More

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಗೋಳಾಟ

    ಶ್ರೀಧರ ಅಡಿ ಗೋಕರ್ಣ
    ಗ್ರಾಮಾಂತರ ಭಾಗದಲ್ಲಿ ಕರೊನಾ ರೋಗ ಪತ್ತೆ ಮಾಡುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರ ಟಾರ್ಗೆಟ್ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೋಕರ್ಣ ಸೇರಿ ಈ ಭಾಗದ ಹೆಚ್ಚಿನ ಪಿಎಚ್​ಸಿಗಳಿಗೆ ರೋಗಿಗಳು ಬರುವುದನ್ನೇ ನಿಲ್ಲಿಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಬರುವವರ ಗಂಟಲ ದ್ರವ ಪರೀಕ್ಷೆ ನಡೆಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪರೀಕ್ಷೆ ಮಾಡಿದಾಗ ಎಲ್ಲಿ ಪಾಸಿಟಿವ್ ಬರುವುದೋ ಎಂದು ಜನರು ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
    ನಿಂತ ಜನರ ಓಡಾಟ: ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ನಿತ್ಯ 150ಕ್ಕಿಂತ ಹೆಚ್ಚು ರೋಗಿಗಳು ಬರುತ್ತಿದ್ದರು. ಈಗ ಈ ಸಂಖ್ಯೆ 10ಕ್ಕೆ ಇಳಿದಿದೆ. ಇದೇ ರೀತಿ ಹತ್ತಿರದ ಬಂಕಿಕೊಡ್ಲದಲ್ಲಿನ ಆರೋಗ್ಯ ಕೇಂದ್ರದಲ್ಲಿಯೂ ಜನರ ಸಂಖ್ಯೆ ಕಡಿಮೆಯಾಗಿದೆ. ಮೊದಲೆಲ್ಲ ಪ್ರತಿದಿನ ಕನಿಷ್ಠ 50 ಜನ ಬರುತ್ತಿದ್ದರೆ, ಈಗ ನಾಲ್ಕೈದು ಜನರಷ್ಟೇ ಬರುತ್ತಿದ್ದಾರೆ. ಥಂಡಿ, ಜ್ವರ, ಮೈಕೈ ನೋವು ಇದ್ದವರಂತೂ ಪಿಎಚ್​ಸಿ ಕಡೆ ತಪ್ಪಿಯೂ ಮುಖ ಹಾಕುತ್ತಿಲ್ಲ.
    ಪ್ರತಿ ಪಿಎಚ್​ಸಿಗಳಿಗೆ ಕನಿಷ್ಠ 60 ಜನರ
    ಸ್ವ್ಯಾಬ್ ಟೆಸ್ಟ್ ಮಾಡಿ ಮಾಹಿತಿ ಜಿಲ್ಲಾಸ್ಪತ್ರೆಗೆ ರವಾನಿಸುವ ಗುರಿ ನೀಡಲಾಗಿದೆ. ಆದರೆ, ಆ ಪ್ರಮಾಣದಲ್ಲಿ ಜನ ಬಾರದಿರುವುರಿಂದ ಗುರಿ ಮುಟ್ಟಲಾಗದೆ ವೈದ್ಯರು ಗೋಳಿಡುವ ಪರಿಸ್ಥಿತಿ ಎದುರಾಗಿದೆ.
    ಈ ಸಮಸ್ಯೆ ಬಗ್ಗೆ ಸ್ಥಳೀಯ ಕರೊನಾ ಕಾರ್ಯಪಡೆ ರ್ಚಚಿಸಿ ಖಾಸಗಿ ವೈದ್ಯರ ಸಹಕಾರ ಕೋರಿತು. ಅನೇಕ ಖಾಸಗಿ ವೈದ್ಯರು ತಮ್ಮಲ್ಲಿ ಚಿಕಿತ್ಸೆಗೆ ಬರುವವರ ವಿವರ ಕೂಡ ನೀಡಿ ಸಹಕರಿಸಿದರು. ಆದರೆ, ಹಾಗೆ ನೀಡಲಾದ ಪಟ್ಟಿಯಲ್ಲಿ ಕೆಲವು ಹೆಸರು ಮತ್ತು ಮೊಬೈಲ್ ನಂಬರ್ ತಾಳೆಯಾಗದೆ
    ಲಿಸ್ಟ್​ನಲ್ಲಿದ್ದವರ ಬಗ್ಗೆ ನಿಖರತೆ ಪಡೆಯಲಾಗದೆ ಆರೋಗ್ಯ ಇಲಾಖೆ ಪರದಾಡುವಂತಾಯಿತು. ಇದಕ್ಕೆ ಕಾರಣ ಖಾಸಗಿ ಕ್ಲಿನಿಕ್​ಗೆ ಹೆಸರು ಕೊಟ್ಟವರು ತಪ್ಪು ಮಾಹಿತಿ ನೀಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಖಾಸಗಿ ಕ್ಲಿನಿಕ್​ಗಳಿಂದ ಲಿಸ್ಟ್ ಪಡೆಯುವದನ್ನು ಕೈಬಿಟ್ಟು ಟಾಸ್ಕ್ ಪೋೕರ್ಸ್ ನಿರ್ಣಯದಂತೆ ಕ್ಲಿನಿಕ್ ಮತ್ತು ಮನೆ, ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಮತ್ತು ತಜ್ಞರು ಹೋಗಿ ಸ್ವ್ಯಾಬ್ ಪಡೆಯುವ ಕ್ರಮವನ್ನು ಜಾರಿಗೆ ತರಲಾಯಿತು. ಇದರ ಜೊತೆಗೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಆರೋಗ್ಯದ ಬಗ್ಗೆ ವಿವರ ಪಡೆದು ದಾಖಲಿಸುತ್ತಿದ್ದಾರೆ.
    ಕಳೆದ ಎರಡು ದಿನಗಳಿಂದ ಆರೋಗ್ಯ ಕಾರ್ಯಕರ್ತೆಯರು ಊರೆಲ್ಲ ಸುತ್ತಿ ಜಾಗೃತಿ ಮೂಡಿಸುವ ಜೊತೆಗೆ ಸ್ವ್ಯಾಬ್ ಸಂಗ್ರಹಿಸುವ ಕಾರ್ಯದಲ್ಲಿದ್ದಾರೆ. ಇದರಿಂದ ನಿತ್ಯ 40ಕ್ಕೂ ಹೆಚ್ಚು ಜನರ ಸ್ವ್ಯಾಬ್ ಪಡೆಯಲು ಸಾಧ್ಯವಾಗುತ್ತಿದೆ.

    ಪ್ರವಾಸಿ ಕೇಂದ್ರ ಗೋಕರ್ಣ ಮತ್ತು ಸುತ್ತಮುತ್ತ ಕರೊನಾ ಪರೀಕ್ಷೆ ಹೆಚ್ಚು ಹೆಚ್ಚು ಮಾಡುವುದರಿಂದ ಮಾತ್ರ ಇದನ್ನು ಸಮೂಹಕ್ಕೆ ಹರಡದಂತೆ ಹಿಮ್ಮೆಟ್ಟಿಸ ಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪಿಎಚ್​ಸಿ ಟಾಸ್ಕ್ ಫೋರ್ಸ್ ಸಹಕಾರದಿಂದ ವಿವಿಧ ರೀತಿಯಲ್ಲಿ ಪರೀಕ್ಷೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಸಂಬಂಧಿಸಿದ ಎಲ್ಲರ ಸಹಕಾರದಿಂದ ಮಾತ್ರ ಈ ಅಭಿಯಾನ ಯಶಸ್ವಿಯಾಗುತ್ತದೆ.
    | ಡಾ. ಜಗದೀಶ ನಾಯ್ಕ ಆರೋಗ್ಯಾಧಿಕಾರಿಗಳು ಗೋಕರ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts