More

    ವೃದ್ಧೆಯನ್ನೇ ಹಿಂಬಾಲಿಸಿದ ಯುವಕ ಹೀಗಾ ಮಾಡೋದು? ಆತನ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ!

    ಮೈಸೂರು: ಸರ ಕಳ್ಳರಿಗೆ ಪಾದಚಾರಿ ಮಹಿಳೆಯರೇ ಟಾರ್ಗೆಟ್​. ಹಾದಿ-ಬೀದೀಲಿ ಹೊಂಚು ಹಾಕುವ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ಕಂಡ ಕೂಡಲೇ ತಾವೂ ದಾರಿಹೋಕರಂತೆ ಅವರನ್ನೇ ಹಿಂಬಾಲಿಸುತ್ತಾರೆ. ಅತ್ತಿರ ಬರುತ್ತಿದ್ದಂತೆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕ್ಷಣಾರ್ಧದಲ್ಲೇ ಸರ ಕಸಿದುಕೊಂಡು ಪರಾರಿಯಾಗ್ತಾರೆ.

    ಇದೀಗ 70 ವರ್ಷದ ವೃದ್ಧೆಯ ಚಿನ್ನದ ಸರವನ್ನು ಕಳ್ಳರು ಕಸಿದುಕೊಂಡಿದ್ದು, ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈಸೂರಿನ ಸೋಮನಾಥಪುರದಲ್ಲಿ 70 ವರ್ಷದ ವೃದ್ಧೆ ಶಾಂತಮ್ಮ ವಾಕಿಂಗ್​ ಮಾಡುತ್ತಿದ್ದ ವೇಳೆ ಯುವಕನೊಬ್ಬ ಅವರನ್ನೇ ಹಿಂಬಾಲಿಸಿಕೊಂಡು ಬಂದು ಸರ ಕಸಿದುಕೊಂಡು ಎಸ್ಕೇಪ್​ ಆಗಿದ್ದಾನೆ.

    ಇದನ್ನೂ ಓದಿರಿಲೇಡಿ ತಹಸೀಲ್ದಾರ್​ಗೆ ಯುವಕರ ಅವಾಜ್​! ವಿಡಿಯೋ ವೈರಲ್​ 

    ತನ್ನ ಕೊರಳಿಗೆ ಕೈ ಹಾಕಿ ಸರ ಕಸಿದುಕೊಂಡ ದುಷ್ಕರ್ಮಿಯನ್ನು ಹಿಡಿಯಲು ವೃದ್ಧೆ ಶಾಂತಮ್ಮ ಯತ್ನಿಸಿದರೂ ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲೇ ಅಲ್ಲಿಗೆ ಮತ್ತೊಬ್ಬ ಬೈಕ್‌ನಲ್ಲಿ ಬಂದಿದ್ದಾನೆ‌. ಸರಗಳ್ಳ ಬೈಕ್ ಹತ್ತಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯವೂ ಘಟನೆ ನಡೆದ ಸ್ಥಳದಲ್ಲಿ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವೃದ್ಧೆಯ ಚಿನ್ನದ ಸರ ಕಸಿದುಕೊಂಡ ಕಳ್ಳ ಎಸ್ಕೇಪ್​ !

    ವೃದ್ಧೆಯ ಚಿನ್ನದ ಸರ ಕಸಿದುಕೊಂಡ ಕಳ್ಳ ಎಸ್ಕೇಪ್​ ! ವಾಕಿಂಗ್​ ಮಾಡುತ್ತಿದ್ದ ವೃದ್ಧೆ ಶಾಂತಮ್ಮರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಯೊಬ್ಬ ಅವರ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈಸೂರಿನ ಸೋಮನಾಥಪುರದಲ್ಲಿ ಈ ಘಟನೆ ಸಂಭವಿಸಿದೆ. #GoldChainThief #CCCamera #Mysore

    Posted by Vijayavani on Monday, August 24, 2020

    ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!

    ಕಿರುಕುಳಕ್ಕೆ ಯುವ ವಕೀಲ ಬಲಿ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts