More

    ವಾರಸುದಾರರಿಗೆ 31 ಮೊಬೈಲ್ ಹಸ್ತಾಂತರಿಸಿದ ಕಲಬುರಗಿ ಜಿಲ್ಲಾ ಪೊಲೀಸ್


    ಕಳವಾಗಿದ್ದನ್ನು ಪತ್ತೆ ಹಚ್ಚಿದ ಪೊಲೀಸರು | ಸಿಇಐಆರ್ ಪೋರ್ಟಲ್ ಸಾಥ್ ! ವಾರದ ಸೇರಿ ಕಳೆದುಕೊಂಡವರಿಗೆ ಮೊಬೈಲ್ ನೀಡಿದ ಎಸ್‌ಪಿ ಅಕ್ಷಯ ಹಾಕೆ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಜಿ¯್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮತ್ತು ಕಾಣೆಯಾದ ೩೧ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ತಿಳಿಸಿದರು.
    ಜಿ¯್ಲÉಯ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಕ್ಕೆ ಸಂಬAಧಿಸಿದAತೆ ಕಳವು, ಮರೆತ ಮತ್ತು ಕಾಣೆಯಾದ ಮೊಬೈಲ್ ಫೋನ್‌ಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆಯ ಸಿಇಐಆರ್ ತಂತ್ರಾAಶದಡಿ ಪತ್ತೆ ಮಾಡಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಅಧಿಕಾರಿಗಳು, ಸಿಬ್ಬಂದಿ ನೆರವಿನ ಜತೆಗೆ ನೂತನ ತಂತ್ರಜ್ಞಾನದ ಸಹಾಯದಿಂದ ೨೭೬ ಮೊಬೈಲ್‌ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಮಂಗಳವಾರ ಸದರಿ ತಂತ್ರಾAಶದಡಿ ೩೧ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಸಂಬAಧಿತರಿಗೆ ಕೊಡಲಾಗಿದೆ. ಮೊಬೈಲ್ ಪತ್ತೆಗಾಗಿ ಸಿಇಎನ್ ಠಾಣೆ ನಿರೀP್ಷÀಕ ಶಿವಶಂಕರ ಸಾಹು, ಸಿಪಿಸಿ ಅಶೋಕ, ಸಿದ್ದಪ್ಪ, ಉಮೇಶ ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದರು.


    ವರ್ಷದ ನಂತರ ಸಿಕ್ಕ ಖುಷಿ
    ಕಲಬುರಗಿ ಆಳಂದ ರಸ್ತೆಯ ಸಂತೋಷ ಕಾಲನಿಯಲ್ಲಿನ ವಿಡಿಯೋ ಜರ್ನಲಿಸ್ಟ್ ವಿಜಯಕುಮಾರ ವಾರದ ಅವರ ಮನೆ ಕಿಟಕಿಯಿಂದಲೇ ವರ್ಷದ ಹಿಂದೆ ಮೊಬೈಲ್ ಕಳವಾಗಿತ್ತು. ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು ಸಿಇಐಆರ್ ತಂತ್ರಾAಶದಲ್ಲಿ ಮೊಬೈಲ್‌ನ ಐಎಂಎಐ ಸಂಖ್ಯೆ ಅಳವಡಿಸಿ ಬೆನ್ನಟ್ಟಿದ್ದು, ವರ್ಷದ ನಂತರ ಪತ್ತೆಯಾಗಿದೆ. ಮೊಬೈಲ್ ವಾಪಸ್ ಬರಲ್ಲ ಎಂದುಕೊAಡಿದ್ದೆ, ಆದರೆ ಸೆನ್ ಪೊಲೀಸರ ನಿರಂತರ ಫಾಲೋಅಪ್‌ನಿಂದ ಸಿಕ್ಕಿದೆ ಎಂದು ವಾರದ ಹರ್ಷ ವ್ಯಕ್ತಪಡಿಸಿದ್ದಾರೆ.


    ಬಹುತೇಕರು ಮೊಬೈಲ್ ಕಳೆದ ತಕ್ಷಣ ದೂರು ನೀಡುವುದಿಲ್ಲ. ಸೂಕ್ತ ದಾಖಲೆಯೊಂದಿಗೆ ದೂರು ನೀಡಿದರೆ ಖಂಡಿತವಾಗಿ ಮೊಬೈಲ್ ಪತ್ತೆಯಾಗಲಿದೆ. ವಾಹನ ಹತ್ತುವಾಗ, ಇಳಿಯುವಾಗ, ಚಾಲನೆ ವೇಳೆ, ಪ್ರಯಾಣ ಸಮಯದಲ್ಲಿ ಮೊಬೈಲ್‌ಗಳ ಬಗ್ಗೆ ಜಾಗ್ರತೆ ವಹಿಸಬೇಕು.
    | ಅಕ್ಷಯ ಹಾಕೆ
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts