More

    ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ

    ಮುರಗುಂಡಿ: ಭಾರತದ ಲಿಖಿತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ. ಇಂತಹ ಶ್ರೇಷ್ಠ ಸಂವಿಧಾನದ ಬಗ್ಗೆ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಿದೆ ಎಂದು ತಹಸೀಲ್ದಾರ್ ವಾಣಿ ಹೇಳಿದರು.

    ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಶುಕ್ರವಾರ ಬರಮಾಡಿಕೊಂಡು ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನ ಮೇಲು, ಕೀಳು, ಬಡವ, ಶ್ರೀಮಂತ, ವಿದ್ಯಾವಂತ, ಅವಿದ್ಯಾವಂತ ಎನ್ನುವ ಭೇದ-ಭಾವ ಇಲ್ಲದೆ ಎಲ್ಲರಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯ ನೀಡಿದೆ ಎಂದರು.

    ತಾಪಂ ಇಒ ಶಿವಾನಂದ ಕವಲಾಪುರ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಜಿಪಂ ಅಧಿಕಾರಿ ವೀರಣ್ಣ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಕಾಟಕರ, ಉಪಾಧ್ಯಕ್ಷೆ ಶೋಭಾ ಪಾಟೀಲ, ಸದಸ್ಯರಾದ ನೀಲವ್ವ ಕರಸಿದ್ದಗೊಳ, ಮುತ್ತಪ್ಪ ಮಗಾಡಿ, ಪಿಡಿಒ ಸಂತೋಷ ನಿಡೋಣಿ, ಗ್ರಾಮ ಲೆಕ್ಕಾಧಿಕಾರಿ ಸುನಿತಾ ಕಾಂಬ್ಳೆ, ಧುರೀಣರಾದ ಅಜಿತ ಗಸ್ತಿ, ಅಪ್ಪು ಗುರವ, ಕೆ.ಟಿ.ಮಾಳಿ, ರವೀಂದ್ರ ಕಡಾಕಡಿ, ಪ್ರಕಾಶ ಕಾಂಬ್ಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts