More

    ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಎದುರಾಗಿದೆ ಕರೋನಾ ಭೀತಿ..!

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಕರೋನಾ ಭೀತಿ ಎದುರಾಗಿದ್ದು ಸರ್ಕಾರದ ಕಠಿಣ ಕ್ರಮಗಳ ನಡುವೆ ಕನ್ನಡ ಚಿತ್ರಗಳಿಗೆ ಹಣ ಸಂಪಾದನೆ ಹೇಗೆ ಎನ್ನುವ ಪ್ರಶ್ನೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿದೆ.

    ಇದೀಗ ಕರೋನಾ ಭೀತಿಯಲ್ಲೇ ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತಿದ್ದು ಸ್ಯಾಂಡಲ್​ವುಡ್ ಮತ್ತೆ ಆತಂಕಕ್ಕೆ ಸಿಲುಕಿದೆ. ಈ ವಾರ ತೆರೆಗೆ ಬರೋಕೆ ಆರಕ್ಕೂ ಅಧಿಕ ಚಿತ್ರಗಳು ಸಜ್ಜಾಗಿವೆ. ನಿರ್ಮಾಪಕರ ಖಜಾನೆಗೆ ಪೆಟ್ಟು ಕೊಡೋಕೆ ಕೊರೋನಾ ಭೂತ ರೆಡಿಯಾಗಿದ್ದು, ಸ್ಯಾಂಡಲ್​ವುಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.

    ಈ ವಾರ ಜಮಾಲಿ ಗುಡ್ಡ, ಪದವಿ ಪೂರ್ವ, ಮೇಡ್ ಇನ್ ಬೆಂಗಳೂರು, ನಾನು ಅದು ಮತ್ತು ಸರೋಜ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿ ನಿಂತಿವೆ. ಆದರೆ ಇದರ ನಡುವೆ ಕರೋನಾ ಭೀತಿ ಹೆಚ್ಚಾಗಿದ್ದು ಸರ್ಕಾರ ಕೂಡ ಕೋವಿಡ್​ ಅಲೆಯಿಂದ ಪಾರಾಗಲು ಕಠಿಣ ನಿಯಮಗಳನ್ನು ತರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಥಿಯೇಟರ್​ಗಳು ಪ್ರೇಕ್ಷಕರ ಕೊರತೆ ಎದುರಿಸಲಿವೆ ಎಂದು ಹೇಳಲಾಗುತ್ತಿದೆ.

    ಥಿಯೇಟರ್, ಮಾಲ್ ಗಳಲ್ಲಿ ಸ್ಯಾನಿಟೈಸರ್ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು ಕರೋನಾ ಭಯಕ್ಕೆ ಥಿಯೇಟರ್ ನತ್ತ ಬರಲು ಪ್ರೇಕ್ಷಕರ ಹಿಂಜರಿಕೆ ವ್ಯಕ್ತಪಡಿಸುತ್ತಿದ್ದಾರೆ. ಈಗತಾನೆ ಚೇತರಿಸಿಕೊಂಡಿದ್ದ ಥಿಯೇಟರ್ ಮಾಲೀಕರ ಎದೆ ಢವ ಢವ ಅನ್ನತೊಡಗಿದೆ. ಸದ್ಯಕ್ಕೆ ಸರ್ಕಾರದ ನಡೆ ನೋಡಿ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡಗಳು ಯೋಜನೆ ಹಾಕಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts