಂದ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

    ನಾಳೆ ಇಲ್ಲ ಕರ್ನಾಟಕ ಬಂದ್; ಸಿಎಂ ಮನವೊಲಿಕೆಗೆ ಕನ್ನಡಪರ ಹೋರಾಟಗಾರರ ಒಪ್ಪಿಗೆ
    ಮನವೊಲಿಕೆ ಬಳಿಕ ಸಿಎಂ ಜೊತೆ ಕನ್ನಡಪರ ಹೋರಾಟಗಾರರು

    ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts