More

    ರಾಜ್ಯದಲ್ಲಿವೆ 1,600 ಅನಧಿಕೃತ ಶಾಲೆ! ಪಾಲಕರಿಗೆ ಎದುರಾಯ್ತು ಸಂಕಷ್ಟ

    | ಎನ್.ಎಲ್. ಶಿವಮಾದು ಬೆಂಗಳೂರು

    ರಾಜ್ಯದಲ್ಲಿ 1,600 ಅನಧಿಕೃತ ಶಾಲೆಗಳಿರುವ ವಿಚಾರ ದೃಢಪಟ್ಟಿದೆ. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಆ ಶಾಲೆಗಳ ಪಟ್ಟಿ ಪ್ರಕಟಿಸುವ ನಿರ್ಧಾರಿಂದ ಶಿಕ್ಷಣ ಇಲಾಖೆ ಹಿಂದೆ ಸರಿದಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ದಾಖಲಿಸುವ ಸಮಯದಲ್ಲಿ ಶಾಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಪಾಲಕರಿಗೆ ಸಂಕಷ್ಟ ಎದುರಾಗಿದೆ.

    ರಾಜ್ಯದಲ್ಲಿ ಒಟ್ಟಾರೆ 17,269 ಖಾಸಗಿ (ರಾಜ್ಯ ಪಠ್ಯಕ್ರಮ), 704 ಸಿಬಿಎಸ್‌ಇ 300 ಐಸಿಎಸ್‌ಇ ಮತ್ತು 9 ಅಂತಾರಾಷ್ಟ್ರೀಯ ಶಾಲೆಗಳಿವೆ. ಈ ಪೈಕಿ ಶಿಕ್ಷಣ 1,600ಕ್ಕೂ ಹೆಚ್ಚಿನ ಶಾಲೆಗಳು ಅನಧಿಕೃತವಾಗಿವೆ. ಮಾನ್ಯತೆ ನವೀಕರಣ ಮಾಡಿಕೊಳ್ಳದಿರುವುದು, ನೋಂದಣಿಯಿಲ್ಲದೆ ನಡೆಸುತ್ತಿರುವುದು, ರಾಜ್ಯ ಪಠ್ಯಕ್ರಮ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧನೆ, ಕೇಂದ್ರ ಶಾಲೆಗಳ ಪಠ್ಯಕ್ರಮ ಅನುಮತಿ ಇಲ್ಲದ ಪಠ್ಯಗಳ ಬೋಧನೆ ಸೇರಿ ಅನೇಕ ನಿಯಯಗಳನ್ನು ಉಲ್ಲಂಘನೆ ಮಾಡಿರುವ ಶಾಲೆಗಳನ್ನು ಪಟ್ಟಿ ಮಾಡಲಾಗಿದೆ.

    ಇದನ್ನೂ ಓದಿ: ಚನ್ನಪಟ್ಟಣದ ಜತೆಗೆ ಮಂಡ್ಯದಿಂದಲೂ ಎಚ್​ಡಿಕೆ ಸ್ಪರ್ಧೆ ಸಾಧ್ಯತೆ: ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

    ಅನಧಿಕೃತ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಪಟ್ಟಿಯನ್ನು ಪ್ರಕಟಿಸುವ ನಿರ್ಣಯವನ್ನು ಸರ್ಕಾರದ ಹಂತದಲ್ಲಿ ಕೈಗೊಳ್ಳಬೇಕಿದೆ.

    | ಡಾ. ಆರ್. ವಿಶಾಲ್ ಶಾಲಾ ಶಿಕ್ಷಣ ಇಲಾಖೆ ಆಯುಕ್ತ

    ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಥವಾ ಪರೀಕ್ಷಾ ಸಮಯದಲ್ಲಿ ಅನಧಿಕೃತ ಶಾಲೆಗಳನ್ನು ಪ್ರಕಟಿಸಿದರೆ ಸಂಬಂಧಪಟ್ಟ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತದೆ. ಈ ಕಾರಣದಿಂದ 2022-23ನೇ ಸಾಲಿನ ಪಿಯುಸಿ ಪರೀಕ್ಷೆ ಪೂರ್ಣಗೊಂಡ ಬಳಿಕ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಅದರಂತೆ ಆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

    ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಣೆ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕಾದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿರಬೇಕು. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಲಾಖೆಗೆ ಸಚಿವರು ಇಲ್ಲದಿರುವುದರಿಂದ ಅಧಿಕಾರಿಗಳು ನಿರ್ಧಾರ ಕೈಗೊಳ್ಳುವುದರಿಂದ ಹಿಂದೆ ಸರಿದಿದ್ದಾರೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

    ಹೊಸ ಸರ್ಕಾರದ ವಿವೇಚನೆಗೆ: ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಬೇಕೋ ಬೇಡವೋ ಎಂಬುದನ್ನು ಹೊರ ಸರ್ಕಾರ ಬಂದ ನಿರ್ಧಾರವಾಗಲಿದೆ. ಆದರೆ ಅಲ್ಲಿಯವರೆಗೂ ಪ್ರಕಟಣೆ ತಡಹಿಡಿಯುವುದು ಒಂದು ರೀತಿಯಲ್ಲಿ ಅಧಿಕಾರಿಗಳು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಪಾಲಕರಿಗೂ ಅಗತ್ಯ ಮಾಹಿತಿ ಸಿಗದೆ ಸಮಸ್ಯೆಯಾಗಲಿದೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರ್ಗಾವಣೆ ಪ್ರಮಾಣಪತ್ರ (ಟಿಸಿ), ಅಂಕಪಟ್ಟಿ, ವ್ಯಾಸಂಗ ಪ್ರಮಾಣಪತ್ರಗಳು ದ್ವಿತೀಯ ಅಸಿಂಧುವಾಗಲಿದೆ. ಭವಿಷ್ಯದಲ್ಲಿ ನೈಜತೆ ಪರಿಶೀಲನೆ ವೇಳೆ ಸಮಸ್ಯೆಯಾಗಬಹುದು.

    ಕ್ರಮ ವಹಿಸಲು ಡಿಡಿಪಿಐಗಳಿಗೆ ಸೂಚನೆ: ಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿಪಿಐ) ಅನಧಿಕೃತ ಶಾಲೆಗಳ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಸರ್ಕಾರದಿಂದ ಅಧಿಕೃತ ಅದೇಶವಾಗದ ಹೊರತು ಡಿಡಿಪಿಐಗಳು ಅಧಿಕೃತವಾಗಿ ಕಾನೂನಾತ್ಮಕವಾಗಿ ಕ್ರಮ ಜರುಗಿಸಲು ಸಾಧ್ಯವಿಲ್ಲ.

    ಇದನ್ನೂ ಓದಿ: 500 ವರ್ಷಗಳ ಹಿಂದೆ ನಿರ್ಮಾಣವಾದ ಮ್ಯಾಜಿಕಲ್​ ಬಾವಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!

    ಪಾಲಕರು ಈಗ ಮಾಡಬೇಕಿರುವುದೇನು?
    * ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಶಾಲೆಯು ರಾಜ್ಯ / ಕೇಂದ್ರ ಪಠ್ಯ ಕ್ರಮಕ್ಕೆ ಅನುಗುಣವಾಗಿ ನೋಂದಣಿ ಆಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು.
    * ಒಂದು ವೇಳೆ ನೋಂದಣಿಯಾಗಿದ್ದರೆ ಪ್ರಸಕ್ತ ಸಾಲಿನ ಶಕ್ಷಣಿಕ ವರ್ಷಕ್ಕೆ ನವೀಕರಣ ಮಾಡಲಾಗಿದೆಯೇ ಹಾಗೂ ಅನುಮತಿ ಪಡೆದಿರುವ ವಿಷಯಗಳನ್ನು ಮಾತ್ರ ಬೋಧನೆ ಮಾಡುತ್ತಿದೆಯೇ ಅಥವಾ ಅನಗತ್ಯ ವಿಷಯಗಳನ್ನು ಸೇರ್ಪಡೆ ಮಾಡಿದೆಯೇ ಎಂಬ ಮಾಹಿತಿ ತಿಳಿದುಕೊಳ್ಳಬೇಕು.
    * ಪ್ರವೇಶ ಶುಲ್ಕವನ್ನು ಶಾಲಾ ಸೂಚನಾ ಫಲಕ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ದೆಯೇ? ಒಂದು ವೇಳೆ ಪ್ರಕಟಿಸಿದಿದ್ದರೆ ಏಕೆ ಪ್ರಕಟಿಸಿಲ್ಲವೆಂದು ಪ್ರಶ್ನಿಸಬೇಕು.
    * ನಿಗದಿತ ಪುಸ್ತಕದ ಅಂಗಡಿಗಳಲ್ಲಿಯೇ ಕಲಿಕಾ ಪರಿಕರಗಳನ್ನು ಖರೀದಿಗೆ ಸೂಚಿಸಿದರೆ ಏಕೆಂದು ಪ್ರಶ್ನಿಸಬೇಕು.

    ಶಾಲೆಗಳು ಪ್ರಕಟಿಸಬೇಕಿರುವ ಮಾಹಿತಿ
    * ರಾಜ್ಯ ಪಠ್ಯಕ್ರಮ ಶಾಲೆಗಳಾಗಿದ್ದಲ್ಲಿ ಶಾಲಾ ನೋಂದಣಿ, ಅನುಮತಿ ಪಡೆದ ಬೋಧನಾ ಮಾಧ್ಯಮ, ಪಠ್ಯಕ್ರಮ ಮತ್ತು ತರಗತಿ, ಮಾನ್ಯತೆ ಪಡೆದ ವಿವರಗಳು, ಅನುಮತಿ ಪಡೆದಿರುವಂತೆ ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ, ಶಾಲೆಯು ಅಧಿಸೂಚಿಸಿದ ಶುಲ್ಕ, ಶಿಕ್ಷಕ ಮತ್ತು ಪಾಲಕರ ಸಂಘ ರಚಿಸಿರುವ ಮಾಹಿತಿಯನ್ನು ನೀಡಬೇಕು.

    ಇದನ್ನೂ ಓದಿ: ಆನೇಕಲ್​ನಲ್ಲಿ ಸಿಲಿಂಡರ್​ ಸ್ಫೋಟಕ್ಕೆ ಇಡೀ ಅಂಗಡಿಯೇ ಧ್ವಂಸ: ಓರ್ವ ವ್ಯಕ್ತಿಯ ಸ್ಥಿತಿ ಗಂಭೀರ

    * ಈ ಸಿಬಿಎಸ್‌ಇ/ಐಪಿಎಸ್‌ಇ ಸೇರಿ ಇತರೆ ಪಠ್ಯಕ್ರಮ ಶಾಲೆಗಳಾಗಿದ್ದರೆ, ನಿರಾಕ್ಷೇಪಣಾ ಪತ್ರದ (ಎನ್ ಒಸಿ) ಸಂಖ್ಯೆ ಮತ್ತು ದಿನಾಂಕ, ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಮಾನ್ಯತಾ ಸಂಖ್ಯೆ, ಪಠ್ಯ ಕ್ರಮ ಮತ್ತು ತರಗತಿ, ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ, ನಿಗದಿಪಡಿಸಿದ ಶುಲ್ಕ ಮತ್ತು ಶಿಕ್ಷಕ/ಪಾಲಕರ ಸಂಘ ರಚಿಸಿರುವ ಮಾಹಿತಿ ನೀಡಬೇಕು.

    ನನಗೆ ಪೂರ್ಣಾ ಜೊತೆ ಲವ್ ಅಫೇರ್ ಇದೆ ಆದರೆ… ನಟ, ನಿರ್ದೇಶಕ ರವಿಬಾಬು ಶಾಕಿಂಗ್​ ಹೇಳಿಕೆ

    ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಎಚ್​.ಡಿ.ರೇವಣ್ಣ ನಾಮಪತ್ರ ಸಲ್ಲಿಕೆ; ಪತ್ನಿ ಭವಾನಿ ಬಳಿ ಇದೆ ಕೆಜಿಗಟ್ಟಲೆ ಬೆಳ್ಳಿ-ಬಂಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts