More

    ಮರ ಬಿದ್ದು ಮನೆ ಜಖಂ

    ಕಳಸ: ತೋಟದೂರು ಗ್ರಾಮ ಪಂಚಾಯಿತಿ ಕಗ್ಗನಳ್ಳ ಗ್ರಾಮದ ಗಿರಿಜಾ ಎಂಬುವವರ ಮನೆ ಮೇಲೆ ಮರಬಿದ್ದು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮನೆ ಜಖಂಗೊಂಡಿದೆ.

    ಶುಕ್ರವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಮನೆ ಹಿಂದೆ ಬೃಹತ್ ಗಾತ್ರದ ಮರ ಬಿದ್ದಿದೆ. ಶಬ್ದ ಕೇಳಿದ ಅಕ್ಕಪಕ್ಕದ ಮನೆಯವರು ಬಂದು ಮನೆಯಲ್ಲಿದ್ದವರನ್ನು ರಕ್ಷಿಸಿದರು. ಸ್ಥಳೀಯರು ಹಾಗೂ ಶೌರ್ಯ ವಿಪತ್ತು ಕಾರ್ಯಕರ್ತರು ಮರ ತೆರವುಗೊಳಿಸಿದರು.
    ಕೆಲ ದಿನಗಳ ಹಿಂದೆಯಷ್ಟೆ ಮನೆ ದುರಸ್ತಿ ಮಾಡಿದ್ದೆವು. ಮರ ಬಿದ್ದು ಮನೆ ಜಖಂಗೊಂಡಿದೆ. ಪಾತ್ರೆ ಇತರ ಸಾಮಗ್ರಿಗಳೂ ಹಾಳಾಗಿವೆ ಎಂದು ಗಿರಿಜಾ ಅಳಲು ತೋಡಿಕೊಂಡರು.
    ಮನೆ ಸಮೀಪ ಬಹಳಷ್ಟು ಮರಗಳಿವೆ. ಪ್ರತಿ ವರ್ಷ ಮನೆ ಮೇಲೆ ಮರಗಳು ಬಿದ್ದು ಅನಾಹುತ ಸಂಭವಿಸುತ್ತಲೇ ಇದೆ. ಅರಣ್ಯ ಇಲಾಖೆ ಮನೆ ಸಮೀಪದ ಮರಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥ ಶ್ರೀಧರ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts