More

    ಸೋಲಿನ ಹತಾಶೆ.. ದೇವಸ್ಥಾನದಲ್ಲಿ ಕರ್ಪೂರ ಹಚ್ಚಿಸಿ ಆಣೆ ಪ್ರಮಾಣ ಮಾಡಿಸಿದ್ರು!

    ಮಾಗಡಿ: ಸಾಮಾನ್ಯವಾಗಿ ಕಳ್ಳತನ ಆರೋಪ ಇಲ್ಲವೇ ಕೌಟುಂಬಿಕ ಕಲಹದ ವೇಳೆ ದೇವರ ಮುಂದೆ ಆಣೆ ಪ್ರಮಾಣ ಮಾಡಿಸುವುದನ್ನ ಕಂಡಿದ್ದೇವೆ. ಭಾಷೆ ಪ್ರಮಾಣ ಪಡೆಯುವುದನ್ನೂ ಕೇಳಿದ್ದೇವೆ. ಆದರಿಲ್ಲಿ ತನಗೆ ವೋಟ್​ ಮಾಡಿಲ್ಲ ಎಂದು ಮಹಿಳಾ ಜನಪ್ರತಿನಿಧಿಯೊಬ್ಬರನ್ನು ಸೋತ ಅಭ್ಯರ್ಥಿ ಗ್ರಾಮಸ್ಥರ ಸಮ್ಮುಖದಲ್ಲೇ ಬಲವಂತವಾಗಿ ದೇವಸ್ಥಾನಕ್ಕೆ ಕರೆದೊಯ್ದು ಕರ್ಪೂರ ಹಚ್ಚಿಸುವ ಮೂಲಕ ಆಣೆ ಮಾಡಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಾಟೆಯೂ ನಡೆದಿದೆ. ಅದರ ಡಿಟೇಲ್ಸ್​ ಇಲ್ಲಿದೆ ನೋಡಿ…

    ಇದನ್ನೂ ಓದಿರಿ ಸ್ಕೂಲ್​ನಲ್ಲಿ ಮಾಸ್ಕ್​ ಮಾರಾಟ, ಕರೊನಾ ಹೆಸರಲ್ಲಿ ಸುಲಿಗೆ? ಫೋಟೋ ವೈರಲ್​…

    ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮೋಟಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷರ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. 17 ಸದಸ್ಯ ಬಲದ ಪಂಚಾಯಿತಿಗೆ 11 ಮತ ಪಡೆದ ಪದ್ಮಾವತಿ ಜಯರಾಮು ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಮಂಜುಳಾ 6 ಮತ ಪಡೆದು ಸೋಲುಂಡರು. ಈ ಸೋಲಿಂದ ಹತಾಶರಾದ ಮಂಜುಳಾ, ಗ್ರಾಪಂ ಮಾಜಿ ಅಧ್ಯಕ್ಷೆಯೂ ಆದ ಈಗಿನ ಸದಸ್ಯೆ ಅನಸೂಯ ಶ್ರೀನಿವಾಸ್​ ವಿರುದ್ಧ ತಿರುಗಿಬಿದ್ದಿದ್ದಾರೆ. ‘ನನಗೆ ನೀನು ಮತ ಹಾಕಿಲ್ಲ’ ಎಂದು ಮಾನಸಿಕ ಕಿರುಕುಳ ನೀಡಿದ್ದಾರೆ.

    ಇದನ್ನೂ ಓದಿರಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರೀಗ ಫುಲ್​ ಖುಷ್! ಕಾರಣ ಇಲ್ಲಿದೆ ನೋಡಿ…

    ಸೋಲಿನ ಹತಾಶೆ.. ದೇವಸ್ಥಾನದಲ್ಲಿ ಕರ್ಪೂರ ಹಚ್ಚಿಸಿ ಆಣೆ ಪ್ರಮಾಣ ಮಾಡಿಸಿದ್ರು!
    ಮೋಟಗೊಂಡನಹಳ್ಳಿ ಗ್ರಾಪಂ ಸದಸ್ಯೆ ಅನಸೂಯ ಅವರು ದೇವಸ್ಥಾನದ ಮುಂದೆ ಕರ್ಪೂರ ಹಚ್ಚಿ ಪ್ರಮಾಣ ಮಾಡುತ್ತಿರುವುದು.

    ಇಷ್ಟಕ್ಕೆ ಸುಮ್ಮನಾದ ಮಂಜುಳಾ, ಗ್ರಾಪಂ ಸದಸ್ಯೆ ಅನಸೂಯ ಅವರನ್ನು ಗೂಬೆಕಲ್ಲಮ್ಮ ದೇವಾಲಯಕ್ಕೂ ಕರೆದೊಯ್ದು, ‘ತನಗೇ ಮತ ಹಾಕಿರುವೆ’ ಎಂದು ಕರ್ಪೂರ ಹಚ್ಚಿಸಿ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ. ಸಿಟ್ಟಿಗೆದ್ದ ಮಂಜುಳಾ ಬೆಂಬಲಿಗರು ಹಲ್ಲೆಗೆ ಮುಂದಾದರು ಎನ್ನಲಾಗಿದೆ. ಸ್ಥಳಕ್ಕೆ ಮಾಧ್ಯಮದವರು ಭೇಟಿ ನೀಡುತ್ತಿದ್ದಂತೆ ಮಂಜುಳಾ ಬೆಂಬಲಿಗರು ಪರಾರಿಯಾದರು. ವಿಷಯ ತಿಳಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಕಲೆಹಾಕಿದರು.

    ಗಲಾಟೆ ವೇಳೆ ಸ್ಥಳದಲ್ಲಿದ್ದ ತಾಪಂ ಸದಸ್ಯ ಹನುಮಂತರಾಯಪ್ಪ ಮತ್ತು ಕಾಂಗ್ರೆಸ್​ ಮುಖಂಡ ರಾಮಚಂದ್ರಯ್ಯ ಅವರು, ಅನಸೂಯ ಪ್ರಾಮಾಣಿಕವಾಗಿ ಮಂಜುಳಾಗೆ ಸಹಕಾರ ನೀಡಿ ನುಡಿದಂತೆ ನಡೆದಿದ್ದಾರೆ. ಆದರೂ ಅವರ ಮೇಲೆ ಅನುಮಾನ ಪಡುವುದು ಸರಿಯಲ್ಲ ಎಂದು ಇಬ್ಬರಿಗೂ ಬುದ್ಧಿವಾದ ಹೇಳಿದರು ಎನ್ನಲಾಗಿದೆ.

    ಇದನ್ನೂ ಓದಿರಿ ಈ ವರ್ಷದ 2ನೇ ಚಂದ್ರಗ್ರಹಣ ಹೀಗಿತ್ತು ನೋಡಿ..!

    ಈ ಬಗ್ಗೆ ಮಾತನಾಡಿರುವ ಅನಸೂಯ, ಈ ಹಿಂದೆ ನಾನು ಗ್ರಾಪಂ ಅಧ್ಯಕ್ಷೆಯಾಗಲು ಮಂಜುಳಾ ಬೆಂಬಲಿಸಿದ್ದರು. ಅದರಂತೆ ಈಗ ಅವರ ಪರವಾಗಿ ಮತ ಚಲಾಯಿಸಿದ್ದೇನೆ. ಆದರೂ ಶ್ರೀರಾಮಪುರ ವೃತ್ತದಲ್ಲಿ ಗಲಾಟೆ ಮಾಡಿ, ಕರೆನಳಮ್ಮ ದೇವಾಲಯ ಮತ್ತು ಗೂಬೆಕಲ್ಲಮ್ಮ ದೇವಾಲಯದಲ್ಲಿ ಕರ್ಪೂರ ಹಚ್ಚಿಸಿ ಪ್ರಮಾಣ ಮಾಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಅಲ್ಲದೆ ನನ್ನ ಮನೆ ಬಳಿ ಜೆಡಿಎಸ್​ ಮುಖಂಡರಾದ ಎಂ.ಎನ್​. ಪ್ರಕಾಶ್​, ಉಪಾಧ್ಯಕ್ಷ ಮಧು, ಸದಸ್ಯೆ ರತ್ನಮ್ಮ ಪತಿ ಗಂಗರಾಜು ಮತ್ತು ಮಂಜುಳಾ ನಾಗರಾಜು ಸೇರಿ ಸುಮಾರು 50 ಬೆಂಬಲಿಗರನ್ನು ಕರೆತಂದು ಮಾನಸಿಕ ಹಿಂಸೆ ನೀಡಿದರು. ಅಲ್ಲೂ ಗಲಾಟೆ ಮಾಡಲು ಮುಂದಾದರು ಎಂದು ಅನಸೂಯ ದೂರಿದರು. ಪೊಲೀಸರು ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

    ಇದನ್ನೂ ಓದಿರಿ ಬಂಡೀಪುರದಲ್ಲಿ ಜೂನ್​ 8ರಿಂದ ಸಫಾರಿ ಆರಂಭ; ಪ್ರವಾಸಿಗರು ಷರತ್ತುಗಳನ್ನು ಪಾಲಿಸುವುದು ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts