More

    ಮೂರು ವಹಿವಾಟಿನ ದಿನಗಳ ಅವಧಿಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕಳೆದುಕೊಂಡದ್ದು 71 ಪೈಸೆ

    ಮುಂಬೈ: ಅಮೆರಿಕ-ಇರಾನ್ ನಡುವಿನ ಸಂಘರ್ಷ ಮಧ್ಯಪ್ರಾಚ್ಯದಲ್ಲಿ ಹೊಸ ಯುದ್ಧ ಭೀತಿಯನ್ನು ಸೃಷ್ಟಿಸಿದ್ದು, ಅದು ಕರೆನ್ಸಿ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಇಂಟರ್​ಬ್ಯಾಂಕ್ ಫಾರಿನ್ ಎಕ್ಸ್​ಚೇಂಜ್​ನಲ್ಲಿ ಸೋಮವಾರದ ವಹಿವಾಟಿ ಪ್ರಕಾರ, ಭಾರತೀಯ ರೂಪಾಯಿ ಅಮೆರಿಕದ ಡಾಲರ್ ಎದುರು 13 ಪೈಸೆ ಕುಸಿತ ಕಂಡಿದ್ದು, 71.93 ದರದಲ್ಲಿ ವಹಿವಾಟು ಮುಗಿಸಿದೆ.

    ಸೋಮವಾರದ ವಹಿವಾಟು ಆರಂಭವಾದಾಗ ಅಮೆರಿಕದ ಡಾಲರ್ ಎದುರು ರೂಪಾಯಿ ದರ 72.03 ಆಗಿತ್ತು. ಇಂಟ್ರಾ ಡೇ ವಹಿವಾಟಿನಲ್ಲಿ ಇದು ಕನಿಷ್ಠ ಮಟ್ಟ ಅಂದರೆ 72.11ರ ದರವನ್ನೂ ತಲುಪಿತ್ತು.ಆದಾಗ್ಯೂ, ದಿನದ ವಹಿವಾಟಿನ ಕೊನೆಗೆ ಕೊಂಚ ಚೇತರಿಕೆ ದಾಖಲಿಸಿದ್ದು, 71.93ರ ದರದಲ್ಲಿ ವಹಿವಾಟು ಅಂತ್ಯಗೊಳಿಸಿದೆ.

    ಶುಕ್ರವಾರದ ವಹಿವಾಟಿನ ವೇಳೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 71.80 ಆಗಿತ್ತು. ಕಳೆದ ಮೂರು ದಿನಗಳ ಅವಧಿಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಕಳೆದುಕೊಂಡ ಮೌಲ್ಯ 71 ಪೈಸೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts