More

    ಕೆರೆಗೆ ಕಲ್ಲು ಎಸೆದಿದ್ದಕ್ಕೆ ಏನೇನೆಲ್ಲ ಅವಾಂತರ ಆಯ್ತು ನೋಡಿ!

    ಸಿರವಾರ (ರಾಯಚೂರು): ಗ್ರಾಮೀಣ ಪ್ರದೇಶಗಳಲ್ಲಿ ಸುಮ್ಮನೆ ಖಾಲಿ ತಿರುಗಾಡುವ ಕೆಲವು ವ್ಯಕ್ತಿಗಳು ಕೈಗೆ ಕಲ್ಲು ತೆಗೆದುಕೊಂಡು ಬಾವಿ, ಕೆರೆಗಳಿಗೆ ಎಸೆಯುವುದು ಮಾಮೂಲಿಯಾಗಿ ಕಂಡು ಬರುವ ದೃಶ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಕೆರೆಗೆ ಕಲ್ಲು ಎಸೆದಿದ್ದಕ್ಕೆ ಆಗಬಾರದ ಅವಾಂತರವೆಲ್ಲ ಆಗಿಹೋಗಿದೆ.

    ತಾಲೂಕಿನ ಶಾಖಾಪುರದಲ್ಲಿ ಶುಕ್ರವಾರ ಬೆಳಗ್ಗೆ ಅತ್ತನೂರು ಗ್ರಾಮದ ಪಂಚಾಯಿತಿ ನೌಕರನೊಬ್ಬ ತಮಾಷೆಗೆಂದು ಕೆರೆಗೆ ಕಲ್ಲೆಸೆದಿದ್ದ. ಇದನ್ನು ದೂರದಿಂದ ಕೆಲವರು ಗಮನಿಸಿದ್ದರು. ಅದು ಹೇಳಿಕೇಳಿ ಕುಡಿಯುವ ನೀರಿನ ಕೆರೆ. ಜನ ಅಲ್ಲಿಂದಲೇ ನೀರು ತಂದು, ಅಡುಗೆ ಮಾಡುವುದಕ್ಕೂ ಬಳಸುತ್ತಾರೆ.

    ಇದನ್ನೂ ಓದಿರಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರೀಗ ಫುಲ್​ ಖುಷ್! ಕಾರಣ ಇಲ್ಲಿದೆ ನೋಡಿ…

    ಇದು ಮೊದಲೇ ಕರೊನಾ ಕಾಲ. ಯಾರು ಏನು ಮಾಡಿದರೂ ಅನುಮಾನದಿಂದ ನೋಡುವ ಸಮಯ. ಆ ವ್ಯಕ್ತಿ ಕೆರೆಯಲ್ಲಿ ಕಲ್ಲೆಸೆದಿದ್ದರ ಹಿಂದೆಯೂ ಏನೋ ಮಸಲತ್ತು ಅಡಗಿದೆ ಎಂದು ಭಾವಿಸಿದ ಕೆಲವರು, ಆತ ಕಲ್ಲಿಗೆ ತನ್ನ ಎಂಜಲು ಹಚ್ಚಿ ಕೆರೆಗೆ ಎಸೆದಿದ್ದಾನೆ ಎಂದು ಸುದ್ದಿ ಹಬ್ಬಿಸಿದರು.

    ಈ ವದಂತಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಇಡೀ ಗ್ರಾಮಕ್ಕೆ ತಿಳಿಯುವಷ್ಟರಲ್ಲಿ ಒಂದು ದಿನವಾಯಿತು. ಪರಿಣಾಮ, ಗ್ರಾಮಸ್ಥರು ತಮ್ಮ ಮನೆಗಳಲ್ಲಿ ತಂದಿಟ್ಟ ನೀರು ಅದೇ ಕೆರೆಯದ್ದಾದ್ದರಿಂದ ಅದರಲ್ಲೂ ಕರೊನಾ ಸೋಂಕು ಇರಬಹುದೆಂದು ಹೆದರಿದರು. ತುಂಬಿಟ್ಟ ನೀರನ್ನೆಲ್ಲ ರಸ್ತೆಗೆ ಚೆಲ್ಲಿದರು. ಅಷ್ಟೇ ಅಲ್ಲ, ಆ ನೀರಿನಿಂದಲೇ ಮಾಡಿದ್ದ ಅಡುಗೆಯನ್ನೂ ಚೆಲ್ಲಿದರು!

    ಇದನ್ನೂ ಓದಿರಿ ಸೋಲಿನ ಹತಾಶೆ.. ದೇವಸ್ಥಾನದಲ್ಲಿ ಕರ್ಪೂರ ಹಚ್ಚಿಸಿ ಆಣೆ ಪ್ರಮಾಣ ಮಾಡಿಸಿದ್ರು!

    ಕಲ್ಲೆಸೆದ ಮುಸ್ಲಿಂ ವ್ಯಕ್ತಿಯನ್ನು ಶನಿವಾರ ಬೆಳಗ್ಗೆ ಗ್ರಾಮಕ್ಕೆ ಕರೆಯಿಸಿಕೊಂಡ ಪೊಲೀಸರು, ಸಾರ್ವಜನಿಕರೆಲ್ಲರ ಎದುರೇ ಆತನಿಗೆ ಕೆರೆಯ ನೀರು ಕುಡಿಯುವಂತೆ ತಿಳಿಸಿದರು. ಆತ ನಿರಾಳವಾಗಿ ಆ ನೀರು ಕುಡಿದ. ತಾನು ಅಂತಹ ಯಾವುದೇ ದುರುದ್ದೇಶದ ಕೃತ್ಯ ಎಸಗಿಲ್ಲ ಎಂದು ಸ್ಪಷ್ಟಪಡಿಸಿದ. ಆಗ ಗ್ರಾಮಸ್ಥರಲ್ಲಿದ್ದ ಅನುಮಾನ ಬಗೆಹರಿದು ನಿಟ್ಟುಸಿರು ಬಿಟ್ಟರು.

    ಇದನ್ನೂ ಓದಿರಿ ಸ್ಕೂಲ್​ನಲ್ಲಿ ಮಾಸ್ಕ್​ ಮಾರಾಟ, ಕರೊನಾ ಹೆಸರಲ್ಲಿ ಸುಲಿಗೆ? ಫೋಟೋ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts