More

    ನಿರ್ವಹಣೆ ಕೊರತೆಯಿಂದ ಸೊರಗಿದ ರಂಗಮಂದಿರ

    ಕಾಂತರಾಜ್‌ಹೊನ್ನೇಕೋಡಿ ಸಕಲೇಶಪುರ
    ಜಾನಪದ ಜಂಗಮ ಎಸ್.ಕೆ. ಕರೀಂಖಾನ್ ಸವಿನೆನಪಿಗಾಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಿದ್ದ ರಂಗಮಂದಿರ ನಿರ್ವಹಣೆಯ ಸಮಸ್ಯೆಯಿಂದ ನಲುಗುತ್ತಿದೆ.

    ಶತಾಯುಷಿ, ನಾಡೋಜ ಎಸ್.ಕೆ ಕರೀಂಖಾನ್ 1904ರಲ್ಲಿ ಪಟ್ಟಣದಲ್ಲಿ ಜನಿಸಿ, ಬಾಲ್ಯವನ್ನು ಇಲ್ಲೇ ಕಳೆದಿದ್ದರು. 2004ರಲ್ಲಿ ಎಸ್.ಕೆ ಕರೀಂಖಾನ್ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭ ತಾಲೂಕು ಆಡಳಿತದಿಂದ ಅಂದಿನ ಶಾಸಕ ಬಿ.ಬಿ.ಶಿವಪ್ಪ ಅವರ ಮಾರ್ಗದರ್ಶನದಲ್ಲಿ (10 ಲಕ್ಷ ರೂ. ವೆಚ್ಚದಲ್ಲಿ) ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಒಂದು ಸಭಾಂಗಣ, ಎರಡು ಕೊಠಡಿ, ಶೌಚಗೃಹ ಹೊಂದಿರುವ ರಂಗಮಂದಿರ ನಿರ್ಮಿಸಲಾಗಿತ್ತು. ಇಲ್ಲಿ ಜಾನಪದ ಹಾಡುಗಾರಿಕೆ ಸೇರಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿತ್ತು. ಅದರಂತೆ ಕೆಲವು ಚಟುವಟಿಕೆ ನಡೆದವು.

    ಆದರೆ, ಸಾಧಕರ ಹೆಸರಿನಲ್ಲಿ ನಿರ್ಮಾಣವಾದ ರಂಗಮಂದಿರ ಪ್ರಸ್ತುತ ನಿರ್ವಹಣೆ ಇಲ್ಲದೆ ಅವನತಿ ಹಾದಿ ಹಿಡಿದಿದೆ. ಸಾಂಸ್ಕೃತಿಕ ಚಟುವಟಿಕೆಗಳ ಬದಲಾಗಿ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಛಾವಣಿ ತೂತು ಬಿದ್ದು ಮಳೆ ನೀರು ಸೋರಿಕೆಯಾಗುತ್ತಿದೆ. ಗೋಡೆಗಳಲ್ಲಿ ಅಶ್ಲೀಲ ಸಾಹಿತ್ಯ ರಾರಾಜಿಸುತ್ತಿವೆ. ಕೊಠಡಿ, ಶೌಚಗೃಹದಲ್ಲಿದ್ದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಸದ್ಯ ಅಳಿದುಳಿದ ರಂಗಮಂದಿರದ ಕಟ್ಟಡದಲ್ಲಿ ವಲಸೆ ಕಟ್ಟಡ ಕಾರ್ಮಿಕರು ವಾಸಿಸುತ್ತಿದ್ದಾರೆ. ನಿರ್ಲಕ್ಷ್ಯಕ್ಕೆ ಸಿಲುಕಿರುವ ರಂಗಮಂದಿರವನ್ನು ತಾಲೂಕು ಆಡಳಿತ ಸೂಕ್ತವಾಗಿ ನಿರ್ವಹಣೆ ಮಾಡಬೇಕಿದೆ. ಇಲ್ಲದಿದ್ದರೆ ಹಿರಿಯ ಕಲಾವಿದರ ಹೆಸರಿಗೆ ಕಳಂಕ ತಂದಂತಾಗುತ್ತದೆ.


    ರಂಗಮಂದಿರ ನಿರ್ವಹಣೆ ಜವಾಬ್ದಾರಿಯನ್ನು ಪುರಸಭೆಗೆ ವಹಿಸಲು ನಿರ್ದೇಶನ ನೀಡಲಾಗುವುದು.
    ಎಚ್.ಕೆ ಕುಮಾರಸ್ವಾಮಿ ಶಾಸಕ

    ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿ ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲದಾಗಿದೆ. ಹಾಗಾಗಿ ರಂಗಮಂದಿರವನ್ನು
    ಸೂಕ್ತವಾಗಿ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಈ ಬಗ್ಗೆ ಸಂಘಸಂಸ್ಥೆಗಳು ಗಟ್ಟಿಯಾದ ದನಿ ಎತ್ತಬೇಕಿದೆ.
    ಪ್ರಸಾದ್ ರಕ್ಷಿಧಿ ರಂಗಕರ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts