More

    ವಿಶ್ವದ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ

    ಕನಕಗಿರಿ: ಬಸವಣ್ಣ ಅವರ ಕ್ರಾಂತಿಕಾರಿ ವಿಚಾರಗಳು ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಲು ಪ್ರೇರಣೆಯಾಗಿದ್ದವು ಎಂದು ತಾಪಂ ಇಒ ಚಂದ್ರಶೇಖರ ಕಂದಕೂರು ಹೇಳಿದರು.

    ಇದನ್ನೂ ಓದಿ: ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ

    ಪಟ್ಟನದ ತಾಪಂ ಕಚೇರಿಯಲ್ಲಿ ನಡೆದ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
    ಅಸ್ಪಶ್ಯರರೊಂದಿಗೆ ಊಟ ಮಾಡಿ, ಅಂತರ್ಜಾತಿ ವಿವಾಹವನ್ನು ಮೆಚ್ಚಿದ್ದರಿಂದ ಸಮಾಜದಲ್ಲಿನ ಜಾತಿ ವ್ಯವಸ್ಥೆ ನಂಬುವವರ ಕೋಪಕ್ಕೆ ಕಾರಣರಾಗಿದ್ದರು. ರಾಜ ಬಿಜ್ಜಳ ಜಾತಿ ವ್ಯವಸ್ಥೆ ಒಪ್ಪುವಂತೆ ಬಸವಣ್ಣನವರಿಗೆ ಸೂಚಿಸಿದರು.

    ಇದನ್ನು ಒಪ್ಪದ ಬಸವಣ್ಣ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಾಲು ಮುಂದಾದರು. ಅನುಭವ ಮಂಟಪ ಸ್ಥಾಪಿಸಿ, ಮಹಿಳೆಯರಿಗೆ ಸ್ಥಾನ ಕಲ್ಪಿಸುವ ಮೂಲಕ ವಿಶ್ವದ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿಯಾದರು.

    ರಾಜ್ಯ ಸರ್ಕಾರ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿಸಿರುವುದು ಇಡೀ ಕನ್ನಡ ನಾಡು ಖುಷಿ ಪಡುವ ಸಂಗತಿ ಎಂದರು. ತಾ.ಪಂ ವಿಷಯ ನಿರ್ವಾಹಕರಾದ ಕೆ.ಪವನಕುಮಾರ್, ಕೊಟ್ರಯ್ಯಸ್ವಾಮಿ, ಯಂಕೋಬ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts