More

    ಡಾರ್ಲಿಂಗ್ ಥಿಯೇಟರ್ ಮುಚ್ಚಿಸಿದ ಜಗನ್; 300ಕ್ಕೂ ಹೆಚ್ಚು ಚಿತ್ರಮಂದಿರಗಳು ಕ್ಲೋಸ್!

    ಆಂಧ್ರ ಪ್ರದೇಶ: ಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ಆಂಧ್ರದಲ್ಲಿ ಸಿನಿಮಾ ಟಿಕೆಟ್​ಗಳ ಬೆಲೆ ಬಾರಿ ಮೊತ್ತದಲ್ಲಿ ಕಡಿತಗೊಳಿಸಿದೆ. ಇದೇ ವಿಚಾರವಾಗಿ ಆಂಧ್ರ ಸರ್ಕಾರ ಮತ್ತು ಟಾಲಿವುಡ್ ನಡುವಿನ ತಿಕ್ಕಾಟ ಇತ್ತೀಚೆಗೆ ತೀವ್ರ ಜೋರಾಗಿದೆ. ಇದೀಗ, ಟಿಕೆಟ್ ದರ ಕಡಿಮೆ ಆಗಿರುವುದರಿಂದ ಬಹುತೇಕ ಎಲ್ಲಾ ಥಿಯೇಟರ್​ಗಳು ತೀವ್ರ ನಷ್ಟ ಅನುಭವಿಸುತ್ತಿದ್ದು, ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಅಂದಹಾಗೆ, ನಟ ಡಾರ್ಲಿಂಗ್ ಪ್ರಭಾಸ್ ಪಾಲುದಾರರಾಗಿ ನಡೆಸುತ್ತಿರುವ ದೇಶದ, ಏಷ್ಯಾದ ಅತಿದೊಡ್ಡ ಚಿತ್ರಮಂದಿರವನ್ನು ಈಗ ಮುಚ್ಚಲಾಗಿದೆ.
    ಹೌದು, ಆಂಧ್ರದ ನೆಲ್ಲೂರಿನ ಸಮೀಪದ ಸುಲ್ಲೂರುಪೇಟದಲ್ಲಿ ವಿ ಎಪಿಕ್ಹೆಸರಿನ ಅತಿದೊಡ್ಡ ಮೂರು ಸ್ಕ್ರೀನ್ ಚಿತ್ರಮಂದರಿವೊಂದನ್ನು 2 ವರ್ಷಗಳ ಹಿಂದೆ 2019ರಲ್ಲಿ ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಥಿಯೇಟರ್ ಚೆನ್ನಾಗಿ ನಡೆಯುತ್ತಿತು. ಆದರೆ, ಈಗ ಟಿಕೆಟ್​ಗಳ ದರ ತೀರ ಕಡಿಮೆ ಆಗಿದ್ದು, ಯಾವುದೇ ಲಾಭವಿಲ್ಲದರ ಜೊತೆ ನಷ್ಟವನ್ನು ಎದುರಿಸುತ್ತಿರುವ ಕಾರಣ ಡಿ.25 ರಿಂದ ಚಿತ್ರಗಳ ಪ್ರದರ್ಶನ ನಿಲ್ಲಿಸಿದೆ. ‘ವಿ ಎಪಿಕ್ಥಿಯೇಟರ್ 106 ಅಡಿ ಅಗಲದ ಪರದೆಯನ್ನು ಹೊಂದಿರುವ ದೇಶದ, ಏಷ್ಯಾದ ಮೊದಲನೇ ಚಿತ್ರಮಂದಿರವಾಗಿದ್ದು, ಇದು ವಿಶ್ವದ ಮೂರನೇ ಅತಿದೊಡ್ಡ ಪರದೆಯಾಗಿದೆ ಎನ್ನಲಾಗಿದೆ. 676 ಆಸನಗಳ ಸಾಮರ್ಥ್ಯದ ಥಿಯೇಟರ್, ತಲಾ 140 ಆಸನಗಳ 3 ಸ್ಕ್ರೀನ್​ಗಳನ್ನು ಹೊಂದಿದೆ.

    ಡಾರ್ಲಿಂಗ್ ಥಿಯೇಟರ್ ಮುಚ್ಚಿಸಿದ ಜಗನ್; 300ಕ್ಕೂ ಹೆಚ್ಚು ಚಿತ್ರಮಂದಿರಗಳು ಕ್ಲೋಸ್!

    ವಿ ಎಪಿಕ್ಚಿತ್ರಮಂದಿರ ಹೈಟೆಕ್ ಚಿತ್ರಮಂದಿರವಾಗಿದ್ದು ಇದರಲ್ಲಿ ಜಗನ್ ಅವರ ಆದೇಶದಂತೆ ಸಿನಿಮಾ ಟಿಕೆಟ್ ಬೆಲೆ ಕೇವಲ 30 ರೂ. ಆಗಿರಬೇಕು. ಇಷ್ಟು ಕಡಿಮೆ ಬೆಲೆಗೆ ಟಿಕೆಟ್ ಮಾರಿದರೆ ತೀವ್ರ ನಷ್ಟ ಎದಿರಿಸಬೇಕು. ಹಾಗಾಗಿ, ಚಿತ್ರಮಂದಿರವನ್ನು ಮುಚ್ಚಲಾಗಿದೆ. ಇದಲ್ಲದೇ, ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿನ 300ಕ್ಕೂ ಹೆಚ್ಚು ಥಿಯೇಟರ್​ಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ. ಜೊತೆಗೆ, ಥಿಯೇಟರ್​ಗಳನ್ನು ಬಂದ್ ಮಾಡಲು ಕಾರಣ ಜಗನ್​ ಮೋಹನ್ ರೆಡ್ಡಿ ಅವರ ಹೊಸ ಆದೇಶ ಜಿ.ನಂ.35 ಎಂದು ಹೇಳುತ್ತಿದ್ದಾರೆ.
    ಇದರಿಂದ, ತಮ್ಮ ಹೊಸ ಆದೇಶದಿಂದ ಸಿಎಂ ಜಗನ್ ಅವರೇ ಪರೋಕ್ಷವಾಗಿ ಥಿಯೇಟರ್​ಗಳನ್ನು ಮುಚ್ಚಿಸಿದಂತಾಗಿದೆ. ಆಂಧ್ರ ಸರ್ಕಾರ ತಮ್ಮ ಮುಂದಿನ ಅಂತಿಮ ನಿರ್ಧಾರವನ್ನು ಏನೂ ಎಂದು ತಿಳಿಸಿದರೆ ಚಿತ್ರಮಂದರಿದ ಮಾಲೀಕರು ಸಹ ತಮ್ಮ ಮುಂದಿನ ನಡೆ ಏನೂ ಅಂತ ತಿಳಿಸಲಿದ್ದಾರೆ. ಈಗಾಗಲೇ, ಕರೊನಾದಿಂದ ಚಿತ್ರಮಂದಿರಗಳಿಗೆ ಸಿಕ್ಕಾಪಟ್ಟೆ ಲಾಸ್ ಆಗಿದೆ. ಇದೀಗ ಜಗನ್ ಸರ್ಕಾರದ ಹೊಸ ಆದೇಶ, ಆಂಧ್ರ ಪ್ರದೇಶದ ಚಿತ್ರಮಂದಿರಗಳಿಗೆ ಅದೆಷ್ಟು ಲಾಸ್ ಮಾಡುತ್ತೆ ಎಂದು ಕಾದು ನೋಡಬೇಕಿದೆ. 

    ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಹಾವು ಕಡಿತ

    ಪ್ರಚಾರಕ್ಕಾಗಿ ಕರ್ನಾಟಕ ಬಂದ್ ಮಾಡಿದ್ರೆ ನಮ್ಮ ಬೆಂಬಲ ಇರುವುದಿಲ್ಲ: ನಟ ನಿಖಿಲ್​ ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts