More

    ಬೆಳೆಸಿದವರನ್ನು ಹೀಯಾಳಿಸುವ ಪ್ರವೃತ್ತಿ ಸರಿಯಲ್ಲ

    ಕೆ.ಆರ್.ಸಾಗರ: ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಸ್ಪರ್ಧೆ ಮಾಡಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮರೆತಂತಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.

    ಕೆ.ಆರ್.ಸಾಗರದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಸಚಿವರು ಜಿಲ್ಲೆಯವರಾದರೂ ಇಲ್ಲಿನ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಕೊಡಲು ಆಗಲಿಲ್ಲ. ಬೆಳೆಸಿದವರನ್ನು ಹೀಯಾಳಿಸುವ ಪ್ರವೃತ್ತಿ ಇವರದ್ದು. ಕುಮಾರಸ್ವಾಮಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆಂಬುದು ರೈತರಿಗೆ ಗೊತ್ತಿದೆ ಎಂದರು.

    ಶ್ರೀರಂಗಪಟ್ಟಣ ಶಾಸಕರು ದ್ವೇಷ ರಾಜಕಾರಣವನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ, ನೂರಾರು ವರ್ಷಗಳಿಂದ ವಾಸವಿದ್ದ ಜನರಿಗೆ ಹಕ್ಕು ಪತ್ರ ನೀಡಿದ್ದನ್ನು ಸದನದಲ್ಲಿ ಪ್ರಶ್ನಿಸಿ ತನಿಖೆ ಮಾಡಿಸಿದ್ದಾರೆ. ತನಿಖೆ ಮಾಡಿದ ಅಧಿಕಾರಿಗಳು ಜನರಿಗೆ ನೀಡಿದ ಹಕ್ಕುಪತ್ರದಲ್ಲಿ ಯಾವುದೇ ಲೋಪವಿಲ್ಲ ಎಂದರೂ ಜನರಿಗೆ ಖಾತೆ ಮಾಡದಂತೆ ತಡೆ ಹಿಡಿದ್ದಿದ್ದಾರೆ. ಹಲವಾರು ವರ್ಷಗಳಿಂದ ಗುತ್ತಿಗೆ ಮಾಡುತ್ತಿದ್ದ 6 ನೌಕರರನ್ನು ಕೆಲಸದಿಂದ ಮಾಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ದಶರಥ, ಮುಖಂಡರಾದ ಲೋಕೇಶ್, ನಾಗೇಂದ್ರಕುಮಾರ್, ಗ್ರಾಪಂ ಉಪಾಧ್ಯಕ್ಷ ರವಿಶಂಕರ್, ಮುಖಂಡರಾದ ಮಹದೇವ, ವಿಷಕಂಠ, ಸಿಂಗೇಗೌಡ, ಸಿ.ಮಂಜುನಾಥ್, ರವಿನಾರಯಣ, ಜಯಂತಿ, ನರಸಿಂಹ, ಪ್ರಕಾಶ್, ಮಂಜುನಾಥ್, ಭರತ್, ಕಾರ್ತಿಕ್, ಲೊಕೇಶ್ ಮಂಗಳ, ಬಂಗಾರಿ ಶಿವಣ್ಣ, ಸೂರಿ ಇತರರು ಇದ್ದರು.

    ಗ್ರಾಪಂ ಸದಸ್ಯೆ ಜೆಡಿಎಸ್‌ಸೇರ್ಪಡೆ: ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿದ್ದ ಶಶಿಕಲಾ ಮತ್ತವರ ಬೆಂಬಲಿಗರು ಜೆಡಿಎಸ್ ಸೇರ್ಪಡೆಯಾದರು.

     

    13-04ಞಡಿ1

    ಹೆಚ್.ಡಿ. ಕುಮಾರಸ್ವಾಮಿ ಪರ ಬೆಳಗೊಳ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಮುಖಂಡರ ಸಭೇ ನಡೆಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts