More

    ಸಂವಿಧಾನ ಪೀಠಿಕೆ ಜಾಥಾಕ್ಕೆ ಜನರಿಲ್ಲ


    ಮಡಿಕೇರಿ: ಸಂವಿಧಾನ ಪೀಠಿಕೆ ಜಾಥಾಕ್ಕೆ ಹೆಚ್ಚಿನ ಜನರನ್ನು ಆಹ್ವಾನಿಸದೆ ಸರ್ಕಾರದ ಕಾರ್ಯಕ್ರಮವನ್ನು ಪುರಸಭೆ ಅವಮಾನ ಮಾಡಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.


    ಗುರುವಾರ ಸಕಲೇಶಪುರ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಪೀಠಿಕೆ ಜಾಥಾವನ್ನು ಪುರಸಭೆ ಸದಸ್ಯರು ಹಾಗೂ ದಲಿತ ಮುಖಂಡರು ಸ್ವಾಗತಿಸಿದರು. ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಭಾ ಕಾರ್ಯಕ್ರಮ ಆಯೊಜಿಸಿದ್ದ ಹಳೇ ತಾಲೂಕು ಕಚೇರಿ ಅವರಣಕ್ಕೆ ಕರೆತಂದರು.


    ಸಭಾ ಕಾರ್ಯಕ್ರಮಕ್ಕೆ 500 ಆಸನ ಹಾಗೂ ವೇದಿಕೆ ಮೇಲ್ಭಾಗ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಭಾ ಕಾರ್ಯಕ್ರಮಕ್ಕೆ ಬೆರಳೆಣಿಕೆ ಜನರು ಮಾತ್ರ ಇರುವುದನ್ನು ಗಮನಿಸಿದ ದಲಿತ ಮುಖಂಡರು ಸಂವಿಧಾನ ಜಾಥಾ ಪೀಠಕ್ಕೆ ಜನರನ್ನು ಸೇರಿಸದೆ ಬೇಕೆಂದೇ ಅವಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.


    ಕನಿಷ್ಠ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆಸಬಹುದಿತ್ತು. ಕಾರ್ಯಕ್ರಮ ಇರುವ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬಹುದಿತ್ತು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ವಿರುದ್ಧ ಹರಿಹಾಯ್ದರು. ಇದಕ್ಕೆ ಉತ್ತರ ನೀಡಿದ ಮುಖ್ಯಾಧಿಕಾರಿ ನಮಗೆ ವೇದಿಕೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿತ್ತು. ಆ ಪ್ರಕಾರ ಕೆಲಸ ನಿರ್ವಹಿಸಲಾಗಿದೆ ಎಂದರು.


    ಇವರ ಉತ್ತರದಿಂದ ಕೋಪಗೊಂಡ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ್‌ಮೂರ್ತಿ, ಪೂರ್ವಭಾವಿ ಸಭೆಯಲ್ಲೆ ಯಾವ ಅಧಿಕಾರಿ ಏನು ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ. ಈ ವಿಚಾರವನ್ನೇ ತಾವೇ ನಿರ್ಲಕ್ಷಿಸಿದ್ದಿರ ಎಂದು ತರಾಟೆಗೆ ತೆಗೆದುಕೊಂಡರು.
    ಈ ವೇಳೆ ಕೆಲಕಾಲ ದಲಿತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಯಿತು. ನಂತರ ಪ್ರತಿಜ್ಞಾವಿಧಿ ಕೈಗೊಳ್ಳುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts