More

    ಕನಕದಾಸರು ಸಮಾನತಾವಾದಿ, ಪರಿಸರವಾದಿ

    ಧಾರವಾಡ: ಸನ್ಮಾರ್ಗ, ಭಕ್ತಿ ಮಾರ್ಗದ ಮೂಲಕ ತಮ್ಮ ವಿಚಾರವನ್ನು ಸಮಾಜಕ್ಕೆ ಧಾರೆ ಎರೆದ ಕನಕದಾಸರು ಸಮಾನತಾವಾದಿ ಮತ್ತು ದಾರ್ಶನಿಕರಷ್ಟೇ ಅಲ್ಲ, ಮಹಾನ್ ಪರಿಸರ ಚಿಂತಕರೂ ಆಗಿದ್ದರು ಎಂದು ಪರಿಸರವಾದಿ ಹಾಗೂ ಚಲನಚಿತ್ರ ನಟ, ನಿರ್ದೇಶಕ ಸುರೇಶ ಹೆಬ್ಳೀಕರ ಅಭಿಪ್ರಾಯಪಟ್ಟರು.

    ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

    ಕನಕದಾಸರು ತಮ್ಮ ಸಾಹಿತ್ಯದಲ್ಲಿ ಕಲ್ಲು, ಮಣ್ಣು, ನೀರು, ಗಾಳಿ ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಸಾರಿ ಹೇಳಿದ್ದಾರೆ. ಅವರು ಜೀವನ ಹಾಗೂ ಸೃಷ್ಟಿಯ ಬಗ್ಗೆ ಅಪಾರ ಅನುಭವ ಹೊಂದಿದ್ದರು. ಜೀವನಸಾರದ ಎಲ್ಲ ಆಯಾಮ, ಮಗ್ಗುಲಗಳನ್ನು ಅರಿತಿದ್ದ ಅವರ ಸಂದೇಶಗಳು ಜೀವನಕ್ಕೆ ಅನ್ವಯವಾಗುತ್ತವೆ. ಪೃಥ್ವಿ ಪರಿಸರಗಳ ಬಗ್ಗೆ ಅವರ ಚಿಂತನೆ, ದೃಷ್ಟಿಕೋನ ಮತ್ತು ವಿಚಾರಧಾರೆಗಳು, ಸೃಷ್ಟಿ, ದೈವ, ಕರ್ಮಗಳ ಬಗ್ಗೆ ಅಪಾರ ಭಕ್ತಿ ದಾಸ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿದೆ ಎಂದರು.

    ಕುಲಪತಿ ಡಾ. ಮಹದೇವ ಚೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರೇಖಾ ಸಂಕನಗೌಡರ ನಿರೂಪಿಸಿದರು. ಶಿಕ್ಷಣ ನಿರ್ದೇಶಕ ಎಸ್.ವಿ. ಹೊಸಮನಿ ಸ್ವಾಗತಿಸಿದರು. ಕುಲಸಚಿವ ವಿ.ಆರ್. ಕಿರೇಸೂರ ವಂದಿಸಿದರು. ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts