More

    ಯುವ ಪೀಳಿಗೆ ಗಮಕ ಕಲೆ ಉಳಿಸಿ, ಬೆಳೆಸಬೇಕಿದೆ

    ಮೈಸೂರು: ಕಾವ್ಯ ಕಲೆ ಮತ್ತು ಗಾನ ಕಲೆಯನ್ನು ಒಗ್ಗೂಡಿಸುವುದೇ ಗಮಕ ಕಲೆ. ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಅದನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಈಗಿನ ಯುವ ಪೀಳಿಗೆಯ ಮೇಲಿದೆ ಎಂದು ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್ ಹೇಳಿದರು.


    ಪರಂಪರೆ ಸಂಸ್ಥೆ ವತಿಯಿಂದ ಲಕ್ಷ್ಮೀಪುರಂನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಕೃ.ರಾಮಚಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಈಗ ಸಂಸ್ಕೃತ ಕಾವ್ಯಗಳನ್ನು ಆಯಾ ಛಂದಸ್ಸಿನಲ್ಲಿ ಓದುವ, ಹೇಳುವ ಪದ್ಧತಿ ಇದೆ. ರಾಗ ಸಂಯೋಜನೆ ಮಾಡಿ ಹೇಳುವ ಪದ್ಧತಿಯೂ ಇದೆ. ಈ ಗಮಕ ವಾಚನ ಕ್ರಮ ಅಥವಾ ಕಾವ್ಯಗಳನ್ನು, ರಾಗ, ಶ್ರುತಿಬದ್ಧವಾಗಿ ತಾಳದ ಹಂಗಿಲ್ಲದೆ ಹಾಡುವ ಪದ್ಧತಿ ಕನ್ನಡಕ್ಕೆ ಮಾತ್ರ ವಿಶಿಷ್ಟವಾದುದು. ಬೇರೆ ಯಾವ ಭಾರತೀಯ ಭಾಷೆಗಳಲ್ಲೂ ಇದು ಕಾಣುವುದಿಲ್ಲ ಎಂದರು.


    ಕೃಷ್ಣಗಿರಿ ಕೃಷ್ಣರಾಯರು ಗಮಕ ಕಲೆ ಬೆಳೆಸಿದರು, ಮೈಸೂರಿನಲ್ಲಿ ಇದು ಬೇರೂರಲು ಶ್ರಮಿಸಿದವರು. ಅದಕ್ಕಾಗಿ ನೂರಾರು ವಿದ್ಯಾರ್ಥಿಗಳಿಗೆ ಈ ಕಲೆಯನ್ನು ಕಲಿಸಿ ಬೆಳೆವಣಿಗೆಗೆ ಕಾರಣರಾದರು. ಲಲಿತ ಕಲೆಯಲ್ಲೇ ಶ್ರೇಷ್ಠ ಕಲೆಯಾಗಿ ಗಮಕವನ್ನು ರೂಪಿಸಿದವರು. ಅವರ ಪುತ್ರ ಕೃ.ರಾಮಚಂದ್ರ ಸಹ ತಂದೆ ತೋರಿದ ದಾರಿಯಲ್ಲೇ ಸಾಗಿ ಈ ಕಲೆಯ ಪ್ರಗತಿಗೆ ನೀರೆರೆದರು ಎಂದರು.


    ಕಾವ್ಯ ವಾಚನದಲ್ಲಿ ನವ ಪ್ರಯೋಗ ಮಾಡಿರುವ ಕೃ.ರಾಮಚಂದ್ರ ಅವರು ಪ್ರಾಚೀನ- ಅವಾರ್ಚೀನ ಕಾವ್ಯವನ್ನು ಜನಮಾಸಕ್ಕೆ ತಲುಪಿಸಿದ್ದಾರೆ ಎಂದರು.
    ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಇನ್ನಿತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts