More

    ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ

    ಗುತ್ತಲ: ಪಾಲಕರ ಮಾರ್ಗದರ್ಶನ, ತ್ಯಾಗದಿಂದ ಐಎಎಸ್ ಪರೀಕ್ಷೆ ಪಾಸಾಗಲು ಸಾಧ್ಯವಾಯಿತು ಎಂದು ಐಎಎಸ್‌ನಲ್ಲಿ 45ನೇ ರ‌್ಯಾಂಕ್ ಪಡೆದ ಮೈಸೂರಿನ ಪೂಜಾ ಬೇದ್ರೆ ಹೇಳಿದರು.

    ಪಟ್ಟಣದ ಚನ್ನವೀರ ಶಿವಯೋಗಿಗಳ ಮಠದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಗುತ್ತಲ ಪಟ್ಟಣ ನನ್ನ ತಾಯಿಯ ತವರೂರು. ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಕಠಿಣ ಪರಿಶ್ರಮ, ಚಂಚಲ ಮನಸ್ಸಿನ ನಿಗ್ರಹ ಮಾಡಿಕೊಂಡು ಗುರಿಯತ್ತ ಸಾಗಿದರೆ ಯಶಸ್ಸು ಸುಲಭ. ನಾನು ಎರಡನೇ ಬಾರಿಗೆ ಯಶಸ್ಸು ಪಡೆದೆ ಎಂದರು.

    ಪ್ರಭುಲಿಂಗ ಕೋಡದ ಮಾತನಾಡಿದರು. ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಸೀಟ್ ಪಡೆದಿರುವ ವಿಜಯಲಕ್ಷ್ಮೀ ಕುರವತ್ತಿಗೌಡರ, ನಿಶ್ಚಿತ ಚಂದನ ಹಾಗೂ ಸುಹಾಸ ಕೆ.ಎಚ್. ಅವರನ್ನು ಸನ್ಮಾನಿಸಲಾಯಿತು.

    ಜಂಗಮಕ್ಷೇತ್ರ ಲಿಂಗನಾಯಕಹಳ್ಳಿ-ಗುತ್ತಲದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೊಟ್ರಯ್ಯಸ್ವಾಮಿ ಕೋವಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಪಪಂ ಸದಸ್ಯ ಪ್ರದೀಪ ಸಾಲಗೇರಿ, ಸಂಗಯ್ಯಸ್ವಾಮಿ ಭೂಸನೂರಮಠ, ನಾಗಪ್ಪ ಕುರವತ್ತಿಗೌಡರ, ಚನ್ನಪ್ಪ ಕಲಾಲ, ವಿಶ್ವನಾಥ ಮನ್ನಂಗಿ, ಮುಕುಂದರಾವ್ ಬೇದ್ರೆ, ಪದ್ಮಾವತಿ ಬೇದ್ರೆ, ಶಾಂತಕುಮಾರ ತೇಲ್ಕರ, ದೇವಣ್ಣ ತೇಲ್ಕರ, ಡಾ. ಕಠಾರಿ ಎಚ್ ನಾಯಕ, ಶೇಖರ ಚಂದನ, ವೀರಯ್ಯ ಪ್ರಸಾದಿಮಠ, ಶಿವಾನಂದ ನಂದಿಗೊಣ್ಣ, ನೀಲಕಂಠಯ್ಯ ಓದಿಸೋಮಠ, ಚನ್ನವೀರಯ್ಯ ಸುತ್ತೂರಮಠ ಇತರರಿದ್ದರು. ಪ್ರಕಾಶ ಸೊಪ್ಪಿನ ಸ್ವಾಗತಿಸಿದರು. ಮಾರುತಿ ಕೋಡಬಾಳ ನಿರೂಪಿಸಿದರು. ಪಾಲಾಕ್ಷಯ್ಯಸ್ವಾಮಿ ನೆಗಳೂರಮಠ ವಂದಿಸಿದರು.

    ಸನ್ಮಾನ

    ಪೂಜಾ ಬೇದ್ರೆ ಅವರನ್ನು ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಎಲೆಪೇಟೆ ಹತ್ತಿರದ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಸನ್ಮಾನಿಸಲಾಯಿತು. ರಿಂದಾಭಾಯಿ ತೇಲ್ಕರ, ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ ಅಶೋಕ ತೇಲ್ಕರ, ಗುತ್ತಲ ಘಟಕದ ಅಧ್ಯಕ್ಷ ತುಕಾರಾಮ ತೇಲ್ಕರ, ಗೌರಾವಧ್ಯಕ್ಷ ಶ್ರೀಕಾಂತ ತೇಲ್ಕರ, ಶ್ರೀನಿವಾಸ ತೇಲ್ಕರ, ಕೃಷ್ಣಾಜಿ ತೇಲ್ಕರ, ಶ್ರೀನಾಥ ಆಕಡುಕರ, ರಾಜು ತೇಲ್ಕರ್, ಮಂಜುನಾಥ ತೇಲ್ಕರ, ಪ್ರವೀಣ ಆಕಡುಕರ, ಬಸವರಾಜ ಘನಾತೆ, ಶ್ರೀಧರ ತೇಲ್ಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts