More

    ಪೈಗಂಬರರ ಬೋಧನೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ


    ಕೊಡಗು : ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆದರ್ಶ ಮತ್ತು ಬೋಧನೆ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿಹಾಜಿ ಹೇಳಿದರು.


    ಮಹಮ್ಮದ್ ಪೈಗಂಬರ್ ಅವರ ಜನ್ಮ ಮಾಸಾಚರಣೆ ಅಂಗವಾಗಿ ಈದ್‌ಮಿಲಾದ್ ಸಂರಕ್ಷಣಾ ಸಮಿತಿ ವತಿಯಿಂದ ವಿರಾಜಪೇಟೆ ಸಮೀಪದ ನಲ್ವತ್ತೋಕ್ಲಿನಲ್ಲಿ ಭಾನುವಾರ ನಡೆದ ಕಂದೂರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


    ಪ್ರವಾದಿ ಅವರ ಶಾಂತಿ ಸಂದೇಶದ ಬೋಧನೆಯಿಂದ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದರೆ ಅದು ಸಮಾಜದಲ್ಲಿ ಮತ್ತಷ್ಟು ಭಾವೈಕ್ಯತೆ ಮೂಡಲು ನೆರವಾಗುತ್ತದೆ. 1400 ವರ್ಷಗಳ ಹಿಂದೆಯೇ ಸರ್ವಧರ್ಮ ಸಮನ್ವಯತೆ ಮತ್ತು ಸಮಸಮಾಜದ ತತ್ವವನ್ನು ಬೋಧಿಸಿದ ಹಾಗೂ ಇಂದಿಗೂ ಕೋಟ್ಯಂತರ ಜನರು ಹೃದಯದಿಂದ ಪ್ರೀತಿಸುತ್ತಿರುವ ಪ್ರವಾದಿ ಮೊಹಮ್ಮದ್ ಅವರ ದಿವ್ಯ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ ಎಂದರು.


    ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಮುಬಸ್ಸಿರ್ ಅಹಸನಿ ಕಾಮಿಲ್ ಕಾರ್ಯಕ್ರಮ ಉದ್ಘಾಟಿಸಿದರು. ನೌಫಲ್ ಸಖಾಫಿ ಕಳಸ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಪಿ.ಎ.ಹನೀಫ್, ನಲ್ವತ್ತೋಕ್ಲಿನ ಕುತ್ಬಿಯತ್ ಸಂಘದ ಅಧ್ಯಕ್ಷ ಕೆ.ಎ.ಸುಬೈರ್, ನಲ್ವತ್ತೋಕ್ಲಿನ ರಾತೀಬ್ ತಂಡದ ಖಲೀಫರಾದ ಎಂ.ಎಚ್.ಅಹಮದ್, ಕಾಂಗ್ರೆಸ್ ಮುಖಂಡರಾದ ಚಿಲ್ಲವಂಡ ಕಾವೇರಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts