More

    ರಾಮಾಯಣವಿಲ್ಲದೆ ಭಾರತದ ಇತಿಹಾಸವಿಲ್ಲ

    ಚಿಕ್ಕಮಗಳೂರು: ಭಾರತದ ಭವ್ಯ ಸಾಂಸ್ಕೃತಿಕ ಇತಿಹಾಸವನ್ನು ರಾಮಾಯಣವಿಲ್ಲದೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 500 ವರ್ಷಗಳ ನಿರಂತರ ನಂತರ ಮತ್ತೆ ಶ್ರೀ ರಾಮಚಂದ್ರರ ಬಾಲ ಪ್ರತಿಮೆ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
    ಹಿರೇಮಗಳೂರು ಶ್ರೀ ಕೋದಂಡರಾಮೇಶ್ವರ ದೇವಾಲಯದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಕರೆಯಂತೆ ದೇಶಾದ್ಯಂತ ಒಂದು ವಾರ ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದರು.
    ಪ್ರತಿಯೊಬ್ಬರೂ ತಮ್ಮ ಪ್ರದೇಶದಲ್ಲಿರುವ ದೇವಾಲಯಗಳನ್ನು ಸ್ವಚ್ಛ ಮಾಡಬೇಕು. ಇದು ಆಂದೋಲನವಾಗಬೇಕು. ಸ್ವಚ್ಛತೆ ಇರುವ ಕಡೆ ಭಗವಂತ ಇರುತ್ತಾನೆ. ಮನಸ್ಸು ಸ್ವಚ್ಛವಿದ್ದರೆ ಭಗವಂತ ನೆಲೆಸುತ್ತಾನೆ ಎಂಬ ಹಿರಿಯರ ನಂಬಿಕೆಗೆ ಅನುಗುಣವಾಗಿ ದೇವಾಲಯಗಳನ್ನು ಸ್ವಚ್ಛ ಮಾಡೋಣ ಎಂದು ಕರೆ ನೀಡಿದರು.
    ಸ್ವಚ್ಛತಾ ಕಾರ್ಯದಲ್ಲಿ ಬಿಜೆಪಿ ಮುಖಂಡರಾದ ಮಧುರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ, ಸಂತೋಷ್ ಕೋಟ್ಯಾನ್, ಅಮೃತೇಶ್ ಚನ್ನಕೇಶವ, ಸಚಿನ್, ಅಂಕಿತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts